ಮೈಸೂರಿನಲ್ಲೊಂದು ಅಪರೂಪ- ಅಗಲಿದ ತಂದೆಯ ಸಿಲಿಕಾನ್ ಪ್ರತಿಮೆ ಮುಂದೆ ಮಗನ ವಿವಾಹ

ಮೈಸೂರು: ಬೆಳೆದ ಮಕ್ಕಳಿರುವ ಮನೆಯಲ್ಲಿ ತಂದೆ-ತಾಯಿಯಂದಿರ ಆಸೆ ಒಂದೇ ಆಗಿರುತ್ತೆ. ನಮ್ಮ ಕಣ್ಣೆದುರೇ ಮಕ್ಕಳಿಗೆ ನಾಲ್ಕು ಅಕ್ಷತೆ ಕಾಳು ಹಾಕಿ ಆಶೀರ್ವಾದ ಮಾಡಬೇಕು ಅಂತ. ಆದರೆ ಎಲ್ಲದಕ್ಕೂ ವಿಧಿ ಬಿಡಲ್ಲ. ಅದೇ ರೀತಿ ಮೈಸೂರಿನಲ್ಲೂ ಮಗನ ಮದುವೆ ಆಸೆ ಕಂಡಿದ್ದ ಅಪ್ಪ ಕೊರೊನಾದಿಂದ ಸಾವನ್ನಪ್ಪಿದ್ರು. ಇದರಿಂದ ಮನನೊಂದಿದ್ದ ಮಗ ತಂದೆ ಇಲ್ಲದೇ ತಾನು ಮದ್ವೆ ಆಗಲ್ಲ ಎಂದು ಪಣ ತೊಟ್ಟಿದ್ದ. ಅದೇ ರೀತಿ ಈಗ ಅಪ್ಪನ ಸಿಲಿಕಾನ್ ಪ್ರತಿಮೆ ಎದುರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮೈಸೂರು ಜಿಲ್ಲೆ ನಂಜನಗೂಡನಲ್ಲಿ ಚಿಕ್ಕಮಗಳೂರು ಮೂಲದ ಡಾ.ಯತೀಶ್ ಹಾಗೂ ಚಾಮರಾಜನಗರ ಮೂಲದ ಡಾ.ಅಪೂರ್ವ ದಂಪತಿ ಆಗಿದ್ದಾರೆ. ವರ ಯತೀಶ್ ತಂದೆ ರಮೇಶ್, ಕೋವಿಡ್‍ನಿಂದ ಮೃತಪಟ್ಟಿದ್ರು. ತಂದೆ ಇಲ್ಲದೇ ಮದುವೆ ಮಾಡಿಕೊಳ್ಳಲು ಇಷ್ಟ ಇರದ ಡಾ.ಯತೀಶ್ ತನ್ನ ಸಹೋದರನ ಜೊತೆಗೂಡಿ ತಂದೆಯ ಪ್ರತಿಮೆಯನ್ನು ಸಿಲಿಕಾನ್‍ನಲ್ಲಿ ಮಾಡಿಸಲು ನಿರ್ಧರಿಸಿದ್ರು. ಅದರಂತೆ ತಂದೆ ಸಿಲಿಕಾನ್ ಪ್ರತಿಮೆ ಮಾಡಿಸಿ ವಿವಾಹವಾಗಿದ್ದಾರೆ. ಅಲ್ಲದೇ ಎಲ್ಲರ ಮೆಚ್ಚುಗೆಗೂ ಪಾತ್ರ ರಾಗಿದ್ದಾರೆ. ಇದನ್ನೂ ಓದಿ: ರಸ್ತೆ ಗುಂಡಿಗೆ ಬಿದ್ದ ಕಿರುತೆರೆ ಕಲಾವಿದೆ – N.R ಕಾಲೋನಿ ಬಳಿ ನಟಿ ಸುನೇತ್ರಾ ಸ್ಕೂಟರ್ ಅಪಘಾತ

ತಂದೆಯ ಸಿಲಿಕಾನ್ ಪ್ರತಿಮೆಯ ಪಕ್ಕದಲ್ಲೆ ತಾಯಿಯನ್ನು ಕೂರಿಸಿ ಪೋಷಕರ ಸಮ್ಮುಖದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರತಿಮೆ ನೋಡಿದ ಸಂಬಂಧಿಕರು ಪ್ರತಿಮೆ ಪಕ್ಕದಲ್ಲಿ ನಿಂತು ಫೋಟೋ ತೆಗೆಸಿ ಕೊಂಡು ಮಕ್ಕಳ ಈ ಕಾರ್ಯಕ್ಕೆ ಶಹಭಾಷ್ ಎಂದ್ರು.

ಈ ಪ್ರತಿಮೆ ಬಹು ವರ್ಷದ ಕಾಲ ಕಾಪಾಡಿಕೊಳ್ಳಬಹುದು. ಈ ಪ್ರತಿಮೆಯ ಬಟ್ಟೆಯನ್ನೂ ಸಹ ಬದಲಿಸಬಹುದು. ಜೊತೆಗೆ ಮೆಂಟೈನೆನ್ಸ್ ಕೂಡ ಬಹಳ ಸುಲಭ. ಈ ಮದುವೆಯ ನಂತರ ಪ್ರತಿಮೆಯನ್ನು ಮನೆಯ ಹಾಲ್‍ನಲ್ಲಿ ಶಾಶ್ವತ ವಾಗಿ ಇಡಲು ಸಹೋದರರು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಸೆಲ್ಫಿ ತೆಗೆಯಲು ಹೋಗಿ ನೀರು ಪಾಲಾದ ಗೃಹಿಣಿ

Comments

Leave a Reply

Your email address will not be published. Required fields are marked *