ತಾಳಿ ಭಾಗ್ಯ, ಅನ್ನ ಭಾಗ್ಯದಂತಹ ದರಿದ್ರ ಭಾಗ್ಯಗಳು ಬೇಡ: ಸಿಎಂ ಮುಂದೆ ಯತ್ನಾಳ್ ಕಿಡಿ

ವಿಜಯಪುರ: ಜನಪ್ರಿಯ ಕಾರ್ಯಕ್ರಮಗಳನ್ನು ಬಂದ್ ಮಾಡಬೇಕೆಂದು ಸಿಎಂ ಬಸವರಾಜ್ ಬೊಮ್ಮಾಯಿ ಮುಂದೆಯೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

ಬೂದಿಹಾಳ ಪೀರಾಪೂರ ಏತ ನೀರಾವರಿ ಯೋಜನೆ ಹಂತ 1 ಪೈಪ್ ವಿತರಣಾ ಜಾಲದ ಕಾಮಗಾರಿಗೆ ಶಂಕು ಸ್ಥಾಪನೆ ಕಾರ್ಯಕ್ರಮ ವೇದಿಕೆಯಲ್ಲಿ ಗುಡುಗಿದ ಯತ್ನಾಳ್, ತಾಳಿ ಭಾಗ್ಯ, ಅನ್ನ ಭಾಗ್ಯ ಇತ್ಯಾದಿ ಭಾಗ್ಯಗಳು ಬೇಡ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಶ್ನೆ ಪತ್ರಿಕೆ ಲೀಕ್ – ಸೌಮ್ಯಾಗೆ 13 ದಿನ ಪೊಲೀಸ್ ಕಸ್ಟಡಿ

ಇವೆಲ್ಲ ದರಿದ್ರ ಮಾಡೋ ಯೋಜನೆಗಳು. ಅನ್ನಭಾಗ್ಯ ಯೋಜನೆ ಜನರನ್ನ ದರಿದ್ರ ಮಾಡುತ್ತದೆ. ಈ ಯೋಜನೆಗಳನ್ನ ಬಂದ್ ಮಾಡಿ. ಯೋಜನೆ ಬಂದ್ ಮಾಡಲು ಧೈರ್ಯ ಮಾಡಿ ಆಗಿದ್ದಾಗಲಿ ಎಂದು ಸಿಎಂಗೆ ಯತ್ನಾಳ್ ಒತ್ತಾಯ ಮಾಡಿದರು. ಇದನ್ನೂ ಓದಿ: ಮುತ್ತಿಡಲು ಹೋದಾಗ ಹಾಯಲು ಬಂದ ಹೋರಿ- ಗಲಿಬಿಲಿಗೊಂಡ ಸಿಎಂ

ಇದೇ ವೇಳೆ ದೇವರ ಹಿಪ್ಪರಗಿ ಶಾಸಕರ ಮೇಲೆ ಸಿಎಂಗೆ ಲವ್ ಇದೆ. ಹಾಗಾಗಿ ಶಾಸಕ ಸೋಮನಗೌಡರ ಕೆಲಸಗಳನ್ನು ಮಾಡುತ್ತಾರೆ. ಮುಂದಿನ ಚುನಾವಣೆಯಲ್ಲಿ ಸೋಮನಗೌಡ ಪಾಟೀಲ್ ಪರ ಮತ ಚಲಾಯಿಸಬೇಕೆಂದು ಮನವಿ ಮಾಡಿದರು. ತನ್ನ ಭಾಷಣದ ವೇಳೆ ಸ್ವಪಕ್ಷೀಯ ಶಾಸಕ ನಡಹಳ್ಳಿ ಹಾಗೂ ಸಂಸದ ಜಿಗಜಿಣಗಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.

Comments

Leave a Reply

Your email address will not be published. Required fields are marked *