ಉತ್ತರ ಕೊರಿಯಾದಲ್ಲಿ ನಿಯಂತ್ರಣಕ್ಕೆ ಬಂದ ಕೊರೊನಾ

ಸಿಯೋಲ್: ಉತ್ತರ ಕೊರಿಯಾದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದ್ದು, ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಎಂದು ಮಂಗಳವಾರ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಕೊರಿಯಾದಲ್ಲಿ ಕೊರೊನಾ ಸ್ಫೋಟಿಸಿತ್ತು. ಕೇವಲ ಮೂರು ದಿನಗಳ ಅವಧಿಯಲ್ಲೇ 10 ಲಕ್ಷಕ್ಕೂ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿದ್ದು, 50ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದರು. ಕೊರೊನಾ ಪ್ರಕರಣಗಳು ಉಲ್ಬಣಗೊಳ್ಳುತ್ತಿರುವುದಕ್ಕೆ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಅಸಮಾಧಾನ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ ಔಷಧ ವಿತರಿಸಲು ಸಹಾಯ ಮಾಡುವಂತೆ ಸೈನ್ಯಕ್ಕೆ ಆದೇಶಿಸಿದ್ದರು.

ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತವಾಗಿದ್ದ ಉತ್ತರ ಕೊರಿಯಾವು ಸೋಂಕು ಹರಡುವುದನ್ನು ತಡೆಯಲು ಯಶಸ್ಸು ಸಾಧಿಸಿದೆ. 134,510 ಹೊಸ ಸೋಂಕಿತರು ಸೇರಿಸಿದರೂ ಸೋಮವಾರ ಸಂಜೆಯ ವೇಳೆಗೆ ಯಾವುದೇ ಹೊಸ ಜ್ವರ ಸಾವು ವರದಿಯಾಗಿಲ್ಲ. ಇದನ್ನೂ ಓದಿ: ಪಿಯುಸಿ ಅಡ್ಮಿಷನ್‍ಗೆ ಹೊರಟಿದ್ದ ಪ್ರತಿಭಾವಂತ ವಿದ್ಯಾರ್ಥಿ ಅಪಘಾತದಲ್ಲಿ ಸಾವು

ಗರಿಷ್ಠ ತುರ್ತು ಸಾಂಕ್ರಾಮಿಕ ತಡೆಗಟ್ಟುವ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದ ಕೆಲವೇ ದಿನಗಳಲ್ಲಿ, ರಾಷ್ಟ್ರವ್ಯಾಪಿ ಸೋಂಕಿತರು ಮತ್ತು ಮರಣ ಪ್ರಮಾಣಗಳು ತೀವ್ರವಾಗಿ ಕಡಿಮೆಯಾಗಿದೆ. ಅಷ್ಟೇ ಅಲ್ಲದೇ ಕೊರೊನಾದಿಂದ ಗುಣಮುಖರಾಗುವವರ ಸಂಖ್ಯೆಯೂ ಹೆಚ್ಚಾಗಿದೆ. ಏಪ್ರಿಲ್ ಅಂತ್ಯದಿಂದ ಇಂದಿನವರೆಗೆ ಕೊರೊನಾ ಸೋಂಕಿತರ ಒಟ್ಟು ಪ್ರಕರಣಗಳ ಸಂಖ್ಯೆ 2.95 ಮಿಲಿಯನ್‍ಗೆ ಏರಿದ್ದು, ಸಾವಿನ ಸಂಖ್ಯೆ 68 ಆಗಿದೆ. ಇದನ್ನೂ ಓದಿ: ಉತ್ತರ ಕೊರಿಯಾದಲ್ಲಿ ಕೊರೊನಾ ಸ್ಫೋಟ – ಮೂರೇ ದಿನಕ್ಕೆ 12 ಲಕ್ಷ ಮಂದಿಗೆ ಸೋಂಕು

Comments

Leave a Reply

Your email address will not be published. Required fields are marked *