ತೆರೆಯ ಮೇಲೂ ಒಂದಾದ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ

ವ್ ಮಾಕ್ಟೈಲ್ ಚಿತ್ರದಲ್ಲಿ ಜೋಡಿಯಾಗಿ ಸಿನಿರಂಗವನ್ನು ರಂಜಿಸಿದ್ದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್, ಈ ಸಿನಿಮಾದಲ್ಲಿ ಮಾತ್ರವಲ್ಲ ವೈಯಕ್ತಿಕ ಜೀವನದಲ್ಲೂ ಅವರು ಜೊತೆಯಾದರು. ಸತಿ ಪತಿಯಾಗಿ ಒಂದೊಳ್ಳೆ ಜೀವನ ಸಾಗಿಸುತ್ತಿದ್ದಾರೆ. ಸಿನಿಮಾದಲ್ಲಿ ಪ್ರೇಮಿಯಾಗಿ ಪಾತ್ರ ಮಾಡಿದ್ದವರು, ನಿಜ ಜೀವನದಲ್ಲೂ ಅದನ್ನು ಮುಂದುವರೆಸಿಕೊಂಡು ಹೋಗಿ, ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ಸ್ ನಿಂದ ಮತ್ತೆರಡು ಪ್ಯಾನ್ ಇಂಡಿಯಾ ಸಿನಿಮಾ

ಲವ್ ಮಾಕ್ಟೈಲ್ ಇಬ್ಬರ ವೃತ್ತಿ ಜೀವನಕ್ಕೆ ದೊಡ್ಡ ಬ್ರೇಕ್ ನೀಡಿತು. ಆನಂತರ ಅವರು ಲವ್ ಮಾಕ್ಟೈಲ್ 2 ನಲ್ಲೂ ಜೊತೆಯಾಗಿಯೇ ನಟಿಸಿದರು. ಬಾಕ್ಸ್ ಆಫೀಸಿನಲ್ಲಿ ಅದು ಅಷ್ಟೇನೂ ಸದ್ದು ಮಾಡದೇ ಇದ್ದರೂ, ಜೋಡಿಯು ನೋಡುಗರಿಗೆ ಇಷ್ಟವಾಯಿತು. ಈಗ ಅದನ್ನೇ ಮುಂದುವರೆಸುವ ನಿಟ್ಟಿನಲ್ಲಿ ನಿರ್ದೇಶಕ ಪಿ.ಸಿ.ಶೇಖರ್ ಮತ್ತೊಂದು ಹೊಸ ಸಿನಿಮಾವನ್ನು ಇದೇ ಜೋಡಿಯಾಗಿ ನಿರ್ದೇಶನ ಮಾಡುತ್ತಿದ್ದಾರೆ. ಅದಕ್ಕೆ ಬ್ಯುಟಿಫುಲ್ ಆಗಿರುವ ಶೀರ್ಷಿಕೆಯನ್ನೂ ಇಟ್ಟಿದ್ದಾರೆ. ಇದನ್ನೂ ಓದಿ : ‘ಕಾಳಿ’ ಟೈಟಲ್ ಧ್ರುವ ಸರ್ಜಾಗಾ? ಅಥವಾ ಅಭಿಷೇಕ್ ಅಂಬರೀಶ್ ಗಾ?

ಪಿ.ಸಿ. ಶೇಖರ್ ಸಿನಿಮಾ ರಂಗದಲ್ಲಿ ಕೊಂಚ ಗ್ಯಾಪ್ ತಗೆದುಕೊಂಡು ಸಿನಿಮಾವೊಂದನ್ನು ನಿರ್ದೇಶನ ಮಾಡುತ್ತಿದ್ದು, ಈ ಚಿತ್ರಕ್ಕೆ ಲವ್ ಬರ್ಡ್ಸ್ ಎಂದು ಹೆಸರಿಟ್ಟಿದ್ದಾರೆ. ರಿಯಲ್ ಲೈಫ್‍ನ ಲವ್ ಬರ್ಡ್ಸ್ ಅನ್ನೇ ನಾಯಕ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಕಥೆಗೂ ಮತ್ತು ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರ ಜೋಡಿಗೂ ಒಂದಾಣಿಕೆ ಆಗುತ್ತಿದ್ದರಿಂದ, ಇದೇ ಜೋಡಿಯನ್ನು ಆಯ್ಕೆ ಮಾಡಿಕೊಂಡು, ಸಿನಿಮಾ ಮಾಡುತ್ತಿದ್ದಾರೆ. ಇದನ್ನೂ ಓದಿ: ಬ್ರ್ಯಾಂಡ್ ಬೆಂಗಳೂರು ಹೆಸರು ಉಳಿಸಿ – ಪ್ರಧಾನಿಗೆ ನಟ ಅನಿರುದ್ಧ್ ಪತ್ರ

ಲವ್ ಬರ್ಡ್ಸ್ ಚಿತ್ರಕ್ಕೆ ಮಿಲನಾ ನಾಗರಾಜ್ ನಾಯಕಿಯಾದರೆ, ಡಾರ್ಲಿಂಗ್ ಕೃಷ್ಣ ನಾಯಕ. ಮದುವೆಯಾದ ಜೋಡಿಯ ನಂತರದ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗುತ್ತಿದೆಯಂತೆ. ದಾಂಪತ್ಯ ಜೀವನದ ಹಲವು ಸಂಗತಿಗಳನ್ನು ಈ ಸಿನಿಮಾದ ಮೂಲಕ ಹೇಳಲು ಹೊರಟಿದ್ದಾರಂತೆ ನಿರ್ದೇಶಕರು.

Comments

Leave a Reply

Your email address will not be published. Required fields are marked *