ನಮ್ಮ ಮಗಳನ್ನು ಹತ್ಯೆ ಮಾಡಿ ಗಂಡನ ಮನೆಯವರೇ ನೇಣು ಹಾಕಿದ್ದಾರೆ – ಮೃತಳ ಕುಟುಂಬಸ್ಥರ ಆಕ್ರೋಶ

ಹಾಸನ: ಗೃಹಿಣಿಯೊಬ್ಬರು ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದು, ಗಂಡನ ಮನೆಯವರೇ ಹತ್ಯೆ ಮಾಡಿ ನೇಣು ಹಾಕಿದ್ದಾರೆಂದು ಆರೋಪಿಸಿ ವ್ಯಕ್ತಿಯೊಬ್ಬರಿಗೆ ಹಿಗ್ಗಾಮುಗ್ಗ ಥಳಿಸಿದ ಘಟನೆ ಹಾಸನದ ವಿದ್ಯಾನಗರದಲ್ಲಿ ನಡೆದಿದೆ.

ಕಳೆದ ಹತ್ತು ವರ್ಷದ ಹಿಂದೆ ಹೊಳೆನರಸೀಪುರ ತಾಲೂಕಿನ ಪಡುವಲಹಿಪ್ಪೆ ಗ್ರಾಮದ ರಂಜಿತಾ ಅವರನ್ನು, ಹಾಸನದ ವಿದ್ಯಾನಗರ ನಿವಾಸಿ ಅಕ್ಷಯ್‍ಗೆ ಮದುವೆ ಮಾಡಿಕೊಡಲಾಗಿತ್ತು. ಹತ್ತು ವರ್ಷ ಕಳೆದರೂ ದಂಪತಿಗೆ ಮಕ್ಕಳಿರಲಿಲ್ಲ. ಗಂಡ ಅಕ್ಷಯ್ ಹಾಗೂ ಮನೆಯವರು ನಿರಂತರವಾಗಿ ರಂಜಿತಾಗೆ ಕಿರುಕುಳ ನೀಡಿ, ದೈಹಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ರಂಜಿತಾ ಪೋಷಕರು ಆರೋಪ ಮಾಡುತ್ತಿದ್ದಾರೆ. ಇದನ್ನೂ ಓದಿ: ಎಷ್ಟು ಹೇಳಿದ್ರೂ ಓದ್ಲಿಲ್ಲ, ಸತ್ತವರ ಮನೆ ಮುಂದೆ ತಮಟೆ ಬಡಿಯಲು ಹೋಗ್ತಿದ್ರಿ – ಶಿಕ್ಷಕರ ಕ್ಲಾಸ್

ಈ ಬಗ್ಗೆ ಮಾಜಿ ಸಚಿವ ರೇವಣ್ಣ ಅವರ ಬಳಿ ಕಷ್ಟ ಹೇಳಿಕೊಂಡಾಗ, ಹುಡುಗನ ಮನೆಯವರಿಗೆ ಬುದ್ದಿವಾದ ಹೇಳಿದ್ದರಂತೆ. ಆದರೂ ಗಂಡನ ಮನೆಯವರ ಕಿರುಕುಳ ತಪ್ಪಿರಲಿಲ್ಲ. ಇದೀಗ ರಂಜಿತಾ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದು, ಗಂಡನ ಮನೆಯವರೇ ಕೊಲೆ ಮಾಡಿ, ನೇಣು ಹಾಕಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಜೈಲಿನಲ್ಲಿದ್ದ ನವಜೋತ್‌ ಸಿಂಗ್‌ ಸಿಧು ಆಸ್ಪತ್ರೆಗೆ ದಾಖಲು

ಅಷ್ಟೇ ಅಲ್ಲದೇ ರಂಜಿತಾ ಮನೆಯ ಕಿಟಕಿ ಗಾಜು, ಪಾಟ್‍ಗಳನ್ನು ಒಡೆದು ಹಾಕಿದ್ದಾರೆ. ರಂಜಿತಾ ಗಂಡ ಅಕ್ಷಯ್ ಮನೆಯವರ ಪರವಾಗಿ ಮಾತನಾಡಲು ಬಂದವರ ಮೇಲೂ ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ವೇಳೆ ತಡೆಯಲು ಬಂದ ಪೊಲೀಸರನ್ನೂ ತಳ್ಳಾಟ ನೂಕಾಟ ನಡೆಸಿದ್ದಾರೆ. ಹಾಸನ ಬಡಾವಣೆ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ.

Comments

Leave a Reply

Your email address will not be published. Required fields are marked *