ನಾಳೆ ಫಿಲ್ಮ್ ಚೇಂಬರ್ ಚುನಾವಣೆ: ಅಖಾಡಕ್ಕೆ ಇಳಿದ ದೊಡ್ಮನೆ ಕುಟುಂಬ

ರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ಎರಡ್ಮೂರು ವರ್ಷಗಳ ನಂತರ ನಾಳೆ ನಡೆಯುತ್ತಿದೆ. ಈ ಚುನಾವಣೆ ಮಾಡಲು ಏನೆಲ್ಲ ಕಸರತ್ತುಗಳನ್ನು ಮಾಡಲಾಯಿತು. ಹಾಲಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ವಿರುದ್ಧ ದೂರು ದಾಖಲಿಸುವ ಮೂಲಕ ಚುನಾವಣೆ ಮಾಡಲು ಒತ್ತಡ ಹೇರಲಾಗಿತ್ತು. ಇದೆಲ್ಲವೂ ಹೈ ಡ್ರಾಮಾ ಆಗಿ ಇದೀಗ ನಾಳೆ ಚುನಾವಣೆ ನಡೆಯುತ್ತಿದೆ. ಇದನ್ನೂ ಓದಿ: ನಮ್ಮ ಇಂಡಸ್ಟ್ರಿ ಏನು, ನಮ್ಮ ಗೌರವ ಏನು ಎಲ್ಲರಿಗೂ ಗೊತ್ತು: ತೆಲಗು ನಿರ್ದೇಶಕನಿಗೆ ಶಿವಣ್ಣ ತಿರುಗೇಟು

ಈ ಬಾರಿಯ ಚುನಾವಣೆ ವಿಶೇಷ ಅಂದರೆ, ನಿರ್ಮಾಪಕ ಭಾ.ಮಾ.ಹರೀಶ್ ಮತ್ತು ನಿರ್ಮಾಪಕ ಸಾ.ರಾ. ಗೋವಿಂದ್ ತಂಡದ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದ್ದು, ಈ ಎರಡೂ ತಂಡಕ್ಕೆ ಹಲವರು ತಮ್ಮ ತಮ್ಮ ಬೆಂಬಲ ವ್ಯಕ್ತ ಪಡಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಜಯಮಾಲಾ ಸೇರಿದಂತೆ ಹಲವರು ಭಾ.ಮಾ.ಹರೀಶ್ ತಂಡಕ್ಕೆ ಬೆಂಬಲ ಸೂಚಿಸಿದ್ದರೆ, ಮೊನ್ನೆಯಷ್ಟೇ ಸಾ.ರಾ.ಗೋವಿಂದ್ ಮತ್ತು ತಂಡ ರಾಘವೇಂದ್ರ ರಾಜ್ ಕುಮಾರ್ ಭೇಟಿ ಮಾಡಿದೆ. ಈ ಹಿಂದೆ ಭಾ.ಮಾ.ಹರೀಶ್ ಮತ್ತು ತಂಡ ಶಿವರಾಜ್ ಕುಮಾರ್ ಅವರನ್ನೂ ಭೇಟಿ ಮಾಡಿತ್ತು.  ಇದನ್ನೂ ಓದಿ: ಕಾಶ್ಮೀರ ಟಿವಿ ಸ್ಟಾರ್ ನಟಿ ಹತ್ಯೆ ಮಾಡಿದ ಭಯೋತ್ಪಾದಕರು

ಸಾಮಾನ್ಯವಾಗಿ ಡಾ.ರಾಜ್ ಕುಮಾರ್ ಕುಟುಂಬ ವಾಣಿಜ್ಯ ಮಂಡಳಿಯ ಚುನಾವಣೆಯಲ್ಲಿ ನೇರವಾಗಿ ಕಣಕ್ಕೆ ಇಳಿಯುವುದು ಕಡಿಮೆ. ಪಾರ್ವತಮ್ಮ ರಾಜ್ ಕುಮಾರ್ ಸಹೋದರ ಚಿನ್ನೇಗೌಡರು ಚುನಾವಣೆ ನಿಂತಾಗಲೂ ಡಾ.ರಾಜ್ ಕುಮಾರ್ ಮಕ್ಕಳು ನೇರವಾಗಿ ಎಲ್ಲಿಯೂ ಚುನಾವಣೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಇದೀಗ ರಾಘವೇಂದ್ರ ರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ಒಂದೊಂದು ತಂಡಕ್ಕೆ ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಹತ್ತು ವರ್ಷಗಳ ನಂತರ ತೆಲುಗಿಗೆ ಡಬ್ ಆಯಿತು ಯಶ್ ನಟನೆಯ ಲಕ್ಕಿ ಸಿನಿಮಾ

ಹಾಗಂತ ಇದೇ ತಂಡಕ್ಕೆ ನನ್ನ ಬೆಂಬಲ ಎಂದು ಬಹಿರಂಗವಾಗಿ ಹೇಳಿಕೊಳ್ಳದೇ ತಮ್ಮನ್ನು ಭೇಟಿಗೆ ಬಂದ ತಂಡಗಳೊಂದಿಗೆ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಆತ್ಮೀಯವಾಗಿ ಫೋಟೋ ತಗೆಸಿಕೊಂಡು ಕುತೂಹಲಕ್ಕೆ ಕಾರಣವಾಗಿದ್ದಾರೆ. ನಾಳೆ ವಾಣಿಜ್ಯ ಮಂಡಳಿಗೆ ಚುನಾವಣೆ ನಡೆಯಲಿದ್ದು, ಯಾರೆಲ್ಲ ಈ ಬಾರಿ ಅಧಿಕಾರಿದ ಚುಕ್ಕಾಣೆ ಹಿಡಿಯಲಿದ್ದಾರೆ ಎನ್ನುವುದು ಕುತೂಹಲ ಕಾರಣವಾಗಿದೆ. ಎರಡೂ ತಂಡದಲ್ಲೂ ಪ್ರಭಾವಿ ವ್ಯಕ್ತಿಗಳೇ ಇರುವುದರಿಂದ ಸಂಜೆ ಹೊತ್ತಿಗೆ ಫಲಿತಾಂಶ ಸಿಗಲಿದೆ.

Comments

Leave a Reply

Your email address will not be published. Required fields are marked *