ಭಾರೀ ಮಳೆ- ಅರ್ಧ ಗಂಟೆ ಬಂದ್ ಆದ ವಾಹನ ಸಂಚಾರ

ಮಡಿಕೇರಿ: ಕೊಡಗಿನಲ್ಲಿ ದಿಢೀರ್ ಎಂಬಂತೆ ಮಳೆ ಸುರಿದ ಪರಿಣಾಮ ಜಿಲ್ಲೆಯ ವಿವಿಧೆಡೆ ಅವಾಂತರಗಳು ಸೃಷ್ಟಿಯಾಗಿದೆ. ಮರಗಳು ಧರೆಗೆ ಬಿದ್ದ ಪರಿಣಾಮ ಮಡಿಕೇರಿ ಮೈಸೂರು ಸಂಚಾರ ಮಾರ್ಗ ಬಂದ್ ಆಗಿದೆ.

ಭಾನುವಾರ ಮಧ್ಯಾಹ್ನ 1:30ರ ಸುಮಾರಿಗೆ ಪ್ರಾರಂಭವಾದ ಅಕಾಲಿಕ ಮಳೆಯಿಂದ ಮಡಿಕೇರಿ ಹಾಗೂ ಮೈಸೂರಿನ ರಾಷ್ಟ್ರೀಯ ಹೆದ್ದಾರಿ ಕುಶಾಲನಗರ ಸಮೀಪದ ಬೈಲುಕುಪ್ಪದಲ್ಲಿ ಮರಗಳು ಬಿದ್ದಿವೆ. ರಸ್ತೆ ಬದಿಯಲ್ಲಿ ನಿಲ್ಲಿಸಿದ ಲಾರಿ ಮೇಲೂ ಮರ ಬಿದ್ದ ಪರಿಣಾಮ ಅರ್ಧ ಗಂಟೆಗೂ ಹೆಚ್ಚು ಹೊತ್ತು ವಾಹನ ಸಂಚಾರ ಬಂದ್ ಆಗಿದೆ. ಭಾರೀ ಮಳೆಗೆ ವಿದ್ಯುತ್ ಕಂಬಗಳೂ ಧರೆಗೆ ಉರುಳಿವೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ತಂಪೆರೆದ ಮಳೆರಾಯ- ಹಲವೆಡೆ ಧರೆಗುರುಳಿದ ಮರಗಳು

ಭಾರೀ ಮಳೆಯ ಪರಿಣಾಮ ಸ್ಥಳೀಯ ಆಡಳಿತ ಅಧಿಕಾರಿಗಳು ಹಾಗೂ ಸಾರ್ವಜನಿಕರು ಬಿದ್ದಿರುವ ಮರಗಳನ್ನು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ. ಇದನ್ನೂ ಓದಿ: ನಾನು ಸುಮ್ಮನೇ ಮೈ ಪರಚಿಕೊಳ್ಳುವ ವ್ಯಕ್ತಿಯಲ್ಲ: ಸಿದ್ದು ವಿರುದ್ಧ ಸೋಮಣ್ಣ ಕಿಡಿ

ಪೋನ್ನಂಪೇಟೆ ತಾಲೂಕಿನ ಗೋಣಿಕೊಪ್ಪದಲ್ಲೂ ಭಾರಿ ಗಾಳಿ, ಗುಡುಗು ಸಹಿತ ಅಬ್ಬರಿಸಿದ ಮಳೆಯಿಂದ ನಗರದಲ್ಲಿರುವ ಅಂಗಡಿ ಮುಗ್ಗಟ್ಟುಗಳ ಮೇಲ್ಛಾವಣಿ ಹಾಗೂ ನಾಮ ಫಲಕಗಳು ಹಾರಿಹೋಗಿದೆ.

Comments

Leave a Reply

Your email address will not be published. Required fields are marked *