ಪ್ರಿಯಾಂಕ ಉಪೇಂದ್ರ ನಟನೆಯ 50ನೇ ಸಿನಿಮಾ ಯಾವುದು?

ಸ್ಯಾಂಡಲ್‌ವುಡ್‌ನಲ್ಲಿ ಆ್ಯಕ್ಷನ್ ಪಾತ್ರಗಳ ಮೂಲಕ ಗಮನ ಸೆಳೆದಿರೋ ನಟಿ ಪ್ರಿಯಾಂಕ ಉಪೇಂದ್ರ ಕನ್ನಡದ ಜತೆ ಪರಭಾಷಾ ಚಿತ್ರಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಚಿತ್ರಗಳು ನಟಿಯ ಕೈಯಲ್ಲಿದೆ. ಇದರ ಬೆನ್ನಲ್ಲೇ `ಡಿಟೆಕ್ಟೀವ್ ತೀಕ್ಷ್ಣʼ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದರಲ್ಲೂ ಪ್ರಿಯಾಂಕ ನಟನೆಯ 50ನೇ ಚಿತ್ರಕ್ಕೆ ವಿಭಿನ್ನ ಪಾತ್ರದ ಮೂಲಕ ಬರುತ್ತಿದ್ದಾರೆ.

ಪ್ರಿಯಾಂಕ ಅಭಿನಯದ `ಡಿಟೆಕ್ಟೀವ್ ತೀಕ್ಷ್ಣʼ 50ನೇ ಚಿತ್ರವಾಗಿದ್ದು, ಇದೊಂದು ಬಿಗ್ ಬಜೆಟ್‌ನ ಪ್ಯಾನ ಇಂಡಿಯಾ ಚಿತ್ರವಾಗಿದೆ. ಏಳು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ತ್ರಿವಿಕ್ರಮ ರಾಘು ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಪ್ರಿಯಾಂಕ ಉಪೇಂದ್ರ `ಡಿಟೆಕ್ಟೀವ್ ತೀಕ್ಷ್ಣʼ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.

ಎಂದೂ ಮಾಡಿರದ ಡಿಫರೆಂಟ್ ಪಾತ್ರದಲ್ಲಿ ಪ್ರಿಯಾಂಕ ಕಾಣಿಸಿಕೊಳ್ತಿದ್ದು, ಮೇ 12ರಂದು ಮಗ ಆಯುಷ್ ಹುಟ್ಟು ಹಬ್ಬದಂದು ಆಯುಷ್ ಮತ್ತು ನಟ ಉಪೇಂದ್ರ ಚಿತ್ರದ ಮೋಷನ್ ಪೋಸ್ಟರ್ ಜತೆ ಶೀರ್ಷೀಕೆ ಅನಾವರಣ ಮಾಡಲಿದ್ದಾರೆ. ರಘು ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದು, ಚಿತ್ರಕ್ಕೆ ಪುರುಷೋತ್ತಮ ಬಿ ಕೊಯೂರು ಬಂಡವಾಳ ಹೂಡುತ್ತಿದ್ದಾರೆ. ಇದನ್ನೂ ಓದಿ: ಆರ್‌ಜೆ ಆಗಿ `ಆನ್ ಏರ್’ ಆಗ್ತಿದ್ದಾರೆ `ಓಲ್ಡ್ ಮಾಂಕ್’ ಶ್ರೀನಿ

ಆ್ಯಕ್ಷನ್ ಕ್ವೀನ್‌ಗೆ ಟಕ್ಕರ್ ಕೊಡಲು ದಕ್ಷಿಣ ಭಾರದ ಖ್ಯಾತ ವಿಲನ್‌ರೊಬ್ಬರು ಬಣ್ಣ ಹಚ್ಚಲಿದ್ದಾರೆ. ಎರಡು ಭಾಗಗಳಲ್ಲಿ ಬರುತ್ತಿರೋ `ಡಿಟೆಕ್ಟೀವ್ ತೀಕ್ಷ್ಣʼ ಇದೇ ಜೂನ್‌ನಿಂದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಕೇರಳ, ರಾಜಸ್ತಾನ, ಗೋವಾ ಸೇರಿದಂತೆ ಹಲವೆಡೆ 120 ದಿನಗಳ ಕಾಲ ಶೂಟಿಂಗ್ ನಡೆಯಲಿದೆ. ನಟಿ ಪ್ರಿಯಾಂಕ ಉಪೇಂದ್ರ ಅವರನ್ನ ಡಿಟೆಕ್ಟೀವ್ ಅವತಾರದಲ್ಲಿ ನೋಡಲು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

Comments

Leave a Reply

Your email address will not be published. Required fields are marked *