ಜನರ ದುಡ್ಡಲ್ಲಿ ಜನಪ್ರತಿನಿಧಿಗಳ ಜಾತ್ರೆ – ಕಡಿಮೆ ದರದ ಪ್ಲಾನ್ ಇದ್ದರೂ ಸಾವಿರಾರು ರೂ. ಫೋನ್ ಬಿಲ್!

ಬೆಂಗಳೂರು: ಕಡಿಮೆ ಬೆಲೆಗೆ ಡಾಟಾ ಪ್ಯಾಕ್, ಅನ್‌ಲಿಮಿಟೆಡ್ ಕಾಲ್, ಮೆಸೇಜ್ ಪ್ಯಾಕ್ ಇದ್ರೂ, ಹೆಚ್ಚು ಖರ್ಚಿನ ಫೋನ್ ಬಿಲ್ ತೋರಿಸಿ ಶಾಸಕರು ಹಣ ವಸೂಲಿಗೆ ನಿಂತಿದ್ದಾರೆ. ಜನರ ತೆರಿಗೆ ಹಣವನ್ನು ನುಂಗಿ ನೀರು ಕುಡಿಯುತ್ತಿದ್ದಾರೆ.

ಶಾಸಕರ ಮನೆ, ಕಾರು, ಫೋನ್ ಎಲ್ಲದ್ದಕ್ಕೂ ಜನರ ತೆರಿಗೆ ಹಣವೇ ಬೇಕು. ಜನರ ಹಣವನ್ನು ಶಾಸಕರು ಬೇಕಾಬಿಟ್ಟಿ ಖರ್ಚು ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಪ್ರತಿ ತಿಂಗಳು ಲಕ್ಷ ಲಕ್ಷ ವೇತನ, ಭತ್ಯೆ ಪಡೆಯುತ್ತಾರೆ. ತಿಂಗಳಿಗೆ ಒಬ್ಬ ಶಾಸಕನಿಗೆ ಬರೋಬ್ಬರಿ 2.05 ಲಕ್ಷ ವೇತನ ಭತ್ಯೆ ಸಿಗುತ್ತದೆ. ಆದರೂ ಅನಗತ್ಯ ಖರ್ಚಿನ ಮೂಲಕ ತೆರಿಗೆ ಹಣವನ್ನು ಪೋಲು ಮಾಡುತ್ತಿದ್ದಾರೆ. ಇದನ್ನೂ ಓದಿ: ಎಸ್‍ಬಿಐನಲ್ಲಿ 10 ಸಾವಿರಕ್ಕೂ ಹೆಚ್ಚು ಹಣ ಡ್ರಾ ಮಾಡಲು OTP ಅಪ್ಲೈ

VIDHAN SHOUDHA

ಶಾಸಕರು ತಿಂಗಳಿಗೆ ದೂರವಾಣಿ ವೆಚ್ಚವಾಗಿ 20 ಸಾವಿರ ಪಡೆಯುತ್ತಿದ್ದಾರೆ. ಉಚಿತ ಕರೆ, ಕಡಿಮೆ ಬೆಲೆಗೆ ಡಾಟಾ ಸಿಕ್ಕರೂ ದೂರವಾಣಿ ವೆಚ್ಚ ಅಂತ ವರ್ಷಕ್ಕೆ 2.40 ಲಕ್ಷ ಪಡೆಯುತ್ತಿದ್ದಾರೆ. ವರ್ಷಕ್ಕೆ 2-3 ಸಾವಿರ ಖರ್ಚು ಮಾಡಿದರೆ ಉಚಿತ ಕರೆ, ಡಾಟಾ ಪ್ಯಾಕ್, ಮೆಸೇಜ್ ಪ್ಯಾಕ್ ಸಿಗುತ್ತೆ. ಹೀಗಿರುವಾಗ ತಿಂಗಳಿಗೆ 20 ಸಾವಿರ ಲೆಕ್ಕ ಕೊಟ್ಟು ಹಣ ಪಡೆಯುತ್ತಿರುವುದು ಎಷ್ಟು ಸರಿ ಎಂದು ಜನ ಸಾಮನ್ಯರು ಪ್ರಶ್ನೆ ಮಾಡುತ್ತಿದ್ದಾರೆ.

ಟೆಲಿಫೋನ್ ಬಿಲ್‌ನಲ್ಲಿ ನಮ್ಮ ಶಾಸಕರು ಶ್ರೀಮಂತರಾಗಿದ್ದಾರೆ. 3ಜಿ, 4ಜಿ, ಉಚಿತ ಕರೆಗಳ ಪ್ಲ್ಯಾನ್ ಬಂದ್ರೂ ಫೋನ್ ಬಿಲ್ ಹೆಸರಲ್ಲಿ ಸಾವಿರಾರು ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ತಿಂಗಳಿಗೆ ದೂರವಾಣಿ ವೆಚ್ಚ 20 ಸಾವಿರ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲೇ ಮಾತನಾಡಿದ ಕನ್ನಡಿಗ ಸಂಸದ ಚಂದ್ರ ಆರ್ಯ

ಶಾಸಕರು ತಿಂಗಳಿಗೆ ಪಡೆಯುತ್ತಿರುವ ವೇತನ ಮತ್ತು ಭತ್ಯೆ ವಿವರ ಹೀಗಿದೆ. ವೇತನ 40,000 ರೂ. ಹಾಗೂ ಕ್ಷೇತ್ರ ಭತ್ಯೆ- 60,000 ರೂ., ಚುನಾವಣೆ ಕ್ಷೇತ್ರದ ಪ್ರಯಾಣ ಭತ್ಯೆ- 60,000, ಆಪ್ತ ಸಹಾಯ ಮತ್ತು ಕೊಠಡಿ ಸೇವಕನ ವೇತನ- 20,000 ರೂ., ಅಂಚೆ ವೆಚ್ಚ- 5,000 ರೂ. ಪಡೆಯುತ್ತಿದ್ದಾರೆ. ದೂರವಾಣಿ ವೆಚ್ಚ- 20,000 ರೂ., ಒಟ್ಟು ಮೊತ್ತ- 2,05,000 ರೂ. ತೆಗೆದುಕೊಳ್ಳುತ್ತಿದ್ದಾರೆ.

ವರ್ಷಕ್ಕೆ ಯಾವ ಯಾವ ಕಂಪನಿಯ ಪ್ಲ್ಯಾನ್‌ಗಳು ಹೇಗಿವೆ. ಇಲ್ಲಿದೆ ನೋಡಿ ವಿವರ.
ಏರ್‌ಟೆಲ್ – 3,359 ರೂ.
* ವ್ಯಾಲಿಡಿಟಿ ಒಂದು ವರ್ಷ
* ಅನ್ ಲಿಮಿಟೆಡ್ ಲೋಕಲ್, ಎಸ್‌ಟಿಡಿ ಕಾಲ್
* ದಿನಕ್ಕೆ 2.5 ಜಿಬಿ ಹೈ ಸ್ಪೀಡ್ 4ಜಿ ಡಾಟಾ
* ದಿನಕ್ಕೆ 100 ಎಸ್.ಎಂ.ಎಸ್. ಫ್ರೀ

ಜಿಯೋ ನೆಟ್‌ವರ್ಕ್ – 4,199 ರೂ.
* ವ್ಯಾಲಿಡಿಟಿ ಒಂದು ವರ್ಷ.
* ಅನ್ ಲಿಮಿಟೆಡ್ ಲೋಕಲ್, ಎಸ್‌ಟಿಡಿ ಕಾಲ್
* ದಿನಕ್ಕೆ 3 ಜಿಬಿ ಹೈ ಸ್ಪೀಡ್ 4ಜಿ ಡಾಟಾ
* ದಿನಕ್ಕೆ 100 ಎಸ್.ಎಂ.ಎಸ್. ಫ್ರೀ
* ಹಾಟ್ ಸ್ಟಾರ್ ಉಚಿತ ಸಬ್‌ಸ್ಕ್ರೈಬ್

ಐಡಿಯಾ-ವೋಡೋಫೋನ್ – 3,099 ರೂ.
* ವ್ಯಾಲಿಡಿಟಿ ಒಂದು ವರ್ಷ
* ಅನ್ ಲಿಮಿಟೆಡ್ ಲೋಕಲ್, ಎಸ್‌ಟಿಡಿ ಕಾಲ್
* ದಿನಕ್ಕೆ 2 ಜಿಬಿ ಹೈ ಸ್ಪೀಡ್ 4ಜಿ ಡಾಟಾ
* ದಿನಕ್ಕೆ 100 ಎಸ್.ಎಂ.ಎಸ್. ಫ್ರೀ
* ಹಾಟ್ ಸ್ಟಾರ್ ಉಚಿತ ಸಬ್‌ಸ್ಕ್ರೈಬ್‌

ಬಿ.ಎಸ್.ಎನ್.ಎಲ್ – 2,999 ರೂ.
* 455 ದಿನ ವ್ಯಾಲಿಡಿಟಿ
* ಅನ್ ಲಿಮಿಟೆಡ್ ಲೋಕಲ್, ಎಸ್‌ಟಿಡಿ ಕಾಲ್
* ದಿನಕ್ಕೆ 3 ಜಿಬಿ ಹೈ ಸ್ಪೀಡ್ 3ಜಿ ಡಾಟಾ
* ದಿನಕ್ಕೆ 100 ಎಸ್.ಎಂ.ಎಸ್. ಫ್ರೀ

Comments

Leave a Reply

Your email address will not be published. Required fields are marked *