ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದ್ದರೂ, ಕಾಂಗ್ರೆಸ್ ವಂಶವಾದವನ್ನು ಮಾತ್ರ ಬಿಡಲ್ಲ: ಬಿಜೆಪಿ

bjp - congress

ಬೆಂಗಳೂರು: ಕಾಂಗ್ರೆಸ್ ಚಿಂತನಾ ಸಭೆಯಲ್ಲಿ ಕುಟುಂಬಕ್ಕೊಂದೆ ಟಿಕೆಟ್ ನಿಯಮ ಪ್ರಸ್ತಾಪಕ್ಕೆ ಬಿಜೆಪಿ ವ್ಯಂಗ್ಯ ಮಾಡಿದ್ದು,  ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದ್ದರೂ, ಕಾಂಗ್ರೆಸ್ ವಂಶವಾದವನ್ನು ಮಾತ್ರ ಬಿಡಲ್ಲ ಎಂದು ಟೀಕಿಸಿದೆ.

ಕಾಂಗ್ರೆಸ್ ವಿರುದ್ಧ ಬಿಜೆಪಿ ಟ್ವೀಟ್ ಮೂಲಕ ಟೀಕಾಪ್ರಹಾರ ಮಾಡಿದೆ. ಕಾಂಗ್ರೆಸ್ ಚಿಂತನಾ ಸಭೆಯಲ್ಲಿ ನಡೆದ ಒಂದು ಕುಟುಂಬಕ್ಕೆ ಒಂದು ಟಿಕೆಟ್ ನಿಯಮವು ಗಾಂಧಿ ಕುಟುಂಬಕ್ಕೆ ಅನ್ವಯವಾಗುವುದಿಲ್ಲ ಎಂಬುದಕ್ಕೆ ಕಾಂಗ್ರೆಸ್‍ನ್ನು ಕಾಲೆಳೆದಿದೆ.

ಟ್ವೀಟ್‍ನಲ್ಲಿ ಏನಿದೆ?: 
ಕಾಂಗ್ರೆಸ್ ಚಿಂತನಾ ಸಭೆಯಿಂದ ದೇಶಕ್ಕೆ ಲಭ್ಯವಾದ ವಿಶೇಷ ವಾರ್ತೆಯಾದರೂ ಏನು? ಎಂದು ಪ್ರಶ್ನಿಸಿದ ಬಿಜೆಪಿ, ಬೆಳಗ್ಗೆ ಒಂದು ಕುಟುಂಬಕ್ಕೆ ಒಂದು ಟಿಕೆಟ್ ಎಂಬ ಪ್ರಸ್ತಾಪ ಮಾಡಿತು. ಸಂಜೆಯಾಗುತ್ತಲೇ ಈ ನಿಯಮ ಗಾಂಧಿ ಕುಟುಂಬಕ್ಕೆ ಅನ್ವಯವಾಗದು ಎಂಬ ಘೋಷಣೆ ಮಾಡಿತು. ನಂತರ ರಾತ್ರಿಯಾಗುತ್ತಲೇ, ಈ ನಿಯಮ ಗಾಂಧಿ ನಿಷ್ಠ ಕೆಲವು ಕುಟುಂಬಗಳಿಗೆ ಅನ್ವಯವಿಲ್ಲ ಎಂದು ರಾಜಿ ಮಾಡಿಕೊಳ್ಳಲಾಯಿತು.

ಕೆಲವು ಕುಟುಂಬಗಳಿಗೆ ಕಾಂಗ್ರೆಸ್ ನಿಯಮ ಅನ್ವಯವಾಗುವುದಿಲ್ಲ ಎಂಬ ಮಾತಿನ ಅರ್ಥವೇನು? ಯಾವುದು ಆ ಕುಟುಂಬಗಳು?ಇಡೀ ದೇಶಕ್ಕೆ ಕುಟುಂಬ ರಾಜಕಾರಣವನ್ನು ಪರಿಚಯಿಸಿದ ಕಾಂಗ್ರೆಸ್ ಈಗ ಅದನ್ನು ಪೋಷಿಸುವುದು ಅನಿವಾರ್ಯವಾಗಿದೆ. ಕಾಂಗ್ರೆಸ್ ನೀತಿಯ ಬಗ್ಗೆ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದ್ದರೂ ವಂಶವಾದವನ್ನು ಮಾತ್ರ ಬಿಡುವುದಿಲ್ಲ. ಇದನ್ನೂ ಓದಿ: ನಾವು ಕರ್ನಾಟಕದ ಕನ್ನಡಿಗರಲ್ಲ, ಗೋವಾ ಕನ್ನಡಿಗರು: ಸಿದ್ದಣ್ಣ ಮೇಟಿ

ಧೃತರಾಷ್ಟ್ರ ಮೋಹ ಎಂಬ ಮಾತು ರಾಜಕಾರಣದಲ್ಲಿ ಸದಾ ಜೀವಂತವಾಗಿರ ಬೇಕೆಂಬುದನ್ನು ಕಾಂಗ್ರೆಸ್ ಬಯಸುತ್ತದೆ. ಏಕೆಂದರೆ ತಮ್ಮ ನಂತರ ತಮ್ಮ ಪಳಯುಳಿಕೆಗಳನ್ನೂ ಅಧಿಕಾರದಲ್ಲಿ ಪ್ರತಿಷ್ಠಾಪಿಸಬೇಕೆಂಬ ವಾಂಛೆ ಕಾಂಗ್ರೆಸ್ ರಕ್ತದಲ್ಲಿಯೇ ಇದೆ. ನೆಹರೂ, ಇಂದಿರಾ, ರಾಜೀವ್, ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿ ಇವೆರಲ್ಲರೂ ಇದಕ್ಕೆ ಜ್ವಲಂತ ಉದಾಹರಣೆ ಆಗಿದ್ದಾರೆ.

ದೇಶವೇ ಬೆರಗುಗಣ್ಣಿನಿಂದ ನೋಡುತ್ತಿದ್ದ ಉತ್ತರ ಪ್ರದೇಶದ ಚುನಾವಣೆಯಲ್ಲಿ ಮೋದಿ ಅವರು ಮಹತ್ವದ ನಿರ್ಧಾರ ಕೈಗೊಂಡು ವಂಶವಾದಕ್ಕೆ ಪೋಷಣೆ ನೀಡದೇ ಬಲಾಢ್ಯರ ಮಕ್ಕಳಿಗೆ ಟಿಕೆಟ್ ನಿರಾಕರಿಸಿದರು. ಈ ನಿರ್ಧಾರದಿಂದ ಪಕ್ಷಕ್ಕೆ ಸೋಲಾದರೆ ಅದರ ಹೊಣೆ ತಾವೇ ಹೊರುವುದಾಗಿ ಘೋಷಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಈ ಧೈರ್ಯ ತೋರಿಸುವ ತಾಕತ್ತಿದೆಯೇ ಎಂದು ಬಿಜೆಪಿ ಸವಾಲು ಹಾಕಿದೆ. ಇದನ್ನೂ ಓದಿ: ಸಿಎಂ ಕಾರ್ಯಕ್ರಮಕ್ಕೂ ತಟ್ಟಿತು ಲೋಡ್ ಶೆಡ್ಡಿಂಗ್ ಬಿಸಿ

Comments

Leave a Reply

Your email address will not be published. Required fields are marked *