ಉಕ್ರೇನ್‌ನಲ್ಲಿ ಸಂಪೂರ್ಣ ಮಿಲಿಟರಿ ಕಾರ್ಯಾಚರಣೆ ಕಡಿತಗೊಳಿಸಲು ರಷ್ಯಾ ನಿರ್ಧಾರ

ಇಸ್ತಾಂಬುಲ್: ಉಕ್ರೇನ್‌ನ ಕೀವ್‌ ಮತ್ತು ಚೆರ್ನಿಹಿವ್‌ ಮೇಲೆ ಕೇಂದ್ರೀಕರಿಸಿದ್ದ ಸಂಪೂರ್ಣ ಮಿಲಿಟರಿ ಕಾರ್ಯಾಚರಣೆಯನ್ನು ಕಡಿಮೆಗೊಳಿಸುವುದಾಗಿ ರಷ್ಯಾ ತಿಳಿಸಿದೆ.

ಇಸ್ತಾಂಬುಲ್‌ ರಷ್ಯಾ ಮತ್ತು ಉಕ್ರೇನಿಯನ್ ಸಮಾಲೋಚನಾ ತಂಡಗಳ ನಡುವಿನ ಮಂಗಳವಾರ ʼಅರ್ಥಪೂರ್ಣʼ ಮಾತುಕತೆ ನಡೆಯಿತು. ಈ ವೇಳೆ ರಷ್ಯಾ ಮಹತ್ವದ ನಿರ್ಧಾರವನ್ನು ತಿಳಿಸಿದ್ದು, ಯುದ್ಧ ಅಂತ್ಯವಾಗುವ ಸೂಚನೆ ಸಿಕ್ಕಿದೆ. ಇದನ್ನೂ ಓದಿ: ಮಗ ಅಳುತ್ತಿದ್ದರೂ ನನ್ನ ಮೇಲೆ ಅತ್ಯಾಚಾರ ಮಾಡಿದ್ರು- ಉಕ್ರೇನ್ ಮಹಿಳೆ

ಪರಸ್ಪರ ನಂಬಿಕೆ ಹೆಚ್ಚಿಸಲು, ಹೆಚ್ಚಿನ ಮಾತುಕತೆಗೆ ಪೂರಕ ವಾತಾವರಣ ಸೃಷ್ಟಿಸಲು, ಒಪ್ಪಂದಕ್ಕೆ ಸಹಿ ಮಾಡುವ ಅಂತಿಮ ಗುರಿಯನ್ನು ಸಾಧಿಸಲು ಕೀವ್‌ ಮತ್ತು ಚೆರ್ನಿಹಿವ್ ಭಾಗಗಳಲ್ಲಿ ಮಿಲಿಟರಿ ಚಟುವಟಿಕೆಯನ್ನು ಆಮೂಲಾಗ್ರವಾಗಿ ಕಡಿಮೆ ಮಾಡಲು ನಿರ್ಧರಿಸಲಾಗಿದೆ ಎಂದು ರಷ್ಯಾದ ಉಪ ರಕ್ಷಣಾ ಸಚಿವ ಅಲೆಕ್ಸಾಂಡರ್ ಫೋಮಿನ್ ತಿಳಿಸಿದ್ದಾರೆ.

ಉಕ್ರೇನ್‌ನ ತಟಸ್ಥತೆ ಮತ್ತು ಪರಮಾಣು ಹೊಂದದ ಸ್ಥಿತಿಯ ಕುರಿತು ಒಪ್ಪಂದ ಮಾಡಿಕೊಳ್ಳುವ ಮಾತುಕತೆ ಪ್ರಾಯೋಗಿಕ ಹಂತಕ್ಕೆ ತಲುಪಿದೆ. ಅಂದರೆ ಮಿಲಿಟರಿ ಮೈತ್ರಿ ಅಥವಾ ಆತಿಥೇಯ ನೆಲೆಗಳನ್ನು ಸೇರುವುದಿಲ್ಲವೆಂದು ಉಕ್ರೇನ್‌ ಸಮಾಲೋಚಕರು ತಿಳಿಸಿದ್ದಾರೆ ಎಂದು ಅವರು ಫೋಮಿನ್ ಸ್ಪಷ್ಟಪಡಿಸಿದ್ದಾರೆ. ಇದು ʼಅರ್ಥಪೂರ್ಣʼ ಮಾತುಕತೆ ಎಂದು ರಷ್ಯಾದ ಸಮಾಲೋಚಕರು ಬಣ್ಣಿಸಿದ್ದಾರೆ. ಇದನ್ನೂ ಓದಿ: ನಮ್ಮ ದೇಶದ ಅಸ್ತಿತ್ವಕ್ಕೆ ಧಕ್ಕೆ ಬಂದರೆ ಮಾತ್ರವೇ ಪರಮಾಣು ಶಸ್ತ್ರಾಸ್ತ್ರ ಬಳಕೆ: ರಷ್ಯಾ

ಮುಖ್ಯ ಸಂಧಾನಕಾರ ವ್ಲಾಡಿಮಿರ್ ಮೆಡಿನ್‌ಸ್ಕಿ ಅವರು, ಉಕ್ರೇನ್ ಪ್ರಸ್ತಾಪಗಳನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮುಂದಿಡಲಾಗುವುದು ಎಂದು ಹೇಳಿದರು.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಫೆ.24 ರಂದು ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಸೇನಾ ಕಾರ್ಯಾಚರಣೆಯನ್ನು ಘೋಷಿಸಿದ್ದರು. ಅಂದಿನಿಂದ ರಷ್ಯಾ ಪಡೆಗಳು ಉಕ್ರೇನ್ ಮೇಲೆ ಆಕ್ರಮಣವನ್ನು ಮುಂದುವರಿಸಿದ್ದು, ಯೋಧರು, ನಾಗರಿಕರು ಸೇರಿದಂತೆ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ಝೆಲೆನ್ಸ್ಕಿ ಮೇಲೆ ಮತ್ತೊಮ್ಮೆ ದಾಳಿಗೆ ಪ್ರಯತ್ನ – ವಿಫಲವಾದ ರಷ್ಯಾ

Comments

Leave a Reply

Your email address will not be published. Required fields are marked *