ಕನ್ನಡ ಚಿತ್ರರಂಗ- ನಟಿಯರ ಬಗ್ಗೆ ತುಚ್ಚವಾಗಿ ಮಾತನಾಡಿದ ತೆಲುಗು ನಿರ್ದೇಶಕ

ತೆಲುಗು ನಿರ್ದೇಶಕ ಗೀತ ಕೃಷ್ಣ ಇದೀಗ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಟಾಲಿವುಡ್‌ನಲ್ಲಿ ಬೆರಳೆಣಿಕೆಯಷ್ಟು ಸಿನಿಮಾ ಮಾಡಿರುವ ತೆನಿರ್ದೇಶಕ ಗೀತ ಕೃಷ್ಣ ಕನ್ನಡ ಚಿತ್ರರಂಗದವರು ಹೊಲಸು ಜನ ಮತ್ತು ಚಿತ್ರರಂಗದ ಬಗ್ಗೆ ಕೆಟ್ಟದಾಗಿ ಮಾತನಾಡಿ  ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಟಾಲಿವುಡ್‌ನಲ್ಲಿ ಕೆಲವೇ ಕೆಲವು ಸಿನಿಮಾ ನಿರ್ದೇಶನದ ಗುರುತಿಸಿಕೊಂಡಿರುವ ಗೀತ ಕೃಷ್ಣ ಕನ್ನಡ ಚಿತ್ರರಂಗದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಕನ್ನಡ ಚಿತ್ರರಂಗದ ಜನ ಹೊಲಸು ಜನ ಅಂತಾ ಹೇಳಿ ನಾಲಿಗೆ ಹರಿಬಿಟ್ಟಿದ್ದಾರೆ. ಕಳೆದ ವರ್ಷ ಮಾಜಿ ಪೋಷಕ ನಟನೊಬ್ಬ ಸಾಹಸಸಿಂಹ ವಿಷ್ಣುವರ್ಧನ್ ಬಗ್ಗೆ ಕೆಟ್ಟದಾಗಿ ಮಾತನಾಡಿ, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ತೆಲುಗಿನ ಮತ್ತೊರ್ವ ನಿರ್ದೇಶಕ ಗೀತ ಕೃಷ್ಣ ಹೊಸ ವಿವಾದ ಸೃಷ್ಟಿ ಮಾಡಿದ್ದಾರೆ.

ಸಂದರ್ಶನವೊಂದರಲ್ಲಿ ಗೀತಕೃಷ್ಣ, ತಮಿಳು ಚಿತ್ರರಂಗದಲ್ಲಿ ಕೇವಲ ಪ್ರತಿಭೆ ಇದ್ದರೆ ಅಷ್ಟೇ ಅವಕಾಶ ನೀಡುತ್ತಾರಂತೆ ಹೌದಾ ಎಂದು ಕೇಳಿದ್ದಾರೆ. ಅಸಲಿಗೆ ಕಾಸ್ಟಿಂಗ್ ಕೌಚ್ ಹುಟ್ಟಿದ್ದೇ ತಮಿಳಿನಲ್ಲಿ, ಅಲ್ಲಿ ಇರುವಂಥ ಅಸಹ್ಯದ ಜನ ಇನ್ನೇಲ್ಲೂ ಇಲ್ಲ. ಕನ್ನಡದವರಂತೂ ಇನ್ನೂ ಅಸಹ್ಯದವರು, ಕೊಳಕು ಜನ, ಅಲ್ಲಿ ವಿಪರೀತ ಕಾಸ್ಟಿಂಗ್ ಕೌಚ್ ಇದೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:‘ಕಾಳಿ’ ಟೈಟಲ್ ಧ್ರುವ ಸರ್ಜಾಗಾ? ಅಥವಾ ಅಭಿಷೇಕ್ ಅಂಬರೀಶ್ ಗಾ?

ಇನ್ನು ಈ ವೇಳೆ, ಆಗಿನ ಚಿತ್ರರಂಗಕ್ಕೂ ಮತ್ತು ಈಗೀನ ಕಾಲದ ಚಿತ್ರರಂಗಕ್ಕೂ ಇರುವ ವ್ಯತ್ಯಾಸವೇನು ಎಂದು ಕೇಳಿದ ಪ್ರಶ್ನೆಗೆ, ಆಗಿನ ನಟಿಯರು ಅವಕಾಶಕ್ಕಾಗಿ ಮಂಚ ಹಂಚಿಕೊಳ್ಳುತ್ತಿದ್ದರು. ಈಗಿನ ಅವಕಾಶಕ್ಕಾಗಿ ಮಂಚ ಏರುತ್ತಾರೆ. ಬಹುತೇಕ ನಟಿಯರು ಲೈಂಗಿಕ ಸೇವೆ ಒದಿಸಿಯೇ ಚಿತ್ರರಂಗದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ ಎಂದು ಕನ್ನಡದ ಬಗ್ಗೆ ಮತ್ತು ಸಿನಿಮಾರಂಗದ ನಾಯಕಿಯರ ಬಗ್ಗೆ ತುಚ್ಚವಾಗಿ ನಿರ್ದೇಶಕ ಗೀತ ಕೃಷ್ಣ ಮಾತನಾಡಿದ್ದಾರೆ. ಸದ್ಯ ನಿರ್ದೇಶಕನ ಈ ಮಾತುಗಳು ಚಿತ್ರರಂಗದಲ್ಲಿ ವಿವಾದದ ಜೊತೆ ಸಂಚಲನ ಮೂಡಿಸುತ್ತಿದೆ.

Comments

Leave a Reply

Your email address will not be published. Required fields are marked *