ಫಿನ್ಲೆಂಡ್‌ಗೆ ರಷ್ಯಾ ಶಾಕ್ – ನೈಸರ್ಗಿಕ ಅನಿಲ ಸರಬರಾಜು ಸ್ಥಗಿತ

ಮಾಸ್ಕೋ: ನ್ಯಾಟೋಗೆ ಸೇರಲು ಮುಂದಾದ ಫಿನ್ಲೆಂಡ್‌ಗೆ ರಷ್ಯಾ ಈಗ ಶಾಕ್ ಕೊಟ್ಟಿದೆ. ಇಂದಿನಿಂದ ಫಿನ್ಲೆಂಡ್‌ಗೆ ನೈಸರ್ಗಿಕ ಅನಿಲ ಸರಬರಾಜನ್ನು ಸ್ಥಗಿತಗೊಳಿಸಿದೆ.

ರಷ್ಯಾ-ಉಕ್ರೇನ್ ಯುದ್ಧದ ನಡುವೆ ನ್ಯಾಟೋ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಿದ ಫಿನ್ಲೆಂಡ್ ರುಬೆಲ್‌ನಲ್ಲಿ ಪಾವತಿಸುವ ಷರತ್ತನ್ನು ನಿರಾಕರಿಸಿತ್ತು. ಈ ಕಾರಣಕ್ಕೆ ರಷ್ಯಾ ಫಿನ್ಲೆಂಡ್‌ಗೆ ನೈಸರ್ಗಿಕ ಅನಿಲ ಸರಬರಾಜನ್ನು ಸ್ಥಗಿತಗೊಳಿಸಿದೆ ಎಂದು ಫಿನ್ನಿಷ್ ಸರ್ಕಾರಿ ಸ್ವಾಮ್ಯದ ಕಂಪೆನಿ ಹೇಳಿದೆ. ಇದನ್ನೂ ಓದಿ: ಮಸ್ಕ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ – ಬಾಯಿ ಮುಚ್ಚಿಸಲು ಕೋಟಿ ಹಣ ಸಂದಾಯ

 

ಉಕ್ರೇನ್‌ನಲ್ಲಿನ ಯುದ್ಧದಿಂದಾಗಿ ರಷ್ಯಾದ ಕಚ್ಚಾತೈಲಗಳ ಮೇಲೆ ಯುರೋಪಿಯನ್ ಒಕ್ಕೂಟಗಳು ರಷ್ಯಾಮೇಲೆ ನಿರ್ಬಂಧ ಹೇರಲು ಮುಂದಾಗಿದ್ದವು. ಈ ವೇಳೆ ಸ್ನೇಹಪರವಲ್ಲದ ವಿದೇಶಿ ಖರೀದಿದಾರರು ರಷ್ಯಾದ ಕರೆನ್ಸಿಯಲ್ಲೇ ಗ್ಯಾಸ್‌ಗೆ ಖರೀದಿಸಬೇಕು ಎಂದು ರಷ್ಯಾ ಒತ್ತಾಯಿಸಿತ್ತು. ಫಿನ್ಲೆಂಡ್‌ ನ್ಯಾಟೋ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿದ ನಂತರ ರಷ್ಯಾ ಈ ಕ್ರಮಕೈಗೊಂಡಿರುವುದು ವಿಶೇಷ. ಇದನ್ನೂ ಓದಿ: ಜ್ಞಾನವಾಪಿ ಕೇಸ್ ವಾರಣಾಸಿ ಕೋರ್ಟ್‍ಗೆ ವರ್ಗಾವಣೆ – ವಾದ, ಪ್ರತಿವಾದ ಹೇಗಿತ್ತು?

ಕಳೆದ ತಿಂಗಳ ಕೊನೆಯಲ್ಲಿ ಪೋಲೆಂಡ್ ಮತ್ತು ಬಲ್ಗೇರಿಯಾಗೆ ನೈಸರ್ಗಿಕ ಅನಿಲವನ್ನು ಸ್ಥಗಿತಗೊಳಿಸಿತ್ತು. ಆದರೆ, ಫಿನ್ಲೆಂಡ್‌ಗೆ ಅನಿಲ ಕಡಿತಗೊಳಿಸಿದ್ದು, ಇದರೊಂದಿಗೆ ಇತರ ಸಣ್ಣ-ಸಣ್ಣ ಗ್ರಾಹಕರೂ ರಷ್ಯಾದ ನೈಸರ್ಗಿಕ ಅನಿಲದಿಂದ ದೂರ ಸರಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

12 ಸೇನಾ ಘಟಕ ಸ್ಥಾಪಿಸಲು ನಿರ್ಧಾರ: ನ್ಯಾಟೋ ವಿಸ್ತರಣೆಗೆ ಪ್ರತಿಯಾಗಿ ಪಶ್ಚಿಮದ ಮಿಲಿಟರಿ ಜಿಲ್ಲೆಯಲ್ಲಿ 12 ಹೊಸ ಸೇನಾ ಘಟಕಗಳು ಮತ್ತು ವಿಭಾಗಗಳ ನೆಲೆಯನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ರಷ್ಯಾ ರಕ್ಷಣಾ ಸಚಿವ ಸೆರ್ಗೈ ಶೋಯಿಗು ತಿಳಿಸಿದ್ದಾರೆ.

ಸ್ವೀಡನ್ ಮತ್ತು ಫಿನ್ಲೆಂಡ್‌ ನ್ಯಾಟೋ ಸೇರಲು ಅರ್ಜಿ ಸಲ್ಲಿಸಿರುವುದನ್ನು ವರ್ಚುವಲ್ ಸಭೆಯಲ್ಲಿ ಉಲ್ಲೇಖಿಸಿದ ಅವರು, ಪಶ್ಚಿಮದ ಮಿಲಿಟರಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬೆದರಿಕೆಗೆ ಪ್ರತಿಯಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ಸೇನೆಯು ಎರಡು ಸಾವಿರಕ್ಕೂ ಹೆಚ್ಚು ಯೂನಿಟ್ ಸೇನಾ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳನ್ನು ಶೀಘ್ರವೇ ಪಡೆಯಲಿದೆ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *