ಕ್ಯಾಮೆರಾ ಮುಂದೆ ಟೀ ಶರ್ಟ್ ಬಿಚ್ಚಿ ಮಾತು ಉಳಿಸಿಕೊಂಡ ಪೂನಂ

ಲಾಕಪ್ ರಿಯಾಲಿಟಿ ಶೋನಲ್ಲಿ ತಮ್ಮನ್ನು ವೋಟು ಮಾಡುವ ಮೂಲಕ ಮನೆಯಲ್ಲೇ ಉಳಿಯುವಂತೆ ಮಾಡಿದರೆ, ವೀಕ್ಷಕರಿಗೆ ಸರ್ ಪ್ರೈಸ್ ಕಾದಿದೆ ಎಂದಿದ್ದರು ಬಾಲಿವುಡ್ ನ ವಿವಾದಿತ ತಾರೆ ಪೂನಂ ಪಾಂಡೆ. ತಾವು ಈ ಶೋನಿಂದ ಬಚಾವ್ ಆದರೆ, ಕ್ಯಾಮೆರಾ ಮುಂದೆ ಟೀ ಶರ್ಟ್ ಬಿಚ್ಚುವುದಾಗಿ ಮಾತು ಕೊಟ್ಟಿದ್ದರು. ಸಹ ಸ್ಪರ್ಧಿಗಳು ಈಕೆ ಸುಳ್ಳು ಹೇಳುತ್ತಾಳೆ. ಕಂಡಿತಾ ಆ ಕೆಲಸವನ್ನು ಮಾಡಲಾರಳು ಎಂದು ಜರಿದಿದ್ದರು. ಆದರೆ, ಪೂನಂ ಹಾಗೆ ಮಾಡಲಿಲ್ಲ. ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ತಾವು ಎಲಿಮಿನೇಷನ್ ಆಗದೇ ಮತ್ತೆ ಮನೆಯಲ್ಲೇ ಮುಂದುವರೆದಿದ್ದರಿಂದ ಕ್ಯಾಮೆರಾ ಮುಂದೆ ಬಂದು ಟೀ ಶರ್ಟ್ ಬಿಚ್ಚಿದ್ದಾರೆ. ಅದು ಲೈವ್ ಕ್ಯಾಮೆರಾ ಮುಂದೆಯೇ ಈ ಘಟನೆ ನಡೆದು ಹೋಗಿದೆ. ಇದನ್ನೂ ಓದಿ : ಸಂಜನಾ ತಲೆ ಬೋಳಿಸಿಕೊಂಡಿದ್ದು ಸುಳ್ಳೇ ಸುಳ್ಳು : ಭಾವನೆಗಳ ಜೊತೆ ಆಟವಾಡಿದ ನಟಿಗೆ ಕ್ಲಾಸ್ ತಗೆದುಕೊಂಡ ನೆಟ್ಟಿಗರು

ಬಹುತೇಕ ವಿವಾದಿತ ತಾರೆಯರನ್ನೇ ಜೈಲಿನಲ್ಲಿಟ್ಟು ನಡೆಯುತ್ತಿರುವ ಕಾರ್ಯಕ್ರಮ ಇದಾಗಿದೆ. ಈ ಶೋ ಅನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ನಡೆಸಿಕೊಡುತ್ತಿದ್ದಾರೆ. ಈ ಶೋನಲ್ಲಿ ಪೂನಂ ಸೇರಿದಂತೆ ಬಹುತೇಕ ಸ್ಪರ್ಧಿಗಳು ಒಂದಿಲ್ಲೊಂದು ರೀತಿಯಲ್ಲಿ ಮನೆಯಲ್ಲೇ ವಿವಾದಗಳನ್ನು ಸೃಷ್ಟಿ ಮಾಡುತ್ತಿದ್ದಾರೆ. ಎಲಿಮಿನೇಷನ್ ನಿಂದ ಬಚಾವ್ ಆಗಲು ಸ್ಪರ್ಧಿಗಳು ಯಾರಿಗೂ ಗೊತ್ತಿರದ ಸಂಗತಿಗಳನ್ನು ಹೇಳಿಕೊಳ್ಳಬೇಕು. ಅಥವಾ ವೀಕ್ಷಕರನ್ನು ಮೋಡಿ ಮಾಡಿ ವೋಟು ಪಡೆದುಕೊಳ್ಳಬೇಕು ಎಂಬ ನಿಯಮವಿದೆ. ಅದನ್ನು ಸದುಪಯೋಗ ಪಡಿಸಿಕೊಂಡಿರುವ ಪೂನಂ, ಈ ಹಿಂದೆ ಲೈವ್ ಕ್ಯಾಮೆರಾ ಮುಂದೆಯೇ ಬಂದು ಟೀ ಶರ್ಟ್ ಬಿಚ್ಚುತ್ತೇನೆ. ನನಗೆ ವೋಟು ಮಾಡಿ ಉಳಿಸಿಕೊಳ್ಳಿ ಎಂದು ಮನವಿ ಮಾಡಿದ್ದರು. ಇದನ್ನೂ ಓದಿ: ರಣಬೀರ್ ನನ್ನ ದೊಡ್ಡ ವಿಮರ್ಶಕ ಎಂದು ಹೇಳಿ ನಾಚಿ ನೀರಾದ ಆಲಿಯಾ

ಟೀ ಶರ್ಟ್ ಬಿಚ್ಚುವ ಮುನ್ನ ‘ಈ ಕಾರ್ಯಕ್ರಮವನ್ನು ಎಲ್ಲ ವಯೋಮಾನದವರು ನೋಡುತ್ತಾರೆ ಎನ್ನುವುದನ್ನು ಬಲ್ಲೆ. ಹಾಗಾಗಿ ನಾನು ಕಾರ್ಯಕ್ರಮದ ಯಾವ ನಿಯಮವನ್ನು ಉಲ್ಲಂಘಿಸುವುದಿಲ್ಲ. ಯಾರಿಗೂ ಮುಜಗರ ಪಡುವಂತ ಕೆಲಸವನ್ನೂ ಮಾಡುವುದಿಲ್ಲ. ಈ ನಡುವೆಯೇ ನಾನು ಕೊಟ್ಟ ಭರವಸೆಯನ್ನು ಈಡೇರಿಸಬೇಕಿದೆ. ಹಾಗಾಗಿ ಟೀ ಶರ್ಟ್ ಬಿಚ್ಚುತ್ತೇನೆ’ ಎಂದು ಹೇಳಿ ಕೆಲವೇ ಸೆಕೆಂಡ್ ಗಳಲ್ಲಿ ಟೀ ಶರ್ಟ್ ಬಿಚ್ಚಿ ಅಚ್ಚರಿ ಮೂಡಿಸುತ್ತಾರೆ ಪೂನಂ.

ಇದರ ಜತೆಗೆ ತಾವು ಕಾರ್ಯಕ್ರಮದಿಂದ ಆಚೆ ಬಂದಾಗ ಇನ್ನೂ ಸರ್ ಪ್ರೈಸ್ ಗಳು ಕಾದಿರುತ್ತವೆ. ಸದ್ಯ ಇತಿಮಿತಿಯಲ್ಲೇ ನಾನು ನಿಮ್ಮೆಲ್ಲರ ಆಸೆ ಪೂರೈಸಿದ್ದೇನೆ ಎಂದು ಹೇಳುವ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ ಪೂನಂ.

Comments

Leave a Reply

Your email address will not be published. Required fields are marked *