ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಹುತಾತ್ಮರಾದವರ ತ್ಯಾಗ ಮುಂದಿನ ಪೀಳಿಗೆಗೆ ಪ್ರೇರಣೆ: ಮೋದಿ

ನವದೆಹಲಿ: ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಹುತಾತ್ಮರಾದವರ ಅಪ್ರತಿಮ ಧೈರ್ಯ ಮತ್ತು ತ್ಯಾಗ ಮುಂದಿನ ಪೀಳಿಗೆಗೆ ಪ್ರೇರಣೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

1919ರ ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಹುತಾತ್ಮರಾದವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ವಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?: 1919ರಲ್ಲಿ ಜಲಿಯನ್ ವಾಲಾಬಾಗ್‍ನಲ್ಲಿ ಹುತಾತ್ಮರಾದವರಿಗೆ ಗೌರವ ನಮನ ಸಲ್ಲಿಸುತ್ತೇನೆ. ಅವರ ಅಪ್ರತಿಮ ಧೈರ್ಯ ಮತ್ತು ತ್ಯಾಗ ಮುಂದಿನ ಪೀಳಿಗೆಯನ್ನು ಪ್ರೇರೆಪಿಸುತ್ತದೆ. ಕಳೆದ ವರ್ಷ ಜಲಿಯನ್ ವಾಲಾಬಾಗ್ ಸ್ಮಾರಕದ ನವೀಕೃತ ಸಂಕೀರ್ಣದ ಉದ್ಘಾಟನಾ ಸಮಾರಂಭದ ಭಾಷಣವನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದರು.

1919ರಲ್ಲಿ ರೌಲಟ್ ಕಾಯಿದೆಯ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ನೂರಾರು ಭಾರತೀಯರನ್ನು ಬ್ರಿಟಿಷ್ ಪಡೆಗಳು ಗುಂಡಿಕ್ಕಿ ಕೊಂದುಹಾಕಿದ್ದವು. ಇದು ಭಾರತದ ಬ್ರಿಟಿಷರು ಮಾಡಿದ ಆಕ್ರಮಣದಲ್ಲಿ ಅತ್ಯಂತ ಕ್ರೂರ ಘಟನೆಗಳಲ್ಲಿ ಒಂದಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಮುಖಾಮುಖಿ ಭೇಟಿಯಾದ ನಂತರವಷ್ಟೇ ಈಶ್ವರಪ್ಪ ರಾಜೀನಾಮೆ ನಿರ್ಧಾರ: ಬೊಮ್ಮಾಯಿ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕೂಡ ಟ್ವೀಟ್ ಮಾಡಿ, ಶ್ರದ್ಧಾಂಜಲಿ ಸಲ್ಲಿಸಿದರು. ಭಾರತದ ಇತಿಹಾಸದಲ್ಲಿ ಜಲಿಯನ್ ವಾಲಾಬಾಗ್ ಒಂದು ರಕ್ತಸಿಕ್ತ ಹತ್ಯಾಕಾಂಡವಾಗಿದೆ. ನಮ್ಮ ಮಹಾನ್ ಹುತಾತ್ಮರು ಮಾಡಿದ ತ್ಯಾಗವನ್ನು ನಾವು ಎಂದಿಗೂ ಮರೆಯುವುದಿಲ್ಲ. ಈ ಸ್ವಾತಂತ್ರ್ಯವನ್ನು ನೀಡಿದ ಈ ಹುತಾತ್ಮರಿಗೆ ನಾವು ನಮ್ಮ ಜೀವನದುದ್ದಕ್ಕೂ ಋಣಿಯಾಗಿರುತ್ತೇವೆ. ಕ್ರಾಂತಿ ಚಿರಾಯುವಾಗಲಿ ಎಂದರು. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಈಶ್ವರಪ್ಪ ರಾಜೀನಾಮೆ ಕೊಡಬಾರದು: ಸಚಿವ ನಿರಾಣಿ

Comments

Leave a Reply

Your email address will not be published. Required fields are marked *