ಮಡಿಕೇರಿ: ಕೋವಿಡ್‍ನಿಂದ ಲಕ್ಷಾಂತರ ಜನರ ಸಾವಿಗೆ ಬಿಜೆಪಿ ಸರ್ಕಾರವೇ ನೇರ ಕಾರಣ. ಹಣ ಮಾಡಲು ಬಿಜೆಪಿ ಸರ್ಕಾರದವರು ನಾಲ್ಕನೇ ಅಲೆ ಬರುತ್ತದೆ ಎಂದು ಹೇಳುತ್ತಿದ್ದಾರೆ ಎಂದು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ನಲಪಾಡ್ ಹ್ಯಾರಿಸ್ ಗಂಭೀರ ಆರೋಪ ಮಾಡಿದ್ದಾರೆ.

ಮಡಿಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋವಿಡ್‍ನಿಂದ ಲಕ್ಷಾಂತರ ಜನರು ಸತ್ತು ಹೋಗಿದ್ದಾರೆ. ಇದಕ್ಕೆ ಪ್ರಧಾನಿ ಅಂದಿನ ಮುಖ್ಯಮಂತ್ರಿ ನೇರ ಕಾರಣ ಕೊರೊನಾದಿಂದ 4.7 ಲಕ್ಷ ಜನ ಸತ್ತಿದ್ದಾರೆ ಅಂತ ಕೇಂದ್ರ ಸರ್ಕಾರ ಹೇಳ್ತಿದೆ. ವಿಶ್ವ ಸಂಸ್ಥೆ 47 ಲಕ್ಷ ಜನ ಸತ್ತಿದ್ದಾರೆ ಅಂತ ಹೇಳಿದೆ. ದೇಶದಲ್ಲಿ ಸತ್ತವರ ಸಾವಿಗೆ ಬಿಜೆಪಿ ಸರ್ಕಾರ ನೇರ ಹೊಣೆಯಾಗಿದೆ. 40% ಕಮಿಷನ್ ಶುರುವಾಗಿದ್ದೇ ಕೊರೊನಾದಿಂದ. ಸತ್ತವರ ಸಂಖ್ಯೆಯನ್ನೂ ಸುಳ್ಳು ಹೇಳಲಾಗುತ್ತಿದೆ. ಪರಿಹಾರ ಕೊಡಬೇಕೆಂಬ ಕಾರಣಕ್ಕೆ ಈ ಥರ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿಗಾಗಿ ಎಲ್ಲ ಕಾನೂನಾತ್ಮಕ ಪ್ರಯತ್ನ: ಬೊಮ್ಮಾಯಿ

ಪರಿಹಾರ ಹಣದಲ್ಲಿ ಕಮಿಷನ್ ಸಿಗೋದಿಲ್ಲ. ಸತ್ತವರಿಗೆ ಸಾಂತ್ವನ ಹೇಳೋದಕ್ಕೂ ಸರ್ಕಾರ ಮುಂದಾಗಿಲ್ಲ. ಅಷ್ಟೇ ಅಲ್ಲದೇ ಕೊಡಗು ಜಿಲ್ಲೆಯ ಶಾಸಕಧ್ವಯರು ಇಬ್ಬರು ಭ್ರಷ್ಟಾಚಾರದಲ್ಲಿದ್ದಾರೆ. ಕೊಡಗಿನ ಶಾಸಕರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಹೆದರಿಸುವ ಕೆಲಸ ಹಾಗೂ ಕೇಸ್ ದಾಖಲು ಮಾಡುವ ಕೆಲಸ ಮಾಡುತ್ತಿದ್ದಾರೆ. ಶಾಸಕರನ್ನು ಪ್ರಶ್ನೆ ಮಾಡಿದ್ರೆ ಸುಳ್ಳು ಪ್ರಕರಣ ದಾಖಲಿಸಲು ಪ್ರಯತ್ನಿಸುತ್ತಿದ್ದಾರೆ. ಅದನ್ನೆಲ್ಲಾ ಇನ್ನೂ ಬಿಟ್ಟುಬಿಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ನನಗೆ ಅವಕಾಶ ಕೊಟ್ಟಿದ್ದು, ಬೆನ್ನೆಲುಬಾಗಿ ನಿಂತಿದ್ದು ರಾಹುಲ್‍ಗಾಂಧಿ: ರಮ್ಯಾ
ಸತ್ತವರ ಲೆಕ್ಕ ತಪ್ಪಿಸುವಲ್ಲಿ ಪರಿಹಾರ ನೀಡುವುದರಲ್ಲೂ ಸರ್ಕಾರ ತಾರತಮ್ಯ ಮಾಡಿದೆ. ಅದ್ರೆ, ನಾಲ್ಕನೇ ಅಲೆ ಮೇಲೆ ನನಗೆ ನಂಬಿಕೆ ಇಲ್ಲ. ಬಿಜೆಪಿ ದುಡ್ಡು ಹೊಡೆಯೋಕೆ ನಾಲ್ಕನೇ, ಐದನೇ ಅಲೆ ತರುತ್ತದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

Leave a Reply