ಅಣ್ಣಾವ್ರ ಬರ್ತಡೇ ದಿನ ಶಿವಣ್ಣ ನಟನೆಯ `ಘೋಸ್ಟ್’ ಲುಕ್ ರಿಲೀಸ್

ರನಟ ಡಾ.ರಾಜ್‌ಕುಮಾರ್ ಅವರ ಹುಟ್ಟು ಹಬ್ಬ. ಅಭಿಮಾನಿಗಳು ಈ ದಿನವನ್ನ ಸ್ಪೆಷಲ್ ಆಗಿ ಆಚರಿಸುತ್ತಾರೆ. ಈ ಶುಭ ಸಂದರ್ಭದಲ್ಲಿ ಡಾ.ರಾಜ್ ಫ್ಯಾಮಿಲಿಯಿಂದ ಗುಡ್ ನ್ಯೂಸ್ ಸಿಕ್ಕಿದೆ. ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ನಟನೆಯ ಬಹುನಿರೀಕ್ಷಿತ `ಘೋಸ್ಟ್’ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದೆ.

ಖ್ಯಾತ ನಿರ್ಮಾಪಕ ಸಂದೇಶ್ ನಾಗಾರಾಜ್ ನಿರ್ಮಾಣದಲ್ಲಿ ಘೋಸ್ಟ್ ಚಿತ್ರ ಮೋಡಿ ಬರಲಿದ್ದು, ಚಿತ್ರಕ್ಕೆ ನಟ ಕಮ್ ನಿರ್ದೇಶಕ ಶ್ರೀನಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಅಣ್ಣಾವ್ರ ಹುಟ್ಟು ಹಬ್ಬದಂದು `ಘೋಸ್ಟ್’ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದ್ದು, ಸಖತ್ ರಾ ಆಗಿ ಮೂಡಿ ಬಂದಿದೆ. ಶಿವಣ್ಣ ಕೈಯಲ್ಲಿ ಎಕೆ47 ಮಾದರಿಯ ಗನ್‌ಯಿದ್ದು, ಅವರ ಕಡೆ ಒಂದಷ್ಟು ಗನ್‌ಗಳು ಮುಖ ಮಾಡಿದೆ. ಪೋಸ್ಟರ್‌ನಲ್ಲಿ ಕಂಬಿಗಳನ್ನು ಕೂಡ ತೋರಿಸಲಾಗಿದೆ. ಸಖತ್ ರಗಡ್ ಲುಕ್ಕಿನಲ್ಲಿ ಮಿಂಚ್ತಿರೋ ಶಿವಣ್ಣನ ಹೊಸ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಮೂಡಿಸುತ್ತಿದೆ.

ಇನ್ನು ಶಿವಣ್ಣನ ವಯಸ್ಸು 60 ಆಸುಪಾಸಿನಲ್ಲಿದ್ರು ಎನರ್ಜಿ ಒಂದು ಚೂರು ಕಮ್ಮಿ ಆಗೋದಿಲ್ಲ. ಏನೇ ಕೆಲಸಯಿರಲಿ ಯಾವುದೇ ಚಿತ್ರವಾಗಿರಲಿ ಶಿವಣ್ಣ ಯಾವಾಗಲೂ ಮುಂದು. ಭಿನ್ನ ಟೈಟಲ್‌ನಿಂದ ಗಮನ ಸೆಳೆಯುತ್ತಿರುವ `ಘೋಸ್ಟ್’ ಇದೊಂದು ಪಕ್ಕಾ ಆ್ಯಕ್ಷನ್ ಸಿನಿಮಾವಾಗಿದೆ. ಸದ್ಯ ಚಿತ್ರದ ಪೊಸ್ಟರ್ ಲುಕ್‌ನಿಂದ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಇದನ್ನೂ ಓದಿ:ಸೀಮಂತದ ಸಂಭ್ರಮದಲ್ಲಿ ನಟಿ ಸಂಜನಾ ಗಲ್ರಾನಿ

`ಘೋಸ್ಟ್’ ಸಿನಿಮಾ ಕನ್ನಡ, ತಮಿಳು, ತೆಲುಗು, ಮತ್ತು ಹಿಂದಿ ಭಾಷೆಗಳಲ್ಲಿ ಮೂಡಿ ಬರಲಿದ್ದು, ಸಂದೇಶ ನಾಗಾರಾಜ್ ಬ್ಯಾನರ್‌ನಲ್ಲಿ ಮೂಡಿಬರಲಿರುವ 29ನೇ ಚಿತ್ರವಾಗಿದೆ. ಎಂದೂ ಮಾಡಿರದ ಪಾತ್ರದಲ್ಲಿ ರಂಜಿಸಲು ಶಿವಣ್ಣ ರೆಡಿಯಾಗಿದ್ದು, ಮುಂದಿನ ದಿನಗಳಲ್ಲಿ ಹೇಗೆಲ್ಲಾ ಸೌಂಡ್ ಮಾಡಬಹುದು ಅಂತಾ ಕಾದುನೋಡಬೇಕಿದೆ.

Comments

Leave a Reply

Your email address will not be published. Required fields are marked *