ಭಾರತಕ್ಕೆ 500 ದಶಲಕ್ಷ ಡಾಲರ್ ಮಿಲಿಟರಿ ನೆರವು ನೀಡಲು ಮುಂದಾದ ಅಮೆರಿಕ

FIGHTER JET

ವಾಷಿಂಗ್ಟನ್: ರಷ್ಯಾದ ಮೇಲಿನ ಶಸ್ತ್ರಾಸ್ತ ಅವಲಂಬನೆಯನ್ನು ಕಡಿತಗೊಳಿಸಲು ಅಮೆರಿಕವು ಭಾರತಕ್ಕಾಗಿ ಬೃಹತ್ ಮಿಲಿಟರಿ ಪ್ಯಾಕೇಜ್ ನೀಡಲು ಮುಂದಾಗುತ್ತಿದೆ.

ಭಾರತವು ರಷ್ಯಾದ ಮೇಲಿನ ಶಸ್ತ್ರಾಸ್ತಗಳ ಅವಲಂಬನೆಯನ್ನು ಕಡಿಮೆಗೊಳಿಸಲು ಜೊತೆಗೆ ಅಮೆರಿಕ-ಭಾರತದ ನಡುವಿನ ಮಿಲಿಟರಿ ಸಂಬಂಧವನ್ನು ಮತ್ತಷ್ಟು ಬಲಗೊಳಿಸಲು ಅಮೆರಿಕ 500 ಮಿಲಿಯನ್ ಡಾಲರ್‌ಗಳ (ಸುಮಾರು 3,800 ಕೋಟಿ ರೂ.) ಬೃಹತ್ ಮೊತ್ತದ ಪ್ಯಾಕೇಜ್ ಅನ್ನು ಸಿದ್ಧಪಡಿಸಿಕೊಂಡಿದೆ ಎಂದು ಅಮೆರಿಕ ಮೂಲಗಳು ತಿಳಿಸಿವೆ. ಇದನ್ನೂ ಓದಿ: 132 ಪ್ರಯಾಣಿಕರಿದ್ದ ಚೀನಾ ವಿಮಾನ ಪತನ ಉದ್ದೇಶಪೂರ್ವಕ – ಅಮೆರಿಕ ವರದಿ ಹೇಳಿದ್ದೇನು?

Military (1)

ಸ್ಟಾಕ್‌ಹೋಮ್ ಇಂಟರ್‌ನ್ಯಾಶನಲ್ ಪೀಸ್ ರಿಸರ್ಚ್ ಸಂಸ್ಥೆಯ ಪ್ರಕಾರ ಕಳೆದ ದಶಕದಲ್ಲಿ ಭಾರತವು ಯುಎಸ್‌ನಿಂದ 4 ಶತಕೋಟಿ ಡಾಲರ್ (ಅಂದಾಜು 3 ಸಾವಿರ ಕೋಟಿ) ಹಾಗೂ ರಷ್ಯಾದಿಂದ 25 ಶತಕೋಟಿ ಡಾಲರ್ (ಅಂದಾಜು 19 ಸಾವಿರ ಕೋಟಿ) ಗಿಂತ ಹೆಚ್ಚಿನ ಮೌಲ್ಯದ ಮಿಲಿಟರಿ ಉಪಕರಣಗಳನ್ನು ಖರೀದಿಸಿದೆ.

ಸದ್ಯ ಅಮೆರಿಕದಿಂದ ಮೆಗಾ ಆಫರ್ ಸಿದ್ಧವಾಗುತ್ತಿದೆ. ಆದರೆ ಭಾರತದ ವಿದೇಶಾಂಗ ಸಚಿವಾಲಯ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ಮರಿಯುಪೋಲ್‍ನಲ್ಲಿ ರಷ್ಯಾಗೆ ಶರಣಾದ ಉಕ್ರೇನ್ ಸೈನಿಕರು

ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಡಳಿತವು ಭಾರತವನ್ನು ದೀರ್ಘಾವಧಿಯ ಭದ್ರತಾ ಪಾಲುದಾರರಾಗಿ ಮಾಡಿಕೊಳ್ಳಲು ಈ ಉಪಕ್ರಮ ರೂಪಿಸಿದೆ. ವಾಷಿಂಗ್ಟನ್ ಭಾರತವನ್ನು ವಿಶ್ವಾಸ ಪಾಲುದಾರನಾಗಿ ಕಾಣಲು ಬಯಸುತ್ತದೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಅಗತ್ಯ ಸಾಧನಗಳನ್ನು ಸರಬರಾಜು ಮಾಡಲಿದೆ. ಇದನ್ನು ಖಚಿತಪಡಿಸಿಕೊಳ್ಳಲು ಅಮೆರಿಕ ಮುಂದಾಗಿದೆ ಎಂದು ಯುಎಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಫೈಟರ್ ಜೆಟ್‌ಗಳು, ನೌಕಾಪಡೆಯ ಹಡಗುಗಳು ಮತ್ತು ಯುದ್ಧ ಟ್ಯಾಂಕರ್‌ಗಳಂತಹ ಪ್ರಮುಖ ಶಸ್ತ್ರಾಸ್ತಗಳನ್ನು ಭಾರತಕ್ಕೆ ನೀಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

Comments

Leave a Reply

Your email address will not be published. Required fields are marked *