ಧನುಷ್ ನಟನೆಯ ಹಾಲಿವುಡ್ `ದಿ ಗ್ರೇ ಮ್ಯಾನ್’ ಫಸ್ಟ್ ಲುಕ್ ರಿಲೀಸ್

ಟ ಧನುಷ್ ಕಾಲಿವುಡ್ ಅಂಗಳದ ಪ್ರತಿಭಾನ್ವಿತ ಕಲಾವಿದ. ಎಲ್ಲಾ ಭಾಷೆಗಳನ್ನು ಮೀರಿ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಕಾಲಿವುಡ್, ಬಾಲಿವುಡ್ ನಂತರ ಈಗ ಹಾಲಿವುಡ್‌ನಲ್ಲೂ ಮಿರ ಮಿರ ಅಂತಾ ಮಿಂಚ್ತಿದ್ದಾರೆ. ಧನುಷ್ ನಟನೆಯ ಹಾಲಿವುಡ್ ಬಹುನಿರೀಕ್ಷಿತ `ದಿ ಗ್ರೇ ಮ್ಯಾನ್’ ಸಿನಿಮಾದ ಫಸ್ಟ್ ಲುಕ್ ರಿವೀಲ್ ಆಗಿದೆ.

ಎಲ್ಲಾ ವುಡ್‌ಗಳಲ್ಲಿ ಸೌಂಡ್ ಮಾಡ್ತಿರೋ ಧನುಷ್ `ದಿ ಗ್ರೇ ಮ್ಯಾನ್’ ಇಂಗ್ಲೀಷ್ ಚಿತ್ರಕ್ಕೆ ಬಣ್ಣಹಚ್ಚಿದ್ದಾರೆ. ಧನುಷ್ ಪಾತ್ರ ಹೇಗಿರಲಿದೆ ಅಂತಾ ಚಿತ್ರದ ಲುಕ್‌ನ್ನ ಇದೀಗ ಚಿತ್ರತಂಡ ರಿವೀಲ್ ಮಾಡಿದೆ. ಕಾರಿನ ಮೇಲೆ ಮಂಡಿಯೂರಿ ನಿಂತಿದ್ದು, ಮುಖದ ಮೇಲೆ ರಕ್ತದ ಕಲೆಯಿದೆ. ಗ್ರೇ ಸೂಟ್‌ನಲ್ಲಿ ಫುಲ್ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಧನುಷ್ ಪಾತ್ರದ ಕುರಿತು ಸಿನಿಅಭಿಮಾನಿಗಳಿಗೆ ಮತ್ತಷ್ಟು ಕುತೂಹಲ ಕೆರಳಿಸಿದೆ. ಇದನ್ನೂ ಓದಿ: ರಾಷ್ಟ್ರ ಭಾಷೆ ಹಿಂದಿ : ಸುದೀಪ್ ಸರಣಿ ಟ್ವಿಟ್ ಗೆ ತಪ್ಪಾಗಿ ತಿಳ್ಕೊಂಡಿದ್ದೆ ಎಂದ ಅಜಯ್ ದೇವಗನ್

`ದಿ ಗ್ರೇ ಮ್ಯಾನ್’ ಚಿತ್ರವನ್ನು ಅಂಥೋನಿ ಮತ್ತು ಜೋ ರಸ್ಸೋ ಆ್ಯಕ್ಷನ್ ಕಟ್ ಹೇಳಿದ್ದಾರೆ. ನಟ ಧನುಷ್ ಎಂದು ಮಾಡಿರದ ಭಿನ್ನ ಪಾತ್ರ ಡಿಫರೆಂಟ್ ಗೆಟೆಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ರಯಾನ್ ಗೋಸ್ಲಿಂಗ್, ಕ್ರಿಸ್ ಇವಾನ್ಸ್ ಇನ್ನು ಮುಂತದವರು ಸಾಥ್ ನೀಡಿದ್ದಾರೆ. `ದಿ ಗ್ರೇ ಮ್ಯಾನ್’ ಚಿತ್ರ ಒಟಿಟಿನಲ್ಲಿ ಇದೇ ಜುಲೈ 22ರಂದು ರಿಲೀಸ್ ಆಗಲಿದೆ. ಧನುಷ್ ನಟನೆಯ ಹಾಲಿವುಡ್ ಚಿತ್ರ ಅದೆಷ್ಟರ ಮಟ್ಟಿಗೆ ಕಮಾಲ್ ಮಾಡಬಹುದು ಅಂತಾ ಕಾದು ನೋಡಬೇಕಿದೆ.

Comments

Leave a Reply

Your email address will not be published. Required fields are marked *