ಗೆಳೆಯರ ರಕ್ತವನ್ನು ಮೈಗೆ ಮೆತ್ತಿಕೊಂಡು ಸತ್ತೋದಂತೆ ನಟಿಸಿದೆ – ಅಪ್ಪ ಅವನು ಮತ್ತೆ ಬರ್ತಾನೆ: ಶಾಕ್‍ಗೆ ಒಳಗಾದ ಬಾಲಕಿ

ವಾಷಿಂಗ್ಟನ್: ಅಮೆರಿಕಾದ ಟೆಕ್ಸಾಸ್‍ನಲ್ಲಿರುವ ರಾಬ್ ಎಲಿಮೆಂಟರಿ ಶಾಲೆಯಲ್ಲಿ ಬಂದೂಕುಧಾರಿಯಿಂದ ಶೂಟೌಟ್ ಪ್ರಕರಣದಲ್ಲಿ 19 ವಿದ್ಯಾರ್ಥಿಗಳು ಹಾಗೂ ಇತರೆ 2 ಶಿಕ್ಷಕರು ಬಲಿಯಾಗಿದ್ದರು. ಈ ವೇಳೆ ಬದುಕುಳಿದ ನಾಲ್ಕನೇ ತರಗತಿಯ 11 ವರ್ಷದ ಬಾಲಕಿ ಮಿಯಾ ಸೆರಿಲ್ಲಾ ತನ್ನ ತಂದೆಗೆ ಘಟನೆಯ ಬಗ್ಗೆ ವಿವರಿಸಿ ಕಣ್ಣೀರಿಟ್ಟಿದ್ದಾಳೆ.

ಅಪ್ಪ ನಮ್ ಟೀಚರ್, ಗೆಳೆಯರನ್ನು ಆತ ಕೊಂದುಬಿಟ್ಟ. ನನ್ನನ್ನು ಕೊಲ್ತಾನೇನೋ ಎಂಬ ಭಯ ಆಯ್ತು. ಕೂಡ್ಲೇ ಗೆಳೆಯರ ರಕ್ತವನ್ನು ಮೈಗೆ ಮೆತ್ತಿಕೊಂಡು ಕೆಳಗೆ ಬಿದ್ದು ಸತ್ತೋದಂತೆ ನಟಿಸಿದೆ. ನಂತರ ಆತ ಕ್ಲಾಸ್‍ರೂಂನಿಂದ ಹೊರಗೆ ಹೋದ. ಕೂಡ್ಲೇ ನಾನು ಮೇಡಂ ಫೋನ್ ತಗೊಂಡು 911ಕ್ಕೆ ಕರೆ ಮಾಡಿದೆ ಎಂದು ಟೆಕ್ಸಾಸ್ ನರಮೇಧದಲ್ಲಿ ಬದುಕುಳಿದ ಮಿಯಾ ಸೆರಿಲ್ಲಾ ತಂದೆಯೊಂದಿಗೆ ಹೇಳಿಕೊಂಡಿದ್ದಾಳೆ. ಇದನ್ನೂ ಓದಿ: ಗುಂಡಿನ ದಾಳಿಗೆ 21 ಬಲಿ ಪ್ರಕರಣದ ಬೆನ್ನಲ್ಲೇ ರೈಫಲ್ ಹಿಡಿದು ಕಾಣಿಸಿಕೊಂಡ ಮತ್ತೊಬ್ಬ ವಿದ್ಯಾರ್ಥಿ

ನಿದ್ದೆಯಲ್ಲೂ ಈ ಕರಾಳ ಘಟನೆ ಬಗ್ಗೆ ಕನವರಿಸುವ ಮೀಯಾ, ಅಪ್ಪ ನೀನು ಗನ್ ತಂದ್ಕೋಡು ಅವನು ಮತ್ತೆ ಬರ್ತಾನೆ ಅಂತಾಳೆ. ಇದನ್ನು ಕೇಳಿ ತಂದೆ ಕಣ್ಣೀರಿಟ್ಟಿದ್ದಾರೆ. ಮೇ 25ರಂದು ಸಾಲ್ವಡೆರ್ ರೊಮೊಸ್ (18) ಎಂಬಾತ ಟೆಕ್ಸಾಸ್‍ನಲ್ಲಿರುವ ರಾಬ್ ಎಲಿಮೆಂಟರಿ ಶಾಲೆಯಲ್ಲಿ ಏಕಾಏಕಿ ಗುಂಡಿನ ಮಳೆಗರೆದಿದ್ದಾನೆ. ಘಟನೆಯಲ್ಲಿ ಒಟ್ಟಾರೆಯಾಗಿ 21 ಜನರು ಮೃತಪಟ್ಟಿದ್ದಾರೆ. ಅಷ್ಟೇ ಅಲ್ಲದೇ ಭದ್ರತಾ ಸಿಬ್ಬಂದಿ ಪ್ರತಿದಾಳಿಯಲ್ಲಿ ಆತ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಇದನ್ನೂ ಓದಿ: ಶೂಟೌಟ್‍ಗೂ ಮೊದಲೇ ಇನ್‍ಸ್ಟಾಗ್ರಾಮ್‍ನಲ್ಲಿ ಗನ್‍ಗಳ ಚಿತ್ರ ಪೋಸ್ಟ್ ಮಾಡಿದ್ದ ಆರೋಪಿ

Comments

Leave a Reply

Your email address will not be published. Required fields are marked *