ಆಲಿಯಾ-ರಣಬೀರ್ ಮದುವೆ ಮುಂದೂಡಿಕೆ: ಕಾರಣ ವಿಚಿತ್ರ

ಅಂದುಕೊಂಡಂತೆ ಆಗಿದ್ದರೆ ಇದೇ ಎಪ್ರೀಲ್ 15ರಂದು ಬಾಲಿವುಡ್ ತಾರಾ ಜೋಡಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಜೋಡಿ ಮದುವೆ ಆಗಬೇಕಿತ್ತು. ಕಳೆದ ಮೂರ್ನಾಲ್ಕು ವರ್ಷಗಳಿಂದ ಹೀಗೆ ಮದುವೆ ವಿಷಯವನ್ನು ಅಲ್ಲಗಳೆಯುತ್ತಲೇ ಬಂದಿದ್ದು ಈ ಜೋಡಿ, ಈ ಬಾರಿ ಮದುವೆ ಆಗಲೇಬೇಕು ಎಂದು ನಿರ್ಧರಿಸಿ, ದಿನಾಂಕ ನಿಗದಿಮಾಡಿಕೊಂಡಿದ್ದರು. ಆದರೆ, ಅಂದುಕೊಂಡ ದಿನಾಂಕದಂದು ಮದುವೆ ನಡೆಯುತ್ತಿಲ್ಲ ಎಂದಿದ್ದಾರೆ ಆಲಿಯಾ ಭಟ್ ಸಹೋದರ ರಾಹುಲ್ ಭಟ್. ಇದನ್ನೂ ಓದಿ : ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2

ನಾಳೆಯಿಂದ ಆಲಿಯಾ ಮತ್ತು ರಣಬೀರ್ ಮದುವೆಯ ಕಾರ್ಯಗಳು ನಡೆಯಬೇಕಿತ್ತು. ನಾಳೆಯಿಂದ ಎಪ್ರಿಲ್ 17ರವರೆಗೂ ಬಗೆ ಬಗೆಯ ಕಾರ್ಯಗಳು ನಿಗದಿಯಾಗಿದ್ದವು. ಅವು ಯಾವವೂ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ ರಾಹುಲ್ ಭಟ್. ಮದುವೆ ದಿನಾಂಕ ಸೇರಿದಂತೆ ಇತರ ಕಾರ್ಯಗಳ ದಿನಾಂಕವನ್ನು ಶೀಘ್ರದಲ್ಲೇ ತಿಳಿಸುವುದಾಗಿ ಹೇಳಿದ್ದಾರೆ. ಇದನ್ನೂ ಓದಿ:  ಕೊನೆಗೂ ಮದುವೆಯ ವಿಚಾರ ಖಚಿತಪಡಿಸಿದ ಆಲಿಯಾ!

ranbir alia

ಮದುವೆಯ ದಿನಾಂಕವನ್ನು ಬದಲಿಸಲು ಅವರು ಕೊಟ್ಟಿರುವ ಕಾರಣ, ಭದ್ರತೆ. ಮದುವೆ ದಿನಾಂಕ ಮತ್ತು ಅತಿಥಿಗಳ ವಿಚಾರವನ್ನು ನಾವು ಗುಟ್ಟಾಗಿ ಇಟ್ಟಿದ್ದೇವೆ. ಕೆಲವೇ ಕೆಲವು ಜನರಿಗೆ ಆಹ್ವಾನ ನೀಡಲಾಗಿತ್ತು. ಆಹ್ವಾನಿತರು ಕೂಡ ಬೆರಳೆಣಿಕೆಯಲ್ಲಿದ್ದರು. ಅಷ್ಟರಲ್ಲಿ ಮದುವೆ ದಿನಾಂಕ, ಸ್ಥಳ ಮತ್ತು ಇತರ ವಿಷಯಗಳು ಮಾಧ್ಯಮಗಳಿಗೆ ಲೀಕ್ ಆದವು. ಹಾಗಾಗಿ ಅನಿವಾರ್ಯವಾಗಿ ನಾವು ಮದುವೆಯನ್ನು ಮುಂದೂಡಿದ್ದೇವೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ ರಾಹುಲ್.

ಮತ್ತೊಂದು ಮೂಲಗಳ ಪ್ರಕಾರ, ಈಗಾಗಲೇ ಮದುವೆ ಫಿಕ್ಸ್ ಆದ ದಿನವೇ ಆಲಿಯಾ ಮತ್ತು ರಣಬೀರ್ ಹಸಮಣೆ ಏರಲಿದ್ದಾರೆ. ಮಾಧ್ಯಮಗಳಿಗೆ ಮತ್ತು ಅಭಿಮಾನಿಗಳಿಗೆ ದಿಕ್ಕು ತಪ್ಪಿಸುವುದಕ್ಕಾಗಿಯೇ ಮದುವೆ ದಿನಾಂಕ ಬದಲಾಯಿಸಿದ್ದೇವೆ ಎಂದು ಹೇಳಿಸಲಾಗಿದೆ ಎನ್ನುವ ಮಾತೂ ಕೂಡ ಇದೆ. ಮದುವೆ ಖಾಸಗಿಯಾಗಿದ್ದರಿಂದ, ಆದಷ್ಟು ಕುಟುಂಬದವರಷ್ಟೇ ಪಾಲ್ಗೊಳ್ಳಲು ಮತ್ತು ಮಾಧ್ಯಮಗಳ ಕ್ಯಾಮೆರಾದಿಂದ ತಪ್ಪಿಸಿಕೊಳ್ಳಲು ಈ ರೀತಿ ಸುದ್ದಿಯನ್ನು ಹರಿಬಿಡಲಾಗುತ್ತಿದೆ ಎನ್ನುವ ಮಾತೂ ಇದೆ.

Comments

Leave a Reply

Your email address will not be published. Required fields are marked *