ಕೆಜಿಎಫ್ 2 ಸಕ್ಸಸ್ ನಂತರ ಕಾಣೆಯಾಗಿದ್ದ ಯಶ್ ಗೋವಾದಲ್ಲಿ ಪತ್ತೆ

ಕೆಜಿಎಫ್ 2 ಸಿನಿಮಾ ಬಿಡುಗಡೆಗೂ ಮುನ್ನ ದೇಶಾದ್ಯಂತ ಸುತ್ತಿದ್ದ ನಟ ಯಶ್, ಸಿನಿಮಾ ರಿಲೀಸ್ ನಂತರ ಪತ್ನಿ ಮತ್ತು ಮಕ್ಕಳೊಂದಿಗೆ ಪ್ರವಾಸ ಕೈಗೊಂಡಿದ್ದರು. ಬೀಚ್ ದಂಡೆಯ ಮೇಲೆ ಮಕ್ಕಳೊಂದಿಗೆ ದಂಪತಿ ಆಡುತ್ತಿರುವ ಫೋಟೋ ಹಾಕಿ ಸುಮ್ಮನಾಗಿದ್ದರು. ಇದನ್ನೂ ಓದಿ : ಕನ್ನಡ ಚಿತ್ರರಂಗವನ್ನು ರಾಷ್ಟ್ರಮಟ್ಟಕ್ಕೆ ತಗೆದುಕೊಂಡು ಹೋದ ಮೊದಲಿಗರಾರು? ಹೀಗಿದೆ ನಟ ಜಗ್ಗೇಶ್ ಉತ್ತರ

ಇಡೀ ದೇಶಕ್ಕೆ ದೇಶವೇ ಕೆಜಿಎಫ್ 2 ಸಂಭ್ರಮದಲ್ಲಿರುವಾಗ ರಾಕಿ ಭಾಯ್ ಎಲ್ಲಿಗೆ ಹೋದರು ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಮೂಡಿತ್ತು. ಅದರಲ್ಲೂ ಸಮುದ್ರದ ದಂಡೆಯ ಮೇಲೆ ಮಕ್ಕಳ ಜೊತೆ ಆಡುತ್ತಿರುವ ಫೋಟೋವನ್ನು ರಾಧಿಕಾ ಪಂಡಿತ್ ಸೋಷಿಯಲ್ ಮೀಡಿಯಾದಲ್ಲಿ ಹಾಕಿದಾಗ ಯಾವ ಊರಿಗೆ ಹೋಗಿರಬಹುದು ಎನ್ನುವ ಚರ್ಚೆ ಕೂಡ ನಡೆದಿತ್ತು. ಕೊನೆಗೂ ರಾಕಿಭಾಯ್ ಪತ್ತೆಯಾಗಿದ್ದಾರೆ. ಇದನ್ನೂ ಓದಿ :  ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕನ ವಿರುದ್ಧ ಕಿಡಿಕಾರಿದ ಸಿಖ್ ಸಂಘ

ಕೆಜಿಎಫ್ 2 ಸಿನಿಮಾವನ್ನು ಅಭಿಮಾನಿಗಳ ಮಡಿಲಿಗೆ ಹಾಕಿ ಪತ್ನಿ ಮತ್ತು ಮಕ್ಕಳ ಜತೆ ರಾಕಿಭಾಯ್ ಗೋವಾಗೆ ಜಿಗಿದಿದ್ದಾರೆ. ಈ ಸಮ್ಮರ್ ಹಾಲಿಡೇ ಯನ್ನು ಅವರು ಗೋವಾದಲ್ಲಿ ಕಳೆದಿದ್ದಾರೆ. ಪತ್ನಿ ರಾಧಿಕಾ ಅವರಿಗೆ ಗೋವಾ ಅಂದರೆ ಪ್ರಾಣ. ಅವರ ಸಂಬಂಧಿಕರು ಗೋವಾದಲ್ಲಿಯೇ ವಾಸವಾಗಿದ್ದಾರೆ. ಅದರಲ್ಲೂ ರಾಧಿಕಾ ಅವರ ಅಜ್ಜಿ ಮನೆ ಇರುವುದು ಗೋವಾದಲ್ಲಿ. ಹೀಗಾಗಿ ಗೋವಾಗೆ ಇಡೀ ಕುಟುಂಬ ಹೋಗಿದೆ. ಇದನ್ನೂ ಓದಿ : ನಟಿ ಮಂದನಾ ಕರೀಮಿಗೆ ಮೋಸ ಮಾಡಿದ್ರಾ ನಿರ್ದೇಶಕ ಅನುರಾಗ್ ಕಶ್ಯಪ್?

ಯಶ್ ಮತ್ತು ರಾಧಿಕಾ ಪಂಡಿತ್ ಹಲವಾರು ಬಾರಿ ಗೋವಾಗೆ ಹೋಗಿದ್ದಾರೆ. ಅವರ ನಿಶ್ಚಿತಾರ್ಥ ನೆರವೇರಿದ್ದು ಅದೇ ಗೋವಾದಲ್ಲಿ. ಶೂಟಿಂಗ್ ನಿಂದ ಬಿಡುವು ಸಿಕ್ಕಾಗೆಲ್ಲ ಕುಟುಂಬ ಸಮೇತ ಯಶ್ ಗೋವಾಗೆ ಹೊರಡುತ್ತಾರೆ. ಈ ಬಾರಿಯೂ ಮಕ್ಕಳು ಮತ್ತು ಪತ್ನಿಯೊಂದಿಗೆ ಗೋವಾದ ಕಡಲ ತೀರದಲ್ಲಿ ಸಮಯ ಕಳೆದಿದ್ದಾರೆ.

Comments

Leave a Reply

Your email address will not be published. Required fields are marked *