ತಂದೆಯನ್ನು ಕೊಂದ ಮಾನಸಿಕ ಅಸ್ವಸ್ಥೆ ಅರೆಸ್ಟ್

ಪಣಜಿ: ಮಾನಸಿಕ ಅಸ್ವಸ್ಥೆಯೊಬ್ಬಳು ತನ್ನ ತಂದೆಯನ್ನು ಕೊಂದು ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಗೋವಾದಲ್ಲಿ ನಡೆದಿದೆ.

ದಕ್ಷಿಣ ಗೋವಾದ ಅಂಬೌಲಿಮ್ ಗ್ರಾಮದಲ್ಲಿ ಮಾನಸಿಕ ರೋಗದಿಂದ ಬಳಲುತ್ತಿದ್ದ 50 ವರ್ಷದ ಮಹಿಳೆಯೊಬ್ಬಳು 76 ವರ್ಷದ ತಂದೆಯನ್ನು ಕೊಂದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಇದನ್ನೂ ಓದಿ: ಸಿನಿಮೀಯ ರೀತಿ ದರೋಡೆಕೋರನನ್ನೇ ಹಿಡಿದ ಮನೆಯವರು

POLICE JEEP

ಕಾರಣವೇನು?
ಆರೋಪಿ ಮರಿಯಾನ್ನೆ ಕಾರ್ಡೋಸೊ ಭಾನುವಾರ ಚರ್ಚ್‍ನಲ್ಲಿ ಈಸ್ಟರ್‌ಗಾಗಿ ಪ್ರಾರ್ಥನೆ ಸಲ್ಲಿಸಿ ನಂತರ ಮನೆಗೆ ಹೋಗಿದ್ದಾಳೆ. ತಂದೆ ಫಿಡೆಲಿಸ್ ಮರಿಯಾನೋ ಪೆಡ್ಡಾ ಮನೆಯಲ್ಲಿ ಮಲಗಿಕೊಂಡಿದ್ದರು. ಈ ವೇಳೆ ಮನೆಗೆ ಹೋದ ಕಾರ್ಡೋಸೊ ಮರದ ದೊಣ್ಣೆಯಿಂದ ತಂದೆ ಮೇಲೆ ಹಲ್ಲೆ ಮಾಡಿದ್ದಾಳೆ. ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಸಮಯದಲ್ಲಿ ಆಕೆಯ ತಾಯಿ ಸಹ ಮನೆಯಲ್ಲಿ ಇರಲಿಲ್ಲ ಎಂದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿಯನ್ನು ಬಂಧಿಸಿ ಆಕೆ ಮೊದಲು ಚಿಕಿತ್ಸೆ ಪಡೆಯುತ್ತಿದ್ದ ಮನೋವೈದ್ಯ ಸಂಸ್ಥೆಗೆ ಕಳುಹಿಸಲಾಗಿದೆ. 2000ರಲ್ಲಿ ಕಾರ್ಡೋಸೊ ವಿಚ್ಛೇದನ ಪಡೆದಿದ್ದು, ತನ್ನ ತಂದೆಯೊಂದಿಗೆ ವಾಸಿಸುತ್ತಿದ್ದಳು. ಆದರೆ ಈ ಕೊಲೆಗೆ ಏನು ಕಾರಣ ಎಂಬುದಕ್ಕೆ ಯಾವುದೇ ರೀತಿಯ ಮಾಹಿತಿ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಸ್ತಮೈಥುನದಿಂದ ಶ್ವಾಸಕೋಶದ ತೊಂದರೆಗೆ ಸಿಲುಕಿದ ಯುವಕ – ಎಕ್ಸ್‌ರೇ ನೋಡಿ ಶಾಕ್‌ 

ಪ್ರಸ್ತುತ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

Comments

Leave a Reply

Your email address will not be published. Required fields are marked *