ನಾನು ಹೇಳಿದ್ದನ್ನು ಮಾಡಿದ್ರೆ, ನನ್ನ ಟಿ-ಶರ್ಟ್ ಕ್ಯಾಮರಾ ಮುಂದೆಯೇ ತೆಗೆಯುತ್ತೇನೆ ಎಂದ ಪೂನಂ ಪಾಂಡೆ

ಬಿ’ಟೌನ್‍ನಲ್ಲಿ ಲಾಕ್‍ಆಪ್ ಶೋ ಇತ್ತೀಚೆಗೆ ಭಾರೀ ಸುದ್ದಿಯಾಗುತ್ತಿದೆ. ಅದರಲ್ಲಿಯೂ ಬಾಲಿವುಡ್ ಮಾದಕ ನಟಿ ಪೂನಂ ಪಾಂಡೆ ಅವರಿಂದ ಈ ಶೋ ಹೆಚ್ಚು ಸುದ್ದಿಯಾಗುತ್ತಿದೆ. ಇವರ ಹೇಳಿಕೆಗಳಿಂದ ಬಾಲಿವುಡ್‍ನಲ್ಲಿ ಭಾರೀ ಗಾಸಿಪ್‍ ಕ್ರಿಯೇಟ್ ಆಗುತ್ತಿದೆ. ಲಾಕ್‍ಆಪ್ ಶೋ ಪ್ರಾರಂಭವಾಗಿ 72 ದಿನ ಕಳೆದಿದ್ದು, ಪೂನಂ ಪಾಂಡೆ ಸಖತ್ ಸದ್ದು ಮಾಡುತ್ತಿದ್ದಾರೆ.

ಬಾಲಿವುಡ್ ನಟಿ ಕಂಗನಾ ರಣಾವತ್ ಲಾಕ್‍ಆಪ್ ಶೋ ಹೋಸ್ಟ್ ಮಾಡುತ್ತಿದ್ದು, ಈ ಶೋ ಪ್ರಾರಂಭವಾದಾಗಿನಿಂದ ಬಿ’ಟೌನ್‍ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಶೋನಲ್ಲಿ 16 ಸೆಲೆಬ್ರಿಟಿಗಳಿದ್ದು, ಪೂನಂ ಮಾತ್ರ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಈ ವಾರ ಪ್ರಸಾರವಾದ ಸಂಚಿಕೆಯಲ್ಲಿ ಪೂನಂ, ನನಗೆ ವೋಟ್ ಮಾಡಿ ನನ್ನನ್ನು ಉಳಿಸಿದರೆ ನಾನು ಲೈವ್ ಕ್ಯಾಮರಾ ಮುಂದೆ ಟೀ-ಶರ್ಟ್ ತೆಗೆಯುತ್ತೇನೆಂದು ಹೇಳಿದ್ದಾರೆ. ಇದನ್ನೂ ಓದಿ: ಮಿಡಲ್ ಫಿಂಗರ್ ತೋರಿಸಿದ ಪೂನಂ: ಕೈಯನ್ನ ತುಂಡು ತುಂಡಾಗಿ ಕತ್ತರಿಸ್ತೀನಿ ಎಂದ ನಟ ಆಲಿ 

ತನ್ನ ಸಹ ಸ್ಪರ್ಧಿಗಳಾದ ಅಜ್ಮಾ ಫಲ್ಲಾಹ್, ಮುನಾವರ್ ಫರುಕಿ, ಅಂಜಲಿ ಅರೋರಾ, ವಿನಿತ್ ಕಾಕರ್ ಮುಂದೆ ನನ್ನನ್ನು ಚಾರ್ಜ್‌ಶೀಟ್‍ನಿಂದ ಬಚಾವ್ ಮಾಡಿ, ನಿಮಗೆ ಸಾಪ್ರೈಸ್ ಕಾದಿದೆ ಎಂದು ಪೂನಂ ತನ್ನ ನಿರ್ಧಾರವನ್ನು ತಿಳಿಸುತ್ತಾರೆ. ಆಗ ಅವರು ಏನು ಎಂದು ಒತ್ತಾಯಿಸಿದಾಗ ಪೂನಂ ಹೇಳಲು ನಿರಾಕರಿಸುತ್ತಾರೆ. ಈ ವೇಳೆ ವಿನಿತ್, ಪೂನಂ ಸುಮ್ಮನೆ ಹೇಳುತ್ತಾಳಷ್ಟೇ ಏನೂ ಮಾಡುವುದಿಲ್ಲ ಎಂದು ಹೇಳುತ್ತಾನೆ.

ಇದರಿಂದ ಕೋಪಗೊಂಡ ಪೂನಂ ಕ್ಯಾಮರಾ ಮುಂದೆ ಬಂದು, ನಾನು ಹೇಳಿದಂತೆ ಮಾಡಿದರೆ ನನ್ನ ಟೀ-ಶರ್ಟ್ ತೆಗೆದುಹಾಕುತ್ತೇನೆ ಎಂದು ಕಿರುಚುತ್ತಾಳೆ. ಇದನ್ನು ಕೇಳಿದ ಸ್ಪರ್ಧಿಗಳು ಶಾಕ್ ಆಗಿದ್ದು, ಸುಮ್ಮನೆ ನಿಂತಿದ್ದರು. ಆಗ ಪೂನಂ ಜೋರಾಗಿ ನಗಲು ಪ್ರಾರಂಭಿಸುತ್ತಾಳೆ. ಇದನ್ನೂ ಓದಿ: ‘Lockup’ ಶೋಗೆ ಬರುವಂತೆ ವಿಲ್ ಸ್ಮಿತ್‍ಗೆ ಆಫರ್ ಕೊಟ್ಟ ಕ್ವಿನ್ ಕಂಗನಾ

Comments

Leave a Reply

Your email address will not be published. Required fields are marked *