ಹರಿಯಾಣದ ಮಾಜಿ ಸಿಎಂ ಓಂ ಪ್ರಕಾಶ್ ಚೌಟಾಲಗೆ 4 ವರ್ಷ ಜೈಲು

ಚಂಡೀಗಢ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದೋಷಿಯಾಗಿರುವ ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಗೆ 4 ವರ್ಷ ಜೈಲು ಶಿಕ್ಷೆ ನೀಡಿ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.

court order law

1993 ರಿಂದ 2006ರ ನಡುವೆ 6.09 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಸಂಪಾದಿಸಿದ ಆರೋಪದಡಿ 2010ರ ಮಾರ್ಚ್ 26ರಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಚೌಟಾಲ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಸಿತು. ಚಾರ್ಜ್‍ಶೀಟ್‍ನಲ್ಲಿ ಕಾನೂನುಬದ್ಧ ಆದಾಯಕ್ಕೆ ವಿರುದ್ಧವಾಗಿರುವುದು ಸ್ಪಷ್ಟವಾಗಿತ್ತು. 2021ರ ಜನವರಿಯಲ್ಲಿ ದೆಹಲಿ ನ್ಯಾಯಾಲಯವು ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚೌಟಾಲ ವಿರುದ್ಧ ಮನಿ ಲಾಂಡರಿಂಗ್ ಆರೋಪಗಳನ್ನು ಹೊರಿಸಿತ್ತು. ಆ ಬಳಿಕ ಇದೀಗ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿರುವ ದೆಹಲಿಯ ಕೋರ್ಟ್ 4 ವರ್ಷ ಜೈಲು ಶಿಕ್ಷೆ ಮತ್ತು 50 ಲಕ್ಷ ರೂ. ದಂಡ ವಿಧಿಸಿದೆ. ಇದನ್ನೂ ಓದಿ: ಜವಾಹರಲಾಲ್ ನೆಹರೂ ಪುಣ್ಯ ತಿಥಿ – ಸೋನಿಯಾ ಗಾಂಧಿಯಿಂದ ಪುಷ್ಪ ನಮನ

ಚೌಟಾಲ ಮತ್ತು ಅವರ ಮಗ ಅಜಯ್ 2013ರಲ್ಲಿ ಶಿಕ್ಷಕರ ನೇಮಕಾತಿ ಹಗರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದ ನಂತರ ಅವರಿಗೆ ಹತ್ತು ವರ್ಷಗಳ  ಜೈಲು ಶಿಕ್ಷೆ ವಿಧಿಸಲಾಗಿತ್ತು. ಆ ಬಳಿಕ ಚೌತಾಲಾ 2021ರ ಜುಲೈನಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದರು. ಇದೀಗ ಮತ್ತೆ ಜೈಲು ಸೇರುವಂತಾಗಿದೆ. ಇದನ್ನೂ ಓದಿ: ಸಾಕ್ಷ್ಯಾಧಾರಗಳ ಕೊರತೆ- ಆರ್ಯನ್ ಖಾನ್ ಸೇರಿ 6 ಮಂದಿಗೆ ಎನ್‍ಸಿಬಿ ಕ್ಲೀನ್‌ಚಿಟ್

Comments

Leave a Reply

Your email address will not be published. Required fields are marked *