ನನ್ನ ಬಂಧನದ ಹಿಂದೆ ಪ್ರಧಾನಿ ಕಾರ್ಯಾಲಯದ ಗೋಡ್ಸೆ ಭಕ್ತರ ಕೈವಾಡವಿದೆ: ಜಿಗ್ನೇಶ್‌ ಮೇವಾನಿ

ಗಾಂಧೀನಗರ: ನನ್ನ ಬಂಧನದ ಹಿಂದೆ ಪ್ರಧಾನಿ ಕಾರ್ಯಾಲಯದ (PMO) ಕೆಲ ಗೋಡ್ಸೆ ಭಕ್ತರು ಕೈವಾಡವಿದೆ ಎಂದು ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ ಗಂಭೀರ ಆರೋಪ ಮಾಡಿದ್ದಾರೆ.

ಅಸ್ಸಾಂ ಜೈಲಿನಿಂದ ಬಿಡುಗಡೆಯಾದ ನಂತರ ಜಿಗ್ನೇಶ್‌ ಮೇವಾನಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನನ್ನ ಬಂಧನದ ಹಿಂದೆ ಪೂರ್ವನಿಯೋಜಿತ ಪಿತೂರಿ ನಡೆದಿತ್ತು ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಮೋದಿ ಸರ್ಕಾರದಲ್ಲಿ ದುರಾಡಳಿತ: ರಾಹುಲ್ ಗಾಂಧಿ ವಾಗ್ದಾಳಿ

MODi

ನಾನು ಹೂವಲ್ಲ, ಬೆಂಕಿ ಎಂದು ʻಪುಷ್ಪʼ ಚಿತ್ರದ ಡೈಲಾಗ್‌ ಹೊಡೆದಿರುವ ಜಿಗ್ನೇಶ್‌ ಮೇವಾನಿ, ನನ್ನ ತಂಡದ ಸದಸ್ಯರ ಮೊಬೈಲ್‌ ಫೋನ್‌ ಮತ್ತು ಲ್ಯಾಪ್‌ಟಾಪ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಗುಜರಾತ್‌ನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ನಡೆದಿವೆ. ಆದರೆ ಯಾವುದೇ ಪ್ರಕರಣ ದಾಖಲಾಗಿಲ್ಲ, ಯಾವುದೇ ಬಂಧನವಾಗಿಲ್ಲ. ಈ ಸಂಬಂಧ ಯಾವುದೇ ತನಿಖೆ ಕೂಡ ನಡೆಸಲಾಗಿಲ್ಲ. ಮುಂದ್ರಾ ಬಂದರಿನಲ್ಲಿ ನಡೆದ ಬೃಹತ್ ಮಾದಕ ದ್ರವ್ಯ ಸಾಗಣೆಯ ಬಗ್ಗೆ ಯಾವುದೇ ತನಿಖೆಯಾಗಲಿಲ್ಲ. ದಲಿತ ಮಹಿಳೆಯೊಬ್ಬರು ಗುಜರಾತ್ ಸಚಿವರ ವಿರುದ್ಧ ಅತ್ಯಾಚಾರದ ಆರೋಪದ ಬಗ್ಗೆ ತನಿಖೆ ಅಥವಾ ಬಂಧನ ಕೂಡ ಆಗಿಲ್ಲ ಧರ್ಮ ಸಂಸದ್‌ನಿಂದ ನಿರ್ದಿಷ್ಟ ಸಮುದಾಯದ ನರಮೇಧಕ್ಕೆ ಕರೆ ನೀಡಲಾಯಿತು. ಅಂತಹವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗುಜರಾತ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬಾಬರಿ ಧ್ವಂಸ ವೇಳೆ ಶಿವಸೇನೆ ಎಲ್ಲಿತ್ತು ಎಂದು ನಿಮ್ಮ ನಾಯಕರನ್ನು ಕೇಳಿ: ಬಿಜೆಪಿಗೆ ರಾವತ್ ತಿರುಗೇಟು

ನನ್ನ ಟ್ವೀಟ್ ಸರಳವಾಗಿತ್ತು. ಶಾಂತಿ ಮತ್ತು ಸೌಹಾರ್ದತೆಗಾಗಿ ಪ್ರಧಾನಿ ಬಳಿ ಮನವಿ ಮಾಡಿದ್ದೆ. ಅಷ್ಟಕ್ಕೇ ಅವರು ನನ್ನನ್ನು ಬಂಧಿಸಿದರು. ಇದು ಏನನ್ನು ಸೂಚಿಸುತ್ತದೆ? ಇದು ನನ್ನನ್ನು ನಾಶ ಮಾಡಲು ಪೂರ್ವ ಯೋಜಿತ ಸಂಚು. ನನಗೆ ಎಫ್‌ಐಆರ್‌ನ ಪ್ರತಿ ನೀಡಿಲ್ಲ. ನನ್ನ ವಿರುದ್ಧದ ಸೆಕ್ಷನ್‌ಗಳನ್ನು ನನಗೆ ಬಹಿರಂಗಪಡಿಸಲಾಗಿಲ್ಲ. ನನ್ನ ವಕೀಲರೊಂದಿಗೆ ಮಾತನಾಡಲು ನನಗೆ ಅವಕಾಶ ನೀಡಲಿಲ್ಲ. ಶಾಸಕನಾಗಿ ನನ್ನ ವಿಶೇಷತೆಯನ್ನು ಕಡೆಗಣಿಸಲಾಗಿದೆ. ನನ್ನ ಬಂಧನದ ಬಗ್ಗೆ ಗುಜರಾತ್ ಅಸೆಂಬ್ಲಿಯ ಸ್ಪೀಕರ್‌ಗೂ ಮಾಹಿತಿ ನೀಡಿರಲಿಲ್ಲ. ಇದರಿಂದ ಗುಜರಾತ್‌ನ ಹೆಮ್ಮೆಗೆ ಧಕ್ಕೆಯಾಗಿದೆ. ಗುಜರಾತ್ ಸರ್ಕಾರಕ್ಕೂ ನಾಚಿಕೆಯಾಗಬೇಕು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *