ಗ್ರೀಸ್‌ನಲ್ಲಿ `ಕೆಜಿಎಫ್ 2′: ಹೊಸ ದಾಖಲೆ ಬರೆದ ರಾಕಿಭಾಯ್ ಚಿತ್ರ

ನ್ಯಾಷನಲ್ ಸ್ಟಾರ್ ಯಶ್ ನಟನೆಯ `ಕೆಜಿಎಫ್ 2′ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಅಭಿಮಾನಿಗಳಲ್ಲಿ ದಿನದಿಂದ ದಿನಕ್ಕೆ ರಾಕಿಭಾಯ್ ಫೀವರ್ ಜೋರಾಗುತ್ತಿದೆ. ವಿಶ್ವದ ಮೂಲೆ ಮೂಲೆಯಲ್ಲೂ ರಿಲೀಸ್ ಆಗುತ್ತಿರುವ `ಕೆಜಿಎಫ್ 2′ ರಿಲೀಸ್‌ಗೂ ಮುಂಚೆನೇ ಒಂದಲ್ಲಾ ಒಂದು ವಿಚಾರವಾಗಿ ಚಿತ್ರ ದಾಖಲೆ ಬರೆಯುತ್ತಿದೆ.

ಹಲವು ಭಾಷೆಗಳಲ್ಲಿ ತೆರೆ ಕಾಣುತ್ತಿರುವ ಈ ಚಿತ್ರ, ಕನ್ನಡ ಸಿನಿಮಾಗಳು ತೆರೆ ಕಾಣದ ಪ್ರದೇಶಗಳಲ್ಲೂ ರಿಲೀಸ್ ಮಾಡಲು `ಕೆಜಿಎಫ್ 2′ ಪಣ ತೊಟ್ಟಿದೆ. ಕೆಜಿಎಫ್ 2 ದಾಖಲೆಗಳ ಸಾಲಲ್ಲಿ ಮತ್ತೊಂದು ದಾಖಲೆ ಸೇರಿಕೊಂಡಿದೆ. ಗ್ರೀಸ್‌ನಲ್ಲಿ ದಕ್ಷಿಣ ಭಾರತದ ಮೊದಲ ಚಿತ್ರವಾಗಿ ಗ್ರೀಸ್ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ದಕ್ಷಿಣ ಭಾರತದ ಸಿನಿಮಾಗಳು ಮಾಡದ ಈ ಸಾಧನೆಯನ್ನು ಕನ್ನಡದ `ಕೆಜಿಎಫ್ 2′ ಮಾಡಿದೆ.

`ಕೆಜಿಎಫ್ 2′ ಅಮೆರಿಕಾ, ರಷ್ಯಾ, ಯುರೋಪ್, ವಿಶ್ವದೆಲ್ಲಡೆ ದೊಡ್ಡ ಮಟ್ಟದಲ್ಲಿ ತೆರೆಕಾಣುತ್ತಿದೆ. ಇತ್ತೀಚಿಗೆ ಬ್ರಿಟನ್‌ನಲ್ಲಿ 12 ಗಂಟೆಗಳಲ್ಲಿ 5000 ಸಾವಿರಕ್ಕೂ ಅಧಿಕ ಟಿಕೆಟ್ ಬುಕ್ ಆಗಿ ರೆಕಾರ್ಡ್ ಮಾಡಿತ್ತು. ಈಗ ಗ್ರೀಸ್‌ನಲ್ಲಿ ರಿಲೀಸ್ ಆಗಲಿರುವ ದಕ್ಷಿಣ ಭಾರತದ ಮೊದಲ ಚಿತ್ರವಾಗಿ ದಾಖಲೆ ಮಾಡಿದೆ. ಸಿನಿರಸಿಕರಿಗೆ ತಮ್ಮ ಚಿತ್ರ ತಲುಪಬೇಕು ಅನ್ನೋ ದೃಷ್ಠಿಯಿಂದ ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಇದನ್ನು ಓದಿ:ಕುವೈತ್‌ನಲ್ಲಿ ದಳಪತಿ ವಿಜಯ್ ನಟನೆಯ `ಬೀಸ್ಟ್’ ಸಿನಿಮಾ ಬ್ಯಾನ್

ಡೈರೆಕ್ಟರ್‌ ಪ್ರಶಾಂತ್‌ ನೀಲ್ ಮತ್ತು ಯಶ್ ಕಾಂಬಿನೇಷನ್‌ನ `ಕೆಜಿಎಫ್ ೨’ ನಲ್ಲಿ  ತಾರಾಡಂಡೆ ಈ ಚಿತ್ರದಲ್ಲಿದೆ. ಯಶ್ ಮುಂದೆ ಅಬ್ಬರಿಸಲು ಅಧೀರನಾಗಿ ಸಂಜಯ್ ದತ್ ನಟಿಸಿದ್ದಾರೆ. ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ಪ್ರಕಾಶ್ ರಾಜ್ ಸಾಥ್ ನೀಡಿದ್ದಾರೆ. ಇದೇ ಏಪ್ರಿಲ್ ೧೪ಕ್ಕೆ ತೆರೆಗೆ ಬರಲು ರೆಡಿಯಿದ್ದು, ರಾಕಿಭಾಯ್ ಅವತಾರ ಕಣ್ತುಂಬಿಕೊಳ್ಳೊಕೆ ಫ್ಯಾನ್ಸ್ ಕಾಯುತ್ತಿದ್ದಾರೆ.

Comments

Leave a Reply

Your email address will not be published. Required fields are marked *