ಇಸ್ಲಾಮಾಬಾದ್: ಪಾಕ್ ಪ್ರಧಾನಿ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿರುವ ಇಮ್ರಾನ್ ಖಾನ್ ಒಬ್ಬ ಆಟಗಾರನಾಗಿ ಕೊನೆಯ ಬಾಲ್ ವರೆಗೆ ಹೋರಾಡುತ್ತಾರೆ. ರಾಜೀನಾಮೆ ಕೊಡುವುದಿಲ್ಲ ಎಂದು ಪಾಕಿಸ್ತಾನದ ಸಚಿವ ಫವಾದ್ ಚೌಧರಿ ಟ್ವಿಟ್ಟರ್ನಲ್ಲಿ ಟ್ವೀಟ್ ಮಾಡಿದ್ದಾರೆ.

ಪಾಕ್ ಸಂಸತ್ನಲ್ಲಿ ಅವಿಶ್ವಾಸ ಮಂಡನೆ ಬಳಿಕ ಸರ್ಕಾರ ಪತನಗೊಳ್ಳುವ ಎಲ್ಲಾ ಸಾಧ್ಯತೆಗಳು ಇದ್ದು, ಪ್ರಧಾನಿ ಸ್ಥಾನಕ್ಕೆ ಇಮ್ರಾನ್ ಖಾನ್ ರಾಜೀನಾಮೆ ಕೊಡಬೇಕೆಂಬ ಕೂಗು ಜೋರಾಗಿದೆ. ಈ ನಡುವೆ ಇಮ್ರಾನ್ ಖಾನ್ ಸರ್ಕಾರದಲ್ಲಿ ಸಚಿವರಾಗಿದ್ದ ಫವಾದ್ ಚೌಧರಿ, ಇಮ್ರಾನ್ ಖಾನ್ ಆಟಗಾರ ಅವರು ಕೊನೆಯ ಬಾಲ್ ವರೆಗೂ ಆಡುತ್ತಾರೆ ರಾಜೀನಾಮೆ ನೀಡುವುದಿಲ್ಲ ಎಂದು ಉರ್ದು ಭಾಷೆಯಲ್ಲಿ ಬರೆದುಕೊಂಡು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಅಲ್ಪಮತಕ್ಕೆ ಕುಸಿದ ಇಮ್ರಾನ್ ಖಾನ್ ಸರ್ಕಾರ- ಪ್ರಧಾನಮಂತ್ರಿ ಹುದ್ದೆಗೆ ರಾಜೀನಾಮೆ ಸಾಧ್ಯತೆ

ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಯು 342 ಸಂಸದರ ಸಾಮರ್ಥ್ಯ ಹೊಂದಿದೆ. 172 ಸ್ಥಾನಗಳು ಬಹುಮತ ಸಂಖ್ಯೆಯಾಗಿದ್ದು, ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತ್ರೆಹ್ರೀಕ್ – ಎ ಇನ್ಸಾಫ್ ಪಕ್ಷ 177 ಸ್ಥಾನಗಳನ್ನು ಹೊಂದಿತ್ತು. ವಿಪಕ್ಷ ಪಿಪಿಪಿ ಬಳಿ 162 ಸ್ಥಾನಗಳಿದ್ದು, ಸರ್ಕಾರ ರಚನೆಗೆ ಇಮ್ರಾನ್ ಖಾನ್ ಪರ ಸಂಸದರನ್ನು ಸೆಳೆಯುತ್ತಿದೆ. ಇದನ್ನೂ ಓದಿ: ಚೀನಾದ ಶಾಂಫೈನಲ್ಲಿ ಲಾಕ್ಡೌನ್ ಜಾರಿ – ಭಾರತದ ಮೇಲೆ ಪರಿಣಾಮ ಏನು?
https://twitter.com/FawadPTIUpdates/status/1509104201019936771
ಈಗ ಪಿಪಿಪಿಗೆ ಎಂಕ್ಯೂಎಂ-ಪಿ ಪಕ್ಷವೂ ಬೆಂಬಲ ನೀಡುವುದಾಗಿ ಹೇಳಿರುವುದರಿಂದ ಇಮ್ರಾನ್ ಖಾನ್ ಸರ್ಕಾರ ಕುಸಿದು ಬೀಳುವುದು ಖಚಿತವಾಗಿದೆ. ನಾಳೆ ಪಾಕ್ ನ್ಯಾಷನಲ್ ಅಸೆಂಬ್ಲಿಯಲ್ಲಿ ಅವಿಶ್ವಾಸ ಗೊತ್ತುವಳಿ ಮೇಲೆ ಚರ್ಚೆ ಆರಂಭವಾಗಲಿದ್ದು, ಏಪ್ರಿಲ್ 3ಕ್ಕೆ ಮತದಾನ ನಡೆಯಲಿದೆ. ಈ ನಡುವೆ ಇಮ್ರಾನ್ ಖಾನ್ ಏನು ನಿರ್ಧಾರ ಕೈಗೊಳ್ಳುತ್ತಾರೆ? ರಾಜೀನಾಮೆಗೆ ಮುಂದಾಗುತ್ತಾರಾ? ಎಂಬ ಕುತೂಹಲ ಪಾಕ್ ರಾಜಕೀಯದಲ್ಲಿ ಮೂಡಿದೆ.

Leave a Reply