ಮೆಗಾಸ್ಟಾರ್ ಚಿರಂಜೀವಿ ಜೊತೆ ಬಾಲಿವುಡ್ ಬ್ಯಾಡ್ ಬಾಯ್ ಡಾನ್ಸ್

Chiranjeevi

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅಭಿನಯಿಸಿರುವ ಅಪ್‍ಕಮಿಂಗ್ ಸಿನಿಮಾಗಳಲ್ಲಿ ಗಾಡ್‍ಫಾದರ್ ದೊಡ್ಡ ಹೈಪ್ ಕ್ರಿಯೆಟ್ ಮಾಡಿದೆ. ವಿಶೇಷವೆಂದರೆ ಈ ಸಿನಿಮಾದಲ್ಲಿ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಕೂಡ ವಿಶೇಷ ಪಾತ್ರದಲ್ಲಿ ನಟಿಸುವ ಮೂಲಕ ಚಿರಂಜೀವಿಗೆ ಸಾಥ್ ನೀಡುತ್ತಿದ್ದಾರೆ. ಸದ್ಯ ಇಬ್ಬರೂ ಘಟಾನುಘಟಿ ಸ್ಟಾರ್ಸ್ ಸಿನಿಮಾದ ವಿಶೇಷ ಸಾಂಗ್‍ವೊಂದರಲ್ಲಿ ಒಟ್ಟಿಗೆ ಹೆಜ್ಜೆ ಹಾಕಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಸುದ್ದಿ ಟಾಲಿವುಡ್ ಸಿನಿ ಅಂಗಳದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಹೌದು, ನಟ ಚಿರಂಜೀವಿ ಹಾಗೂ ಸಲ್ಮಾನ್‍ಖಾನ್ ಗಾಡ್ ಫಾದರ್ ಸಿನಿಮಾದ ಹಾಡೊಂದರಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಲು ನಿರ್ದೇಶಕ ಮೋಹನ್ ರಾಜ್ ಅವರು ಪ್ರಭುದೇವ್ ಅವರನ್ನು ಕರೆತರುತ್ತಿದ್ದಾರೆ. ಈ ಚಿತ್ರಕ್ಕೆ ಸಂಗೀತ ನಿರ್ದೇಶಕ ಎಸ್.ಥಮನ್ ಸಂಗೀತ ಸಂಯೋಜನೆ ಮಾಡುತ್ತಿದ್ದು, ಈ ವಿಶೇಷ ಹಾಡಿನ ಜವಾಬ್ದಾರಿಯನ್ನು ಸಹ ತಾವೇ ಹೊತ್ತುಕೊಂಡಿದ್ದಾರೆ.

ಈ ಕುರಿತಂತೆ ಎಸ್.ಥಮನ್ ಅವರು ಟ್ವಿಟ್ಟರ್‌ನಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ. ಫೋಟೋದಲ್ಲಿ ಪ್ರಭುದೇವ್, ಚಿರಂಜೀವಿ, ಜಯಂ ಮೋಹನ್ ರಾಜ್, ಎಸ್. ಥಮನ್ ಅವರು ಒಟ್ಟಿಗೆ ಇರುವುದನ್ನು ಕಾಣಬಹುದಾಗಿದೆ. ಅಲ್ಲದೇ ಕ್ಯಾಪ್ಷನ್‍ನಲ್ಲಿ ನಮ್ಮ ಬಾಸ್ ಚಿರಂಜೀವಿ ಮತ್ತು ಸಲ್ಮಾನ್‍ಖಾನ್ ಒಟ್ಟಿಗೆ ಅಭಿನಯಿಸುತ್ತಿರುವ ಹಾಡಿಗೆ ಪ್ರಭುದೇವ್ ಅವರು ನೃತ್ಯ ಸಂಯೋಜಿಸಲಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: 1957ರ ನಾಣ್ಯ ಮಾರಲು ಹೋಗಿ ಲಕ್ಷಾಂತರ ರೂ. ಕಳೆದುಕೊಂಡ – ಆನ್‍ಲೈನ್ ವಂಚನೆಯಿಂದ ವ್ಯಕ್ತಿ ಆತ್ಮಹತ್ಯೆ

ಗಾಡ್‍ಫಾದರ್ ಸಿನಿಮಾ ಮಲಯಾಳಂನ ಮೋಸ್ಟ್ ಹ್ಯಾಪನಿಂಗ್ ಹೀರೋ ಮೋಹನ್‍ಲಾಲ್ ಹಾಗೂ ನಟ ಪೃಥ್ವಿರಾಜ್ ನಟಿಸಿರುವ ಮಲಯಾಳಂ ಬ್ಲಾಕ್‍ಬಸ್ಟರ್ ಚಿತ್ರ ಲೂಸಿಫರ್(2019)ನ ರಿಮೇಕ್ ಆಗಿದೆ. ಸದ್ಯ ತೆಲುಗಿನಲ್ಲಿ ಗಾಡ್ ಫಾದರ್ ಸಿನಿಮಾಕ್ಕೆ ಮೋಹನ್ ರಾಜಾ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಕೊನಿಡೇಲಾ ಪ್ರೊಡಕ್ಷನ್ ಕಂಪನಿ ಮತ್ತು ಸೂಪರ್ ಗುಡ್ ಫಿಲ್ಮ್ಸ್ ಚಿತ್ರವನ್ನು ನಿರ್ಮಿಸುತ್ತಿದೆ. ವಿಶೇಷವೆಂದರೆ ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ಸಿನಿಮಾದಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಳ್ಳುತ್ತಿದ್ದಾರೆ.

ಚಿರಂಜೀವಿ ಮತ್ತು ಸಲ್ಮಾನ್ ಖಾನ್ ಹೊರತುಪಡಿಸಿ ಚಿತ್ರದಲ್ಲಿ ನಯನತಾರಾ ನಾಯಕಿಯಾಗಿ ಕಾಣಿಸಿಕೊಂಡರೆ, ಸತ್ಯದೇವ್ ಕಾಂಚರಣ, ಹರೀಶ್ ಉತ್ತಮನ್, ಜಯಪ್ರಕಾಶ್ ಮತ್ತು ವಂಶಿ ಕೃಷ್ಣ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ:  ದೇಶದ ಪರಿಸ್ಥಿತಿ ಚೆನ್ನಾಗಿಲ್ಲ, ಭಯಪಡಬೇಡಿ, ಹೋರಾಟ ಮುಂದುವರೆಸಿ: ಮಮತಾ ಬ್ಯಾನರ್ಜಿ

Comments

Leave a Reply

Your email address will not be published. Required fields are marked *