ಪಿಎಸ್‍ಐ ಹಗರಣಕ್ಕೆ ಮೃತಪಟ್ಟವರ ಮೊಬೈಲ್ ಬಳಕೆ

ಕಲಬುರಗಿ: ಪಿಎಸ್‍ಐ ಅಕ್ರಮ ನೇಮಕಾತಿ ಕರ್ಮಕಾಂಡವು ಬಗೆದಷ್ಟು ಬಯಲಾಗುತ್ತಿದೆ. ಇದೀಗ ತನಿಖೆಯಲ್ಲಿ ಮತ್ತೊಂದು ವಿಚಾರ ಬೆಳಕಿಗೆ ಬಂದಿದೆ. ಪಿಎಸ್‍ಐ ಪರೀಕ್ಷೆ ಅಕ್ರಮಕ್ಕೆ ಕೋವಿಡ್‍ನಿಂದ ಮೃತಪಟ್ಟ ನೌಕರನ ಮೊಬೈಲ್‍ನನ್ನು ಕಿಂಗ್‍ಪಿನ್ ಆರ್‌.ಡಿ. ಪಾಟೀಲ್ ಬಳಸುತ್ತಿದ್ದ ಎನ್ನುವ ವಿಚಾರ ತನಿಖೆಯಲ್ಲಿ ಬಯಲಾಗಿದೆ.

ಸೊನ್ನ ಗ್ರಾಮದ ಲಕ್ಷ್ಮೀಪುತ್ರ ಎಂಬವರು ಆರ್‌ಡಿ ಪಾಟೀಲ್‌ ಬಳಿ ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಲಕ್ಷ್ಮಿಪುತ್ರ ಕೋವಿಡ್‍ನಿಂದ ಮೃತಪಟ್ಟಿದ್ದರು. ಇವರು ಮೃತಪಟ್ಟ ಬಳಿಕ ಇವರ ಬಳಿ ಇದ್ದ ಎರಡು ಮೊಬೈಲ್‍ಗಳಲ್ಲಿ ಒಂದನ್ನು ಆರ್‌ಡಿ ಪಾಟೀಲ್ ಇಟ್ಟುಕೊಂಡಿದ್ದ. ಅದೇ ಮೊಬೈಲ್‍ನಿಂದ ಪಿಎಸ್‍ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಎಸಗಿದ್ದ. ಇದರಿಂದ ಬೇರೆ ಯಾರಿಗೂ ಅನುಮಾನ ಮೂಡುವುದಿಲ್ಲ ಎಂದು ಈ ರೀತಿ ಯೋಜನೆ ಮಾಡಿದ್ದ. ಇದನ್ನೂ ಓದಿ: ಅಸಿಸ್ಟೆಂಟ್ ಪ್ರೊಫೆಸರ್ ಎಕ್ಸಾಮ್‍ನಲ್ಲೂ ಗೋಲ್ಮಾಲ್- ಕಾಸು ಕೊಟ್ರೆ ಸರ್ಕಾರಿ ಹುದ್ದೆ..?

ಈ ಸ್ಫೋಟಕ ಮಾಹಿತಿ ಸಿಐಡಿ ಅಧಿಕಾರಿಗಳ ವಿಚಾರಣೆ ವೇಳೆ ಬಹಿರಂಗವಾಗಿದೆ. ತಮ್ಮ ಬಳಿಯಿರುವ ಮೊಬೈಲ್ ಬಳಸಿದರೆ ಪ್ರಕರಣ ಬಯಲಿಗೆ ಬರುತ್ತದೆ ಎಂದು ಮೃತ ವ್ಯಕ್ತಿಯ ಮೊಬೈಲ್‍ನ್ನು ಬಳಸುತ್ತಿದ್ದೆ ಎಮದು ಒಪ್ಪಿಕೊಂಡಿದ್ದಾನೆ. ಎರಡು ದಿನಗಳ ಹಿಂದೆ ಆರ್‌ಡಿ ಪಾಟೀಲ್ ಸ್ನೇಹಿತ ಮಂಜುನಾಥ್ ಮಲ್ಲುಗೌಡನನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಕಲಬುರಗಿ ಜೆಎಮ್‍ಎಫ್‍ಸಿ ಕೋರ್ಟ್ 13 ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿದೆ. ಇದನ್ನೂ ಓದಿ: ಕಲುಷಿತ ನೀರು ಸೇವಿಸಿ 15 ಮಂದಿ ಅಸ್ವಸ್ಥ

Comments

Leave a Reply

Your email address will not be published. Required fields are marked *