ಸ್ಯಾಂಡಲ್ವುಡ್ ನಟಿ ಶೃತಿ ಹರಿಹರನ್ ಚಿತ್ರರಂಗಕ್ಕೆ ಮತ್ತೆ ಕಮ್ಬ್ಯಾಕ್ ಆಗಿದ್ದಾರೆ. ಸಾಲು ಸಾಲು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಡುವ ಮೂಲಕ ಶ್ರುತಿ ಮತ್ತೆ ಸುದ್ದಿಯಲ್ಲಿದ್ದಾರೆ.

`ಲೂಸಿಯಾ’ ಚಿತ್ರದಲ್ಲಿ ಸತೀಶ್ ನೀನಾಸಂಗೆ ನಾಯಕಿಯಾಗುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದ ನಟಿ ಶೃತಿ ಹರಿಹರನ್, ಕನ್ನಡ ಮತ್ತು ಪರಭಾಷಾ ಚಿತ್ರಗಳಲ್ಲೂ ಬಿಗ್ ಸ್ಟಾರ್ಗಳ ಜೊತೆ ತೆರೆಹಂಚಿಕೊಂಡಿರೋ ಪ್ರತಿಭಾವಂತ ನಾಯಕಿ ಶೃತಿ ಮತ್ತೆ ಚಿತ್ರರಂಗದಲ್ಲಿ ಹೊಸ ಚಿತ್ರಗಳ ಮೂಲಕ ಸದ್ದು ಮಾಡ್ತಿದ್ದಾರೆ. ಇದನ್ನೂ ಓದಿ: ತಮ್ಮದೇ ಹೆಸರಿನ ಚಿತ್ರದಲ್ಲಿ ತೆಲುಗಿನ ಸ್ಟಾರ್ ನಟ ಬಾಲಕೃಷ್ಣ

ಜೀವನದಲ್ಲಿ ಸಾಕಷ್ಟು ಸವಾಲುಗಳನ್ನ ಎದುರಿಸಿದ ಬಳಿಕ ಮದುವೆ, ಸಂಸಾರ ಅಂತಾ ಬ್ಯುಸಿಯಿದ್ದ `ರಾಟೆ’ ನಟಿ ಶೃತಿ ಪವರ್ಫುಲ್ ಪಾತ್ರಗಳ ಮೂಲಕ ಕಮಾಲ್ ಮಾಡಲು ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
View this post on Instagram
ಇನ್ನು ಶೃತಿ ಬತ್ತಳಿಕೆಯಲ್ಲಿ ಇದೀಗ ಅಧಿಕೃತವಾಗಿ ನಾಲ್ಕು ಸಿನಿಮಾಗಳಿವೆ. `ಸಾಲುಗಾರ’, `ಸ್ಟ್ರಾಬೆರಿ’, ಡಾಲಿ ಜೊತೆ `ಹೆಡ್ಬುಷ್’, `ಏಜೆಂಜ್ ಕನ್ನಾಯಿರಾಮ್’, ಜತೆಗೆ ಶಂಕರ್ ಎನ್. ಸೊಂಡೂರ್ ನಿರ್ದೇಶನದ ಹೆಸರಿಡದ ಚಿತ್ರದಲ್ಲಿ ಶೃತಿ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ಈ ವರ್ಷದ ಕೊನೆಯಿಂದ ಶೃತಿ ಮೇನಿಯಾ ಶುರುವಾಗೋದು ಗ್ಯಾರೆಂಟಿ.

Leave a Reply