ಹೈದರಾಬಾದ್ ಗೆಲುವಿನ ಹೋಪ್ಸ್‌ ಹೋಲ್ಡ್ ಮಾಡಿದ ಹೋಲ್ಡರ್ – ಲಕ್ನೋಗೆ ರೋಚಕ ಜಯ

ಮುಂಬೈ: ಗೆಲುವಿಗಾಗಿ ಕೊನೆಯವರೆಗೂ ಹೋರಾಡಿದ ಹೈದರಾಬಾದ್ ಮತ್ತು ಲಕ್ನೋ ತಂಡಗಳ ಪೈಕಿ ಅಂತಿಮವಾಗಿ ಲಕ್ನೋ ತಂಡ ಗೆಲುವಿನ ಕೇಕೆ ಹಾಕಿದೆ.

ಗೆದ್ದಿದ್ದು ಹೇಗೆ:
ಲಕ್ನೋಗೆ ಕೊನೆಯ 12 ಎಸೆತಗಳಲ್ಲಿ 26 ರನ್ ಅವಶ್ಯಕತೆ ಇತ್ತು. 19ನೇ ಓವರ್‌ನಲ್ಲಿ 10 ರನ್‌ ಬಂತು. ಕೊನೆಯ 6 ಎಸೆತಗಳಲ್ಲಿ 16 ರನ್ ಬೇಕಿತ್ತು ಕೊನೆಯ ಓವರ್ ಎಸೆದ ಜೇಸನ್ ಹೋಲ್ಡರ್ ಕೇವಲ 3 ರನ್ ನೀಡಿ 3 ವಿಕೆಟ್ ಕಿತ್ತು ಲಕ್ನೋಗೆ 12 ರನ್‍ಗಳ ರೋಚಕ ಜಯ ತಂದು ಕೊಟ್ಟರು.

170 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಹೈದರಾಬಾದ್ ತಂಡಕ್ಕೆ ರಾಹುಲ್ ತ್ರಿಪಾಠಿ 44 ರನ್ (30 ಎಸೆತ, 5 ಬೌಂಡರಿ, 1 ಸಿಕ್ಸ್) ಮತ್ತು ನಿಕೋಲಸ್ ಪೂರನ್ 34 ರನ್ (24 ಎಸೆತ, 3 ಬೌಂಡರಿ, 2 ಸಿಕ್ಸ್) ಸಿಕ್ಸ್ ಸಿಡಿಸಿ ತಂಡಕ್ಕೆ ನೆರವಾದರು. ಅಂತಿಮವಾಗಿ ಲಕ್ನೋ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 157 ರನ್ ಸಿಡಿಸಿ 12 ರನ್‍ಗಳಿಂದ ಸೋಲೊಪ್ಪಿಕೊಂಡಿತು.

ಎದುರಾಳಿ ನಾಯಕ ವಿಲಿಯಮ್ಸನ್ ನಿರ್ಧಾರದಂತೆ ಮೊದಲು ಬ್ಯಾಟ್ ಮಾಡಲು ಅವಕಾಶ ಪಡೆದ ಲಕ್ನೋ ತಂಡ ಆರಂಭದಲ್ಲಿ ಪಟ ಪಟನೇ ಮೂರು ವಿಕೆಟ್ ಕಳೆದುಕೊಂಡಿತು.

ಬಳಿಕ ಒಂದಾದ ನಾಯಕ ಕೆಎಲ್ ರಾಹುಲ್ ಮತ್ತು ದೀಪಕ್ ಹೂಡಾ ತಂಡಕ್ಕೆ ಆಧಾರವಾದರು. ಈ ಜೋಡಿ 4ನೇ ವಿಕೆಟ್‍ಗೆ 87 ರನ್ (62 ಎಸೆತ)ಗಳ ಜೊತೆಯಾಟವಾಡಿತು. ಹೂಡ 51 ರನ್ (33 ಎಸೆತ, 3 ಬೌಂಡರಿ, 3 ಸಿಕ್ಸ್) ಸಿಡಿಸಿ ಔಟ್ ಆದರು. ಬಳಿಕ ಮತ್ತೆ ಲಕ್ನೋ ಕುಸಿತಕ್ಕೊಳಗಾಯಿತು. ರಾಹುಲ್ 68 ರನ್ (50 ಎಸೆತ, 6 ಬೌಂಡರಿ, 1 ಸಿಕ್ಸ್) ಬಾರಿಸಿ 18ನೇ ಓವರ್‍ನಲ್ಲಿ ವಿಕೆಟ್ ಕೈಚೆಲ್ಲಿಕೊಂಡರು. ಕೊನೆಯಲ್ಲಿ ಆಯುಷ್ ಬದೋನಿ 19 ರನ್ (12 ಎಸೆತ, 3 ಬೌಂಡರಿ) ನೆರವಿನಿಂದ ಲಕ್ನೋ ನಿಗದಿತ ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 169 ರನ್ ಪೇರಿಸಿತು.

ಹೈದರಾಬಾದ್ ಪರ ವಾಷಿಂಗ್ಟನ್ ಸುಂದರ್, ರೊಮಾರಿಯೋ ಶೆಫರ್ಡ್, ಎನ್ ನಟರಾಜನ್ ತಲಾ 2 ವಿಕೆಟ್ ಕಿತ್ತರು.

 

Comments

Leave a Reply

Your email address will not be published. Required fields are marked *