ATM ವಾಹನದಲ್ಲಿದ್ದ 43 ಲಕ್ಷ ರೂ. ದೋಚಿದ್ದ ಕಳ್ಳರು – 7 ತಿಂಗಳ ಬಳಿಕ ಅಂದರ್

ಹಾಸನ: ಎಟಿಎಂಗೆ ಹಣ ತುಂಬಿಸುವ ವಾಹನದಲ್ಲಿದ್ದ 43 ಲಕ್ಷ ರೂ. ಹಣವನ್ನು ಲಪಟಾಯಿಸಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಅಕ್ಟೋಬರ್ 27 ರಂದು ಹಾಸನ ಜಿಲ್ಲೆ, ಅರಸೀಕೆರೆ ತಾಲೂಕಿನ ಬಾಣಾವರದಲ್ಲಿ ಎಟಿಎಂಗೆ ಹಣ ತುಂಬಲು ಹೋಗಿದ್ದ ವೇಳೆ ವಾಹನದಲ್ಲಿದ್ದ 43 ಲಕ್ಷ ರೂ. ಎಗರಿಸಿ ಖದೀಮರು ಪರಾರಿಯಾಗಿದ್ದರು. ಪ್ರಕರಣ ನಡೆದು ಏಳು ತಿಂಗಳ ನಂತರ ಇದೀಗ ಆರೋಪಿಗಳು ಪತ್ತೆಯಾಗಿದ್ದು, ತಮಿಳುನಾಡು ಮೂಲದ ಮೂವರು ಮತ್ತು ಕೋಲಾರ ಜಿಲ್ಲೆಯ ಒಬ್ಬ ಸೇರಿ ಒಟ್ಟು ನಾಲ್ಕು ಆರೋಪಿಗಳನ್ನು ಬಂಧಿಸಿಸಲಾಗಿದೆ. ಬಂಧಿತರಿಂದ 27 ಲಕ್ಷ ನಗದು, ಕ್ಯಾಟರ್‌ಬಿಲ್ ಮತ್ತು ಕಬ್ಬಿಣದ ಸಣ್ಣ ಬಾಲ್ಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ನಮ್ಮ ಮೇಲೆ ಅತ್ಯಾಚಾರ ನಿಲ್ಲಿಸಿ – ಕಾನ್ ಚಿತ್ರೋತ್ಸವದಲ್ಲಿ ಬೆತ್ತಲಾದ ಉಕ್ರೇನ್ ಮಹಿಳೆ

ಹೇಗೆ ಕಳ್ಳತನ ಮಾಡುತ್ತಿದ್ದರು?
ಆರೋಪಿಗಳು ಕಳ್ಳತನ ಮಾಡಲು ಭಿನ್ನ ಟ್ರಿಕ್‌ ಬಳಸುತ್ತಿದ್ದರು. ಆರೋಪಿಗಳು ಕಳ್ಳತನಕ್ಕೂ ಮುನ್ನ ಹಣ ತಂದವರ ಗಮನವನ್ನು ಬೇರೆಡೆ ಸೆಳೆಯುತ್ತಿದ್ದರು. ನಂತರ ಅವರ ಗಮನಕ್ಕೆ ಬಾರದ ರೀತಿಯಲ್ಲಿ ಯಾರಿಗೂ ಅನುಮಾನ ಬರದಂತೆ ಹಣ ಲಪಾಟಾಯಿಸುತ್ತಿದ್ದರು. ನಂತರ ಅಲ್ಲಿಂದ ಪರಾರಿಯಾಗುತ್ತಿದ್ದರು. ಇದೀಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಹಾಸನ ಜಿಲ್ಲೆಯಲ್ಲಿ ಇದೇ ಏಳು ಪ್ರಕರಣಗಳು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಂದು ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿರೋದು ತಿಳಿದುಬಂದಿದೆ.

ಒಟ್ಟಾರೆ ಎಟಿಎಂಗೆ ತುಂಬಲು ಹೊರಟಿದ್ದ ಬರೋಬ್ಬರಿ 43 ಲಕ್ಷ ರೂ. ಕಳುವಾದ ಏಳು ತಿಂಗಳ ನಂತರ ಆರೋಪಿಗಳು ಸೆರೆಯಾಗಿರೋದು ಪೊಲೀಸರಿಗೆ ನೆಮ್ಮದಿ ತಂದಿದೆ. ಘಟನೆ ಸಂಬಂಧ ಭಾಗಿಯಾಗಿರುವ ಮತ್ತಷ್ಟು ಆರೋಪಿಗಳ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು, ತನಿಖೆ ಮುಂದುವರಿದಿದೆ. ಇದನ್ನೂ ಓದಿ: ಅಕ್ರಮ ಗಣಿ ಮಾಫಿಯಾಗೆ ಮಂಡ್ಯ ವ್ಯಕ್ತಿ ಬಲಿ – ಹೊಳೆನರಸೀಪುರ ಅರಣ್ಯದಲ್ಲಿ ಹೂತು ಹಾಕಿದ್ರಾ ಶವ? 

Comments

Leave a Reply

Your email address will not be published. Required fields are marked *