ರಾಜಸ್ಥಾನ್‌ ವಿರುದ್ಧ ಗೆದ್ರೆ 50 ರಸಗುಲ್ಲ ತಿನ್ನುತ್ತೇನೆ ಎಂದಿದ್ದ ಫ್ಯಾನ್‌ಗೆ ʻವಿಕ್ಟರಿʼ ಬಳಿಕ ಕೆಕೆಆರ್‌ ಹೇಳಿದ್ದೇನು?

ನವದೆಹಲಿ: ಐದು ಪಂದ್ಯಗಳಲ್ಲಿ ಸೋಲನುಭವಿಸಿದ ನಂತರ ಕೋಲ್ಕತ್ತಾ ನೈಟ್‌ ರೈಡರ್ಸ್‌ (KKR) ಸೋಮವಾರ ರಾಜಸ್ಥಾನ್‌ ರಾಯಲ್ಸ್‌ (RR) ವಿರುದ್ಧ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಕೆಕೆಆರ್‌ ಗೆಲುವು ಸಾಧಿಸಬೇಕು ಎಂದು ಅಭಿಮಾನಿಯೊಬ್ಬ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದ. ಅದಕ್ಕೆ ಕೆಕೆಆರ್‌ ತಂಡ ಖುಷಿಯಿಂದ ಪ್ರತಿಕ್ರಿಯೆ ನೀಡಿದೆ.

ಸೋಮವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಕೆಕೆಆರ್‌ ಗೆಲುವಿಗಾಗಿ ಅಭಿಮಾನಿಗಳು ಪ್ರಾರ್ಥಿಸಿದ್ದರು. ʼಕೆಕೆಆರ್‌ ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ನಾನು 50 ರಸಗುಲ್ಲ ತಿನ್ನುತ್ತೇನೆʼ ಎಂದು ಅಭಿಮಾನಿಯೊಬ್ಬ ಪ್ರಾರ್ಥಿಸಿದ್ದ. ಈ ಕುರಿತು ಪೋಸ್ಟರ್‌ ಕೂಡ ಪ್ರದರ್ಶಿಸಿದ್ದ. ಇದನ್ನೂ ಓದಿ: ರಾಜಸ್ಥಾನಕ್ಕೆ ಮುಳುವಾದ ರಿಂಕು, ರಾಣಾ ಜೊತೆಯಾಟ – ಕೋಲ್ಕತ್ತಾಗೆ 7 ವಿಕೆಟ್‍ಗಳ ಜಯ

ವಿಶೇಷ ಪ್ರಾರ್ಥನೆ ಹೊತ್ತು, ಪೋಸ್ಟರ್‌ ಪ್ರದರ್ಶಿಸುತ್ತಿರುವ ಅಭಿಮಾನಿಯ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದ ಕೆಕೆಆರ್‌ ʼಸೋ ಸ್ವೀಟ್‌ʼ ಎಂದು ಕಾಮೆಂಟ್‌ ಮಾಡಿದೆ. ತನ್ನ ಅಭಿಮಾನಿಯ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದೆ.

ಕೆಕೆಆರ್‌ ತಂಡದ ಅಭಿಮಾನಿಯ ವಿಶೇಷ ಪ್ರಾರ್ಥನೆಗೆ ಅನೇಕ ಕಾಮೆಂಟ್‌ಗಳು ಕೂಡ ಬಂದಿದ್ದವು. ಕೆಲ ನೆಟ್ಟಿಗರು ʼಶುಭವಾಗಲಿʼ ಎಂದು ಪ್ರತಿಕ್ರಿಯಿಸಿದ್ದರು. ಮತ್ತೆ ಕೆಲವರು, ʻಈತ ಮಧುಮೇಹ ಹೆಚ್ಚಿಸಿಕೊಳ್ಳಬಹುದುʼ ಎಂದು ಹಾಸ್ಯವಾಗಿ ಕಾಮೆಂಟ್‌ ಮಾಡಿದ್ದರು. ಇದನ್ನೂ ಓದಿ: ತನಗಿಂತ 28 ವರ್ಷ ಚಿಕ್ಕವಳ ಕೈಹಿಡಿದ ಮಾಜಿ ಕ್ರಿಕೆಟಿಗ ಅರುಣ್ ಲಾಲ್

ಸೋಮವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ ಕೋಲ್ಕತ್ತಾ ನೈಟ್‌ ರೈಡರ್ಸ್‌ 3 ವಿಕೆಟ್‌ ನಷ್ಟಕ್ಕೆ 158 ರನ್‌ ಸಿಡಿಸಿ ಭರ್ಜರಿ ಗೆಲುವು ಸಾಧಿಸಿತು. ʼಇದು ಈದ್‌ ಉಡುಗೊರೆʼ ಎಂದು ಕೆಕೆಆರ್‌ ಗೆಲುವನ್ನು ಅಭಿಮಾನಿಗಳು ಸಂಭ್ರಮಿಸಿದರು.

Comments

Leave a Reply

Your email address will not be published. Required fields are marked *