ವಿಜಯಪುರ: ಕಾಂಗ್ರೆಸ್ ಮುಕ್ತ ಭಾರತ ಮಾಡೋಕೆ ಯಾರಪ್ಪನ ಕೈಯಲ್ಲೂ ಆಗುವುದಿಲ್ಲ ಎಂದು ಯೂಥ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಹಮ್ಮದ್ ನಲಪಾಡ್ ತಿಳಿಸಿದರು.
ಬೆಲೆ ಏರಿಕೆ ಖಂಡಿಸಿ ವಿಜಯಪುರದಲ್ಲಿ ಯೂಥ್ ಕಾಂಗ್ರೆಸ್ನಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದೆ. ಕಾಂಗ್ರೆಸ್ ಪಕ್ಷದ ಇತಿಹಾಸ ಈ ದೇಶದ ಇತಿಹಾಸ. ಆ ಇತಿಹಾಸವನ್ನು ಯಾರ ಕೈಯಲ್ಲೂ ಬದಲಾಯಿಸೋಕೆ ಆಗಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

ಸ್ವಾತಂತ್ರ್ಯ ಹೋರಾಟ ಮಾಡುವಾಗ ಯಾವ ಬಿಜೆಪಿ, ಆರ್ಎಸ್ಎಸ್, ಎಎಪಿಯೂ ಇರಲಿಲ್ಲ. ಬರೀ ಕಾಂಗ್ರೆಸ್ ಪಕ್ಷವೊಂದೇ ಇತ್ತು. ನಮ್ಮ ನಿಮ್ಮ ಪರವಾಗಿ ಹೋರಾಡಿ ಸ್ವಾತಂತ್ರ್ಯ ತಂದು ಕೊಟ್ಟಿದೆ. ಹಾಗಾಗಿ ಕಾಂಗ್ರೆಸ್ ಮುಕ್ತ ಭಾರತ ಮಾಡೋಕೆ ಯಾರಪ್ಪನ ಕೈಯಲ್ಲಿ ಆಗೋಲ್ಲ ಎಂದರು. ಇದನ್ನೂ ಓದಿ: ಲವ್ ಜಿಹಾದ್ಗೆ ಮುಂದಾದವರ ಮನೆ ಹೊಕ್ಕು ಹೊಡೆಯಬೇಕು: EX MLC ನಾರಾಯಣಸಾ ಭಾಂಡಗೆ

2023 ರಾಜ್ಯದಲ್ಲಿ ಹಾಗೂ 2024ರಲ್ಲಿ ದೆಹಲಿಯಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ನಮಗೆ ಸೋಲಾಗುವುದಿಲ್ಲ ಎಂದು ಭವಿಷ್ಯ ನುಡಿದ ಅವರು, ಕಾಂಗ್ರೆಸ್ ಸರ್ಕಾರ ಮಾತ್ರ ಜನಪರ ಯೋಚನೆ ಮಾಡುತ್ತದೆ. ಯುವಕರ ಬಗ್ಗೆ ಕಾಳಜಿ ಇರುವ ನಾಯಕ ರಾಹುಲ್ ಗಾಂಧಿ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಪುಂಡರ ಬೈಕ್ ವೀಲ್ಹಿಂಗ್ ಕ್ರೇಜ್ಗೆ ಆಸ್ಪತ್ರೆ ಸೇರಿದ ಪಾದಚಾರಿ

Leave a Reply