ಬಾಲಿವುಡ್ ಚೇತರಿಕೆಗೆ ಅಕ್ಷಯ್ ಕುಮಾರ್ ನಟನೆಯ ಪೃಥ್ವಿರಾಜ್: ಮೋಡಿ ಮಾಡ್ತಾರಾ ಮಾಜಿ ವಿಶ್ವಸುಂದರಿ?

ಆರ್.ಆರ್.ಆರ್ ಮತ್ತು ಕೆಜಿಎಫ್ 2 ಸಿನಿಮಾದಿಂದಾಗಿ ಅಕ್ಷರಶಃ ನಲುಗಿದೆ ಬಾಲಿವುಡ್. ಬಿಟೌನ್ ನಲ್ಲಿ ದಕ್ಷಿಣದ ಸಿನಿಮಾಗಳು ನೂರಾರು ಕೋಟಿ ಬಾಚುತ್ತಿವೆ. ಹೀಗಾಗಿ ಅಲ್ಲಿನ ನಿರ್ಮಾಪಕರು, ನಿರ್ದೇಶಕರು ನಿದ್ದೆಗೆಟ್ಟು ಕೂತಿದ್ದಾರೆ. ಕೊರೋನಾ ಕಾರಣದಿಂದಾಗಿ ಎರಡು ವರ್ಷಗಳಿಂದ ತತ್ತರಿಸುತ್ತಿದ್ದ ಬಾಲಿವುಡ್ ನಲ್ಲಿ ಭರವಸೆಯ ಸಿನಿಮಾ ಎನ್ನುವಂತೆ ಪೃಥ್ವಿರಾಜ್ ಮೂಡಿ ಬಂದಿದೆ. ಇದನ್ನೂ ಓದಿ: ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ

ಇಂದು ಪೃಥ್ವಿರಾಜ್ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ್ದು, ಇಡೀ ಸಿನಿಮಾ ಎಷ್ಟೊಂದು ಅದ್ಧೂರಿಯಾಗಿ ಮೂಡಿ ಬಂದಿರಬಹುದು ಎನ್ನುವುದಕ್ಕೆ ಸಾಕ್ಷಿಯಾಗಿದೆ. ಇದೊಂದು ಐತಿಹಾಸಿಕ ಸಿನಿಮಾವಾಗಿದ್ದು, ಯುದ್ಧದ ಸನ್ನಿವೇಶಗಳು ಸೇರಿದಂತೆ ಹಾಕಿರುವ ಸೆಟ್ ಸಿನಿಮಾದ ಗೆಲುವಿಗೆ ಸಾಕ್ಷಿ ಅನ್ನುವಂತಿವೆ. ಹಾಗಾಗಿ ಬಾಲಿವುಡ್ ಗೆ ಈ ಸಿನಿಮಾ ಚೇತರಿಕೆಯ ಟಾನಿಕ್ ಎಂದು ಕರೆಯಲಾಗುತ್ತಿದೆ. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ

ಪೃಥ್ವಿರಾಜ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದು, ಅದ್ಭುತವಾಗಿ ಅಕ್ಷಿ ಕಾಣಿಸಿಕೊಂಡಿದ್ದಾರೆ. ಮ್ಯಾನರಿಸಂ ಮತ್ತು ಲುಕ್ ಹೇಳಿ ಮಾಡಿಸಿದಂತಿವೆ. ಅಕ್ಷಯ್ ಕುಮಾರ್ ಜತೆ ಸಂಜಯ್ ದತ್ ಮತ್ತು ಸೋನು ಸೂದ್ ಕೂಡ ಪಾತ್ರ ಮಾಡಿರುವುದರಿಂದ ಬಾಲಿವುಡ್ ಪಾಲಿಗೆ ಪೃಥ್ವಿರಾಜ್ ಸಿನಿಮಾ ಅಕ್ಷಯಪಾತ್ರೆ ಆಗಲಿದೆ ಎಂದು ಅಂದಾಜಿಸಲಾಗುತ್ತಿದೆ. ಇದನ್ನೂ ಓದಿ : ಮಿಸೆಸ್ ಇಂಡಿಯಾ ಆಗಲು ನಿವೇದಿತಾ ಗೌಡ ತಯಾರಿ : ಕ್ಯಾಟ್ ವಾಕ್ ವಿಡಿಯೋದಲ್ಲಿ ಚಂದನ್ ಶೆಟ್ಟಿ ಬೊಂಬೆ

ಈ ಸಿನಿಮಾದ ಮೂಲಕ ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದಾರೆ. ಪೃಥ್ವಿರಾಜ್ ಇವರ ಚೊಚ್ಚಲು ನಟನೆಯ ಸಿನಿಮಾ. ಈ ಸಿನಿಮಾದಲ್ಲಿ ಅವರು ವಿಶೇಷ ಪಾತ್ರವನ್ನೇ ನಿರ್ವಹಿಸಿದ್ದಾರೆ. ಟ್ರೇಲರ್ ನಲ್ಲೂ ಈ ಪಾತ್ರವನ್ನು ಹೈಲೈಟ್ ಮಾಡಲಾಗಿದೆ. ಈ ಸಿನಿಮಾ ಇವರಿಗೆ ಬ್ರೇಕ್ ನೀಡುವ ಎಲ್ಲ ಸೂಚನೆಯನ್ನೂ ನೀಡಿದೆ.

ಸದ್ಯ ಬಿಡುಗಡೆ ಆಗಿರುವ ಪೃಥ್ವಿರಾಜ್ ಟ್ರೇಲರ್ ಅದ್ದೂರಿ ಮೇಕಿಂಗ್ ನಿಂದ ಕೂಡಿದ್ದು, ಕಾಸ್ಟ್ಯೂಮ್, ಸೆಟ್, ಯುದ್ಧ ಮತ್ತು ಭಾರೀ ಗ್ರಾಫಿಕ್ಸ್ ಕಾರಣದಿಂದಾಗಿ ಕುತೂಹಲ ಮೂಡಿಸಿದೆ. ಈ ವರ್ಷದಲ್ಲಿ ತೆರೆ ಕಾಣುತ್ತಿರುವ ಮೊದಲ ಬಾಲಿವುಡ್ ನ ಅದ್ಧೂರಿ ಸಿನಿಮಾ ಇದಾಗಿದ್ದು, ಬಾಲಿವುಡ್ ಸಿನಿಮಾ ರಂಗಕ್ಕೆ ಹಿಡಿದಿರುವ ಗ್ರಹಣವನ್ನು ಈ ಸಿನಿಮಾ ಬಿಡಿಸಲಿದೆ.

Comments

Leave a Reply

Your email address will not be published. Required fields are marked *