ಗೃಹ ಸಚಿವ ಆರಗ ಜ್ಞಾನೇಂದ್ರ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ: ಕೆ.ಜಿ ಬೋಪಯ್ಯ

K. G. Bopaiah

ಮಡಿಕೇರಿ: ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ರಾಜ್ಯದಲ್ಲಿ ಸಮರ್ಥವಾಗಿ ಕಾರ್ಯನಿರ್ವಾಹಿಸುತ್ತಿದ್ದಾರೆ ಎಂದು ಶಾಸಕ ಕೆ.ಜಿ ಬೋಪಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ಮಾತಾನಾಡಿದ ಅವರು, ಆರಗ ಜ್ಞಾನೇಂದ್ರ ಅವರು ಅವರ ಇತಿಮಿತಿಯ ಒಳಗೆ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಕೆಲವರಿಗೆ ಅಸಮಾಧಾನ ಇರಬಹುದು. ಆದರೆ ಈ ದೇಶದಲ್ಲಿ ಕಾನೂನು ಇದೆ. ಕಾನೂನು ಎಲ್ಲಾರಿಗೂ ಒಂದೇ. ಅದರಂತೆ ಅವರು ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಅವರ ಮೇಲೆ ಯಾವುದೇ ದೂರು ನನ್ನ ಬಳಿ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ನನ್ನ ಕೈಯಲ್ಲಿ ಭಾರತದ ಲಸಿಕೆಯಿದೆ: ಬ್ರಿಟನ್ ಪ್ರಧಾನಿ ಬೋರಿಸ್

ಇಲ್ಲೊಂದು ವರ್ಗ ಇದೆ, ಅವರು ಗಲಾಟೆ ಮಾಡಿಯೇ ಜೀವನ ಮಾಡುವ ವರ್ಗದವಾರಾಗಿದ್ದಾರೆ. ಒಂದಿಷ್ಟು ತಾಳ್ಮೆಯಿಂದ ಅವರನ್ನು ನೋಡುತ್ತಿದ್ದಾರೆ. ಆದರೆ ಆಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳುತ್ತಾರೆ. ಅದಕ್ಕೆ ಅವಕಾಶ ಕೊಡಬೇಡಿ. ನೀವು ಈ ದೇಶದ ಕಾನೂನುವನ್ನು ಗೌರವಿಸಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹೊಸ ಆತಂಕ ಹುಟ್ಟಿಸಿದ ಓಮಿಕ್ರಾನ್ BA.2.12 ತಳಿ

ಯಾರೋ ಒಬ್ಬ ಪ್ರಚೋದನೆ ನೀಡಿದರೆ, ಅದಕ್ಕೆ ಹೋಗಿ ಪ್ರತಿಭಟನೆ ಮಾಡುವುದು ಆಸ್ಪತ್ರೆಗಳ ಮೇಲೆ ಕಲ್ಲು ತೂರಾಟ ನಡೆಸುವುದು ದೇವಾಲಯಕ್ಕೆ ಕಲ್ಲು ಹೊಡೆಯುವುದು, ಪೊಲೀಸರ ಮೇಲೆ ಹಲ್ಲೆ ನಡೆಸುವುದು ಇದೆಲ್ಲಾ ಸಹಿಸಿಕೊಂಡು ಇರುವುದಕ್ಕೆ ಆಗುವುದಿಲ್ಲ. ಅದಕ್ಕೆ ಸಚಿವರು ಹೆಚ್ಚು ಆವೇಶದಿಂದ ಮಾತಾನಾಡಿರಬಹುದು. ಆದರೆ ಅಂದು ಗಲಾಟೆಯಾಗುವ ಸಂದರ್ಭದಲ್ಲಿ ಮೂರು ಸಾವಿರ ಜನಗಳನ್ನು ಒಂದೇ ಗಂಟೆಯಲ್ಲಿ ನಿಯಂತ್ರಣ ಮಾಡಿದ್ದಾರೆ. ಅದರ ಬಗ್ಗೆ ಯಾರು ಮಾತಾನಾಡುವುದಿಲ್ಲ. ಹಾಗಾಗಿ ಗೃಹ ಸಚಿವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

 

 

Comments

Leave a Reply

Your email address will not be published. Required fields are marked *