ಪರೋಟ ತಿಂದ ಮರುದಿನವೇ ಬಾಲಕನ ಸಾವು – ಅಸಲಿ ಕಾರಣವೇನು?

ತಿರುವನಂತಪುರಂ: 9 ವರ್ಷದ ಬಾಲಕ ಪರೋಟ ತಿಂದು ಮರುದಿನವೇ ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ನಡೆದಿದೆ. ಇದಕ್ಕೆ ಅಸಲಿ ಕಾರಣ ತಿಳಿದ ವೈದ್ಯರು ಶಾಕ್ ಆಗಿದ್ದಾರೆ.

ಮೃತನನ್ನು ನೆಡುಂಕಂಡಂ ಮೂಲದ ಕಾರ್ತಿಕ್ ಮತ್ತು ದೇವಿ ಅವರ ಪುತ್ರ ಸಂತೋಷ್ ಎಂದು ಗುರುತಿಸಲಾಗಿದೆ. ಸಂತೋಷ್ ಮೂರ್ಛೆ ರೋಗದಿಂದ ಬಳಲುತ್ತಿದ್ದ. ಶುಕ್ರವಾರ ಪರೋಟ ತಿಂದ ಸಂತೋಷ್ ಅಸ್ವಸ್ಥನಾಗಿದ್ದನು. ಶನಿವಾರ ಅತಿಯಾದ ವಾಂತಿಯಾಗುತ್ತಿದ್ದ ಹಿನ್ನೆಲೆ ಪೋಷಕರು ಬಾಲಕನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಇದನ್ನೂ ಓದಿ: ಮೈ ಮೇಲೆ ಕೆಸರು ಹಾರಿದ್ದಕ್ಕೆ ಬಸ್ ಚಾಲಕನಿಗೆ ಚಪ್ಪಲಿಯಿಂದ ಹಲ್ಲೆ

ತಣ್ಣಗಾದ ಮೇಲೂ ಪರೋಟ ಮೃದುವಾಗಿರಲು ಇಲ್ಲಿವೆ ಸಿಂಪಲ್ ಟಿಪ್ಸಗಳು | Paratha recipe | How to Make Soft Layered Paratha at Home in Kannada - Kannada Boldsky

ಆಸ್ಪತ್ರೆಗೆ ಕರೆತಂದಾಗ ಬಾಲಕನ ಹೊಟ್ಟೆ ಊದಿಕೊಂಡಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಪ್ರಥಮ ಚಿಕಿತ್ಸೆ ನೀಡಿದ ನಂತರ ಹೊಟ್ಟೆ ನೋವು ಕಡಿಮೆಯಾಯಿತು. ಬೆಳಗ್ಗೆ 10.30ರ ವೇಳೆಗೆ ಸಂತೋಷ್ ರಕ್ತದೊತ್ತಡ ಕುಸಿದಿದ್ದು, ಬಳಿಕ ಸಂತೋಷ್ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾನೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು. ಸಂತೋಷ್ ಬಹಳ ದಿನಗಳಿಂದ ಮೂರ್ಛೆ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದ. ಈ ಕಾರಣ ಆತನಿಗೆ ರಕ್ತದೊತ್ತಡ ಕುಸಿದು ಆಹಾರ ಅವನ ಶ್ವಾಸಕೋಶದಲ್ಲಿ ಸಿಕ್ಕಿಕೊಂಡಿದ್ದು, ಈ ಘಟನೆ ಸಂಭವಿಸಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೊಸ ಮುಖಗಳ ಪರಿಚಯವೇ ಬಿಜೆಪಿ ಅಧಿಕಾರಕ್ಕೇರಲು ಕಾರಣ: ಬಿ.ಎಲ್.ಸಂತೋಷ್

Comments

Leave a Reply

Your email address will not be published. Required fields are marked *