ಮಹಿಳಾ ರೋಗಿಗಳಿಗೆ ಕಿಸ್‌, ಹಗ್‌ ಮಾಡಿ ಲೈಂಗಿಕ ಅಪರಾಧ- ಭಾರತ ಮೂಲದ ವೃದ್ಧ ವೈದ್ಯನಿಗೆ ಶಿಕ್ಷೆ

ಲಂಡನ್:‌ ಸ್ಕಾಟ್ಲ್ಯಾಂಡ್‌ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಭಾರತ ಮೂಲದ ವೈದ್ಯನೊಬ್ಬ 48 ಮಹಿಳಾ ರೋಗಿಗಳ ಲೈಂಗಿಕ ಅಪರಾಧ ಎಸಗಿದ್ದು, ತಪ್ಪಿತಸ್ಥ ಎಂದು ಸಾಬೀತಾಗಿದೆ.

72 ವಯಸ್ಸಿನ ವೈದ್ಯ ಕೃಷ್ಣ ಸಿಂಗ್ ಮೇಲೆ ಅನಾರೋಗ್ಯದ ಕಾರಣ ಆಸ್ಪತ್ರೆಗೆ ಬರುವ ಮಹಿಳಾ ರೋಗಿಗಳಿಗೆ ಚುಂಬಿಸುವುದು, ತಬ್ಬಿಕೊಳ್ಳುವುದು, ಪರೀಕ್ಷೆ ಹೆಸರಿನಲ್ಲಿ ಅನುಚಿತವಾಗಿ ವರ್ತಿಸುವುದು, ಅಶ್ಲೀಲ ಪದ ಬಳಕೆ ಸೇರಿದಂತೆ ಅನೇಕ ಆರೋಪಗಳನ್ನು ಹೊರಿಸಲಾಗಿತ್ತು. ಇದನ್ನೂ ಓದಿ: ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಶಾಂಘೈ ಜನ – ಸಾಕು ಪ್ರಾಣಿಗಳ ಮಾರಣಹೋಮ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಲಾಸ್ಗೋದಲ್ಲಿನ ಹೈಕೋರ್ಟ್‌ನಲ್ಲಿ ವಿಚಾರಣೆಯ ಸಂದರ್ಭದಲ್ಲಿ ವೈದ್ಯ ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿದ್ದರು. ರೋಗಿಗಳು ಸುಳ್ಳು ಹೇಳುತ್ತಿದ್ದಾರೆ ಎಂದು ವಾದಿಸಿದ್ದರು.

ಡಾ. ಸಿಂಗ್‌ ಅವರು ಮಹಿಳೆಯರ ಮೇಲೆ ಅಪರಾಧ ಎಸಗುವ ಕೆಲಸಗಳನ್ನು ಮಾಡುತ್ತಿದ್ದರು. ಲೈಂಗಿಕ ಅಪರಾಧವು ಅವರ ವೃತ್ತಿ ಜೀವನದ ಭಾಗವೇ ಆಗಿತ್ತು ಎಂದು ಪ್ರಾಸಿಕ್ಯೂಟರ್‌ ಏಂಜೆಲಾ ಗ್ರೇ ಕೋರ್ಟ್‌ಗೆ ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕ ನೆಲದಲ್ಲೇ ಅಮೆರಿಕಕ್ಕೆ ತಿರುಗೇಟು ನೀಡಿದ ಭಾರತ

ಸಿಂಗ್ ಅವರು ಗೌರವಾನ್ವಿತ ಸದಸ್ಯರಾಗಿ ಗುರುತಿಸಿಕೊಂಡಿದ್ದರು. ವೈದ್ಯಕೀಯ ಕ್ಷೇತ್ರಕ್ಕೆ ಅವರ ಕೊಡುಗೆಗಾಗಿ ರಾಯಲ್ ಮೆಂಬರ್ ಆಫ್ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ (MBE) ಗೌರವವನ್ನು ಸಹ ನೀಡಲಾಗಿತ್ತು. ಆದರೆ 2018 ರಲ್ಲಿ ಮಹಿಳೆಯೊಬ್ಬರು ದೂರು ನೀಡಿದ ನಂತರ ಅವರ ನಡವಳಿಕೆಯ ಬಗ್ಗೆ ತನಿಖೆ ಪ್ರಾರಂಭಿಸಲಾಯಿತು.

ಡಾ. ಸಿಂಗ್‌ ಒಟ್ಟು 54 ಅಪರಾಧಗಳಲ್ಲಿ ಶಿಕ್ಷೆಗೆ ಗುರಿಯಾಗಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಮುಂದಿನ ತಿಂಗಳವರೆಗೆ ಶಿಕ್ಷೆಯನ್ನು ಮುಂದೂಡಿದ್ದಾರೆ. ಸಿಂಗ್ ಅವರ ಪಾಸ್‌ಪೋರ್ಟ್ ಒಪ್ಪಿಸುವ ಷರತ್ತಿನ ಮೇಲೆ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಅವಕಾಶ ನೀಡಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್ ಕಂಪನಿಯನ್ನೇ ಖರೀದಿಸುವುದಾಗಿ ಆಫರ್ ಕೊಟ್ಟ ಮಸ್ಕ್

Comments

Leave a Reply

Your email address will not be published. Required fields are marked *