132 ಪ್ರಯಾಣಿಕರಿದ್ದ ಚೀನಾ ವಿಮಾನ ಪತನ ಉದ್ದೇಶಪೂರ್ವಕ – ಅಮೆರಿಕ ವರದಿ ಹೇಳಿದ್ದೇನು?

FLIFHT CRASH

ಬೀಜಿಂಗ್: 132 ಜನರನ್ನು ಬಲಿ ಪಡೆದ ಚೀನಾ ವಿಮಾನ ದುರಂತ ಉದ್ದೇಶಪೂರ್ವಕ ಎಂದು ಅಮೆರಿಕದ ಮಾಧ್ಯಮ ವರದಿ ಮಾಡಿದೆ.

ವಿಮಾನ ಪತನಗೊಂಡ ಸ್ಥಳದಲ್ಲಿ ಸಿಕ್ಕ ಬ್ಲಾಕ್‌ಬಾಕ್ಸ್‌ನಿಂದ ಈ ಮಾಹಿತಿ ಪತ್ತೆಯಾಗಿದೆ ಎಂದು ಅಮೆರಿಕದ ವಾಲ್‌ಸ್ಟ್ರೀಟ್‌ ಜರ್ನಲ್ ವರದಿ ಮಾಡಿದೆ. ಇದನ್ನೂ ಓದಿ: ವಿಮಾನದ ಬ್ಲ್ಯಾಕ್‌ ಬಾಕ್ಸ್‌ ಪತ್ತೆ – ಹೇಗೆ ಕೆಲಸ ಮಾಡುತ್ತೆ? ಬೆಂಕಿಯಲ್ಲಿ ಸುಟ್ಟು ಹೋಗಲ್ಲ ಯಾಕೆ? 

FLIGHT

ಕಳೆದ ಮಾರ್ಚ್‌ ಚೀನಾದ ಈಸ್ಟರ್ನ್ ಜೆಟ್ ಕಂಪನಿಗೆ ಸೇರಿದ ವಿಮಾನ ಇಲ್ಲಿನ ಗುವಾಂಗ್ಸಿ ಪ್ರದೇಶದಲ್ಲಿ ಪತನಗೊಂಡು 132 ಜನರು ಮೃತಪಟ್ಟಿದ್ದರು. ಈ ವೇಳೆ ಪೈಲಟ್ ತಪ್ಪಿನಿಂದಾಗಿ ಅಥವಾ ಆತ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ವಿಮಾನವನ್ನು ಉದ್ದೇಶಪೂರ್ವಕವಾಗಿಯೇ ಪತನಗೊಳಿಸಿರಬಹುದು ಎಂಬ ವಾದಗಳು ಹುಟ್ಟಿಕೊಂಡಿದ್ದವು. ಇದೀಗ ಅಮೆರಿಕ ತಜ್ಞರ ವರದಿ ಈ ಕುರಿತು ಸ್ಪಷ್ಟನೆ ನಿಡಿದೆ.

ಫ್ಲೈಟ್‌ ಡೇಟಾ ರೆಕಾರ್ಡರ್ ಮತ್ತು ಕಾಕ್‌ಪಿಟ್ ಧ್ವನಿ ರೆಕಾರ್ಡರ್ ಅನ್ನು ಈಗಾಗಲೇ ಪರೀಕ್ಷೆಗಾಗಿ ಕಳುಹಿಸಲಾಗಿದೆ. 30 ದಿನಗಳಲ್ಲಿ ಪ್ರಾಥಮಿಕ ವರದಿಗಳು ಬರಬಹುದು ಎಂದು ಅಧಿಕಾರಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: 133 ಪ್ರಯಾಣಿಕರಿದ್ದ ಚೀನಾ ವಿಮಾನ ಪತನ

ಏನಿದು ಘಟನೆ?: ಕಳೆದ ಮಾರ್ಚ್ 21ರಂದು 133 ಜನರಿದ್ದ ಚೈನಾ ಈಸ್ಟರ್ನ್ ಏರ್‌ಲೈನ್ಸ್ ಬೋಯಿಂಗ್-737 ವಿಮಾನವು ದಕ್ಷಿಣ ಪ್ರಾಂತ್ಯದ ಗುವಾಂಗ್ಸಿಯಲ್ಲಿ ಪತನಗೊಂಡಿತ್ತು. ವಿಮಾನ ಬಿದ್ದ ರಭಸಕ್ಕೆ ಪರ್ವತದ ಅರಣ್ಯ ಪ್ರದೇಶ ಹೊತ್ತಿ ಉರಿದಿತ್ತು. ವಿಮಾನ ಪರ್ವತಕ್ಕೆ ಅಪ್ಪಳಿಸಿದೆ. ಪರಿಣಾಮವಾಗಿ ಪರ್ವತದ ಪ್ರದೇಶವೆಲ್ಲಾ ಬೆಂಕಿಗಾಹುತಿಯಾಗಿತ್ತು.

ಶಾಂಘೈ ಮೂಲದ ಚೈನಾ ಈಸ್ಟರ್ನ್, ಚೀನಾದ ಪ್ರಮುಖ ಮೂರು ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗಿದೆ. ವಿಮಾನ ಟ್ಯಾಕಿಂಗ್‌ ವೆಬ್‌ಸೈಟ್ `ಫ್ಲೈಟ್‌ ರೇಡರ್-24′ ಮಾಹಿತಿ ಪ್ರಕಾರ, ಕುನ್ಮಿಂಗ್‌ನಿಂದ ಗುವಾಂಗ್‌ಝೌಗೆ ಪ್ರಯಾಣಿಸುತ್ತಿದ್ದ ಎಂಯು 5735 ವಿಮಾನ ಅಪಘಾತಕ್ಕೀಡಾಗಿತ್ತು. ಲ್ಯಾಂಡಿಂಗ್ ಆಗಲು ಸಿದ್ಧವಾಗುತ್ತಿದ್ದ ಸಂದರ್ಭದಲ್ಲಿ ವೇಗ ಕಳೆದುಕೊಂಡು ಪತನಗೊಂಡಿತ್ತು.

Comments

Leave a Reply

Your email address will not be published. Required fields are marked *