ಮದುವೆ ಸಮಾರಂಭದಲ್ಲಿ ರಂಪಾಟ- ಸಂಬಂಧಿಯನ್ನು ಬಿಡಿಸಿದರೆ ಮಾತ್ರ ಮದುವೆ ಎಂದ ವರ!

MARRIAGE

ಲಕ್ನೋ: ಸಹೋದರ ಸಂಬಂಧಿಯನ್ನು ಬಿಡುಗಡೆಗೊಳಿಸುವವರೆಗೆ ಮದುವೆ ಆಗಲ್ಲ ಎಂದು ವರನೊಬ್ಬ ಪಟ್ಟು ಹಿಡಿದ ವಿಚಿತ್ರ ಘಟನೆ ಉತ್ತರ ಪ್ರದೇಶದ ಅಮ್ರೋಹ ಜಿಲ್ಲೆಯಲ್ಲಿ ನಡೆದಿದೆ.

ನನ್ಹೆ ಸಿಂಗ್ ವರ. ಉತ್ತರ ಪ್ರದೇಶದ ಅಮ್ರೋಹದಲ್ಲಿ ಮದುವೆಯ ಮುಂಚೆ ನಡೆಯುವ ಕಾರ್ಯಕ್ರಮಗಳು ಸಂಭ್ರಮದಿಂದ ನಡೆಯುತ್ತಿತ್ತು. ವಧು ಹಾಗೂ ಅವಳ ಕಡೆಯವರು ಸಂಭ್ರಮದಿಂದ ಪಾಲ್ಗೊಂಡಿದ್ದರು. ವಧುವಿನ ಮನೆಯ ಸಮಾರಂಭಕ್ಕೆ ಬಂದ ವರ ನನ್ಹೆ ಸಿಂಗ್ ಇದ್ದಕ್ಕಿದ್ದಂತೆ ಮದುವೆ ಆಗಬೇಕು ಎಂದರೆ ಜೈಲಿನಲ್ಲಿರುವ ಸಹೋದರ ಸಂಬಂಧಿಯನ್ನು ಬಿಡಿಸಬೇಕು ಎಂದು ವಧುವಿನ ಕಡೆಯವರೊಂದಿಗೆ ಜಗಳವಾಡಿದನು.

ಘಟನೆ ಏನು?
ದಿದೌಲಿ ಪೊಲೀಸ್ ಠಾಣೆಯಲ್ಲಿ ವಧುವಿನ ತಂದೆ ಅಂಕಿತ್ ವಿರುದ್ಧ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಅಂಕಿತ್‌ನನ್ನು ಬಂಧಿಸಿದ್ದರು. ಅಂಕಿತ್ ಬಂಧನದ ಹಿನ್ನೆಲೆಯಲ್ಲಿ ವರ ನನ್ಹೆ ಸಿಂಗ್ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ. ಈ ಸಮಯದಲ್ಲಿ ವಧುವಿನ ತಂದೆ ದೂರು ದಾಖಲಿಸಿದ ವಿಷಯ ನನ್ಹೆ ಸಿಂಗ್‌ಗೆ ತಿಳಿದಿದೆ. ಇದರಿಂದಾಗಿ ಕೂಪಿತಗೊಂಡ ನನ್ಹೆ ಸಿಂಗ್ ಮದುವೆ ಸಮಾರಂಭಕ್ಕೆ ಬಂದು ರಂಪಾಟ ನಡೆಸಿದನು. ಇದನ್ನೂ ಓದಿ: ತೆಂಗಿನಕಾಯಿ ಪ್ರಸಾದಕ್ಕಾಗಿ ನೂಕು ನುಗ್ಗಲು – 17 ಮಂದಿಗೆ ಗಾಯ

ಆದರೆ ಕುತೂಹಲ ಅಂಶವೆಂದರೆ ದಂಪತಿ ಈಗಾಗಲೇ ಮದುವೆ ಆಗಿದ್ದರು. ಆದರೆ ಸಾಮೂಹಿಕ ವಿವಾಹದ ಪ್ರಯೋಜನವನ್ನು ಪಡೆದುಕೊಳ್ಳಲು ಪುನಃ ಮದುವೆ ಆಗುತ್ತಿದ್ದಾರೆ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಇದನ್ನೂ ಓದಿ: ಶಾಲೆ ಆವರಣದಲ್ಲೇ ಭಜರಂಗದಳ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ, ಶಸ್ತ್ರಾಸ್ತ್ರ ತರಬೇತಿ

Comments

Leave a Reply

Your email address will not be published. Required fields are marked *