ಜೆರುಸಲೇಮ್ ಮಸೀದಿಯಲ್ಲಿ ಹಿಂಸಾಚಾರ – 150ಕ್ಕೂ ಹೆಚ್ಚು ಮಂದಿಗೆ ಗಾಯ

ಜೆರುಸಲೇಮ್: ಶುಕ್ರವಾರ ಜೆರುಸಲೇಮ್‌ನ ಅಲ್-ಅಕ್ಸಾ ಮಸೀದಿ ಆವರಣದಲ್ಲಿ ಪ್ಯಾಲಸ್ಟೈನ್ ಮಂದಿ ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆದಿದ್ದು, ಘಟನೆಯಲ್ಲಿ 150ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.

ಇಸ್ರೇಲ್ ಹಾಗೂ ಪ್ಯಾಲೆಸ್ಟಿನ್ ಸಂಘರ್ಷ ತಲೆಮಾರುಗಳಷ್ಟು ಹಳೆಯ ಇತಿಹಾಸ ಹೊಂದಿದೆ. ಶುಕ್ರವಾರ ನಡೆದ ಘಟನೆಯಿಂದಾಗಿ ಹಿಂಸಾಚಾರ ಇನ್ನೂ ಉಲ್ಬಣಗೊಳ್ಳುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತವಾಗಿದೆ. ಇದನ್ನೂ ಓದಿ: 6 ತಿಂಗಳ ಬಾಹ್ಯಾಕಾಶ ಯಾನ ಮುಗಿಸಿ ಬರಲಿದ್ದಾರೆ ಭಾರತೀಯ ಮೂಲದ ಗಗನಯಾತ್ರಿ

ಶುಕ್ರವಾರ ನಡೆದ ಘರ್ಷಣೆಯಲ್ಲಿ ರಬ್ಬರ್ ಬುಲೆಟ್, ಸ್ಟನ್ ಗ್ರೆನೇಡ್, ಲಾಠಿ ಏಟಿನಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ಯಾಲಸ್ಟೈನ್‌ನವರು ಗಾಯಗೊಂಡಿದ್ದಾರೆ ಎಂದು ರೆಡ್ ಕ್ರೆಸೆಂಟ್ ತಿಳಿಸಿದೆ. ಇದನ್ನೂ ಓದಿ: ಉಕ್ರೇನ್‌ ಯುದ್ಧ – ಭಾರತದಿಂದ ಈಜಿಪ್ಟ್‌ಗೆ ರಫ್ತು ಆಗಲಿದೆ ಗೋಧಿ

ಅಲ್-ಅಕ್ಸಾ ಮಸೀದಿ ಆವರಣ ಪೂರ್ವ ಜೆರುಸೆಲೇಮ್‌ನ ಓಲ್ಡ್ ಸಿಟಿ ಪ್ರದೇಶದಲ್ಲಿದೆ. ಇದನ್ನು ಇಸ್ರೇಲ್ 1967ರಲ್ಲಿ ಯುದ್ಧದಲ್ಲಿ ವಶಪಡಿಸಿಕೊಂಡಿದೆ.

ಕಳೆದ 2 ವಾರಗಳ ಹಿಂದೆ ನಡೆದ ಇಸ್ರೇಲ್‌ನ ಅರಬ್ ಸ್ಟ್ರೀಟ್ ದಾಳಿಯ ಬಳಿಕ ದೇಶಾದ್ಯಂತ ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿದೆ.

Comments

Leave a Reply

Your email address will not be published. Required fields are marked *