ಕಾಂಗ್ರೆಸ್ ತೊರೆದ ಕಪಿಲ್ ಸಿಬಲ್- ರಾಜ್ಯಸಭೆಗೆ SPಯಿಂದ ನಾಮಪತ್ರ ಸಲ್ಲಿಕೆ

ಲಕ್ನೋ: ಕಾಂಗ್ರೆಸ್‌ ಪಕ್ಷಕ್ಕೆ ಮತ್ತೊಂದು ಆಘಾತವಾಗಿದ್ದು, ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಕಾಂಗ್ರೆಸ್‍ಗೆ ರಾಜೀನಾಮೆ ನೀಡಿರುವುದಾಗಿ ಇಂದು ಬಹಿರಂಗಪಡಿಸಿದ್ದಾರೆ.

ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮೇ 16 ರಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದೆ.ಸಂಸತ್ತಿನಲ್ಲಿ ಸ್ವತಂತ್ರ ಧ್ವನಿಯಾಗುವುದು ಮುಖ್ಯ. ಸ್ವತಂತ್ರ ಧ್ವನಿ ಮಾತನಾಡಿದರೆ ಅದು ಯಾವುದೇ ರಾಜಕೀಯ ಪಕ್ಷದಿಂದಲ್ಲ ಎಂದು ಜನರು ನಂಬುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಮಳಲಿಯಲ್ಲಿರುವುದು ದರ್ಗಾವಲ್ಲ, ಶಿವ ಸಾನಿಧ್ಯ- ತಾಂಬೂಲ ಪ್ರಶ್ನೆ ಸುಳಿವು

ಕಾಂಗ್ರೆಸ್‍ನ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬರಾದ ಸಿಬಲ್ ಅವರು 23 ಭಿನ್ನಮತೀಯರ ಗುಂಪಿನಲ್ಲಿ ಕಾಣಿಸಿಕೊಂಡಿದ್ದರು. ಅವರು ಪಕ್ಷದ ನಾಯಕತ್ವ ಮತ್ತು ಸಂಘಟನೆಯ ಬಗ್ಗೆ ಕೂಲಂಕಷ ಪರೀಕ್ಷೆಗೆ ಕರೆ ನೀಡಿದ್ದರು. ಅಷ್ಟೇ ಅಲ್ಲದೇ ಅವರು ಇತ್ತೀಚಿನ ವಾರಗಳಲ್ಲಿ ಗಾಂಧಿಯವರ ನಾಯಕತ್ವದ ಬಗ್ಗೆ ತಮ್ಮ ಟೀಕೆಗಳ ಬಗ್ಗೆಯೂ ಧ್ವನಿ ಎತ್ತಿದ್ದರು. ಇದನ್ನೂ ಓದಿ: ರಾಯಚೂರಿನ ಪೊಲೀಸ್ ಠಾಣೆಗೆ ದೇಶದಲ್ಲೇ 5ನೇ ಸ್ಥಾನ

ಇತ್ತೀಚೆಗಷ್ಟೇ ಹಾರ್ದಿಕ್ ಪಟೇಲ್ ಹಾಗೂ ಸುನಿಲ್ ಜಾಖಡ್ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿದ್ದರು.

Comments

Leave a Reply

Your email address will not be published. Required fields are marked *