ಸ್ಮೈಲ್ ಮೂಲಕ ಕೋಟಿ ಜನರ ಹೃದಯ ಗೆದ್ದಾಕೆಯಿಂದ 16ನೇ ವಯಸ್ಸಿಗೆ ದುಡುಕಿನ ನಿರ್ಧಾರ..!

ಕೈಲಿಯಾ ಪೋಸಿ ಅಂದಾಕ್ಷಣ ಥಟ್ಟನೆ ನೆನಪಾಗುವುದು ಅವಳ ನಗು. ಈ ನಗುವಿಗಾಗಿಯೇ ಆಕೆ ಇಂಟರ್ ನೆಟ್ ನಲ್ಲಿ ಫೇಮಸ್ ಆಗಿದ್ದಳು. ಹಾಗಾಗಿಯೇ ಇವಳ ಎಮೋಜಿ ಸೃಷ್ಟಿಯಾಗಿತ್ತು. ಈ ಸುಂದರಿಯ ನಗುವಿನ ಎಮೋಜಿಯನ್ನು ಬಳಸದವರೇ ಇಲ್ಲ. ಹತ್ತಾರು ವರ್ಷಗಳ ಕಾಲ ನಗುವಿನಿಂದಲೇ ಅಸಂಖ್ಯಾತ ಅಭಿಮಾನಿಗಳನ್ನು ಪಡೆದಿದ್ದ ಕೈಲಿಯಾ ಪೋಸಿ, ದುಡುಕಿನ ನಿರ್ಧಾರದಿಂದಾಗಿ 16ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾಳೆ. ಇದನ್ನೂ ಓದಿ : ಶತ್ರುಘ್ನಾ ಸಿನ್ಹಾ ಮೇಲೆ ಲೈಂಗಿಕ ಹಗರಣ ದಂಧೆ ಆರೋಪ : ನಟಿ ವಿರುದ್ಧ ತಿರುಗಿ ಬಿದ್ದ ಸಿನ್ಹಾ ಕುಟುಂಬ

ಹೌದು, ಕೈಲಿಯಾ ಪೋಸಿಗೆ ಅದೇನಾಗಿತ್ತೋ ಏನೋ ಆತ್ಮಹತ್ಯೆ ಮಾಡಿಕೊಂಡು ಇಡೀ ಕುಟುಂಬವನ್ನೇ ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿದ್ದಾರೆ. ತಮ್ಮ ಮುದ್ದಾದ ಮಗುವನ್ನು ಕಳೆದುಕೊಂಡ ಕುಟುಂಬ ಕಣ್ಣೀರು ಹಾಕುತ್ತಿದೆ. ಇದನ್ನೂ ಓದಿ : ಸ್ಟಾರ್ ನಟಿ ಪೂಜಾ ಹೆಗಡೆ ನಿದ್ದೆಗೆಡಿಸಿದ ಸಾಲು ಸಾಲು ಸೋಲು

ತಮ್ಮ ಮಗಳು ಕೈಲಿಯಾ ಪೋಸಿ ವಾಶಿಂಗ್ಟನ್ ನಲ್ಲಿ ಕೊನೆಯುಸಿರೆಳೆದಿರುವುದಾಗಿ ಕುಟುಂಬಸ್ಥರು ಖಚಿತ ಪಡಿಸಿದ್ದಾರೆ. ಫೇಸ್ ಬುಕ್ ನಲ್ಲಿ ಪೋಸಿ ತಾಯಿ ಪೋಸ್ಟ್ ಹಾಕುವ ಮೂಲಕ ಖಚಿತ ಪಡಿಸಿದ್ದಾರೆ. ‘ನನ್ನ ಮಗಳು ಹೀಗೆ ಮಾಡಿಕೊಳ್ಳುತ್ತಾಳೆ ಎಂದು ಕನಸಲ್ಲೂ ಎಣಿಸಿರಲಿಲ್ಲ. ನನಗೆ ಮಾತೇ ಬರುತ್ತಿಲ್ಲ. ನನ್ನ ಇಡೀ ಕುಟುಂಬದ ದುಃಖದಲ್ಲಿದೆ. ಮೈ ಬೇಬಿ ಫಾರೆವರ್’ ಎಂದು ಪೋಸಿ ತಾಯಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಅಮೆರಿಕಾದ ಟಿವಿ ಸರಣಿ ‘ಟೊಡ್ಲರ್ ಆಂಡ್ ತೈರಾಸ್’ ಶೋನಲ್ಲಿ ಪೋಸಿ ಭಾಗಿಯಾಗಿದ್ದಳು. ಚಿಕ್ಕಂದಿನಿಂದಲೇ ಜಿಐಎಫ್ ನ ನಗುವ ಹುಡುಗಿ ಎಂದೇ ಎಲ್ಲರಿಗೂ ಪರಿಚಯವಾಗಿದ್ದ ಈ ಹುಡುಗಿ ಲೆಕ್ಕವಿಲ್ಲದಷ್ಟು ಪ್ರಶಸ್ತಿಗಳು ಸಂದಿದ್ದವು. ವ್ಯಂಗ್ಯ ಚಿತ್ರಕಾರಳಾಗಿಯೂ ಪೋಸಿ ಹೆಸರು ಮಾಡಿದ್ದಳು. ಇದೀಗ ಕೆನಡಾದ ಗಡಿಯಿಂದ ಕೆಲವೇ ಮೈಲುಗಳಷ್ಟು ದೂರದಲ್ಲಿರುವ ವಾಷಿಂಗ್ಟನ್ ರಾಜ್ಯದ ಬೀರ್ಚ್ ಬೇ ಸ್ಟೇಟ್ ಪಾರ್ಕ್ ನಲ್ಲಿ ಪೋಸಿ ದೇಹವು ಪತ್ತೆಯಾಗಿದೆ ಎಂದು ಹಲವಾರು ಪ್ರಕಟಣೆಗಳು ವರದಿ ಮಾಡಿವೆ.

Comments

Leave a Reply

Your email address will not be published. Required fields are marked *