ಏಪ್ರಿಲ್‌ 1 ರಂದು ಸಿದ್ದಗಂಗಾ ಮಠಕ್ಕೆ ಅಮಿತ್ ಶಾ

ತುಮಕೂರು: ಏಪ್ರಿಲ್ 1 ರಂದು ನಡೆಯಲಿರುವ ಶಿವೈಕ್ಯ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಗಳ ಜಯಂತ್ಯುತ್ಸವದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗಿಯಾಗಲಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ.

siddaganga mutt

ತುಮಕೂರಿನಲ್ಲಿ ಮಾತನಾಡಿದ ಅವರು, ಅಮಿತ್ ಶಾ ವಿಶೇಷವಾಗಿ ಮಠಕ್ಕೆ ಬರುತ್ತಿದ್ದಾರೆ. ಆ ದಿನ ಒಂದು ಸಭೆ ಇದೆ. ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ಇದೆ. ಆ ಕಾರ್ಯಕ್ರಮವನ್ನ ನಾವೆಲ್ಲರೂ ಒಟ್ಟಾಗಿ ಯಶಸ್ವಿಗೊಳಿಸಬೇಕು ಎಂದರು. ಇದನ್ನೂ ಓದಿ: ಜನರ ಭಾವನೆ ಕೆರಳಿಸಿ ಮತೀಯ ಗಲಭೆಗೆ ಅವಕಾಶ ಕೊಡಬಾರದು: ಮಂತ್ರಾಲಯ ಶ್ರೀ

ಇದೇ ವೇಳೆ ಸ್ವಾಮಿಜಿಗಳ ಶಿರವಸ್ತ್ರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯರ ಹೇಳಿಕೆ ಕುರಿತಂತೆ ಮಾತನಾಡಿದ ಅವರು, ಸಿದ್ದರಾಮಯ್ಯ ಯುನಿಫಾರ್ಮ್ ಅನ್ನು ವಿರೋಧಿಸುತ್ತಾರೆ. ಹಿಜಾಬ್ ಅನ್ನು ಸ್ವಾಗತ ಮಾಡ್ತಾರೆ. ಬಹಳ ವರ್ಷಗಳಿಂದ ದೇಶದಲ್ಲಿ ಕಾಂಗ್ರೆಸ್ ಅವರು ಇದನ್ನೇ ಮಾಡ್ಕೊಂಡು ಬಂದಿದ್ದು, ಕಾಂಗ್ರೆಸ್ ಪಕ್ಷಕ್ಕೆ ದೇಶದ ಜನ ಜಾಗ ತೋರಿಸ್ತಿದ್ದಾರೆ ಎಂದರು.

SIDDARAMAIAH

ಸತ್ಯ ಹೇಳಿ, ನಿಷ್ಠುರವಾಗಿ ಮಾತನಾಡೋಕೆ ಕಾಂಗ್ರೆಸ್ ನವರು ತಯಾರಿಲ್ಲ. ವೋಟ್ ಬ್ಯಾಂಕ್ ಗಟ್ಟಿ ಮಾಡುವಂತಹ ರಾಜಕಾರಣದ ಆಟ ಆಡುತ್ತಿದ್ದಾರೆ. ಕಳೆದ ಐದು ರಾಜ್ಯದ ಚುನಾವಣೆ ಅವರಿಗೆ ತಕ್ಕ ಪಾಠ ಕಲಿಸಿದೆ. ಇಡೀ ದೇಶದಲ್ಲಿ ಅವರನ್ನ ನಾವು ಎಲ್ಲಿದ್ದಾರೆ ಅಂತ ಹುಡುಕಬೇಕು. ಕರ್ನಾಟಕ ರಾಜ್ಯದಲ್ಲಿ ಅವರಿಗೆ ಆಕ್ಸಿಜನ್ ಕೊಟ್ಟ ಹಾಗೇ ಇದ್ದಾರೆ. ಮುಂದಿನ ಚುನಾವಣೆಯಲ್ಲಿ ಜನರೇ ಅಕ್ಸಿಜನ್ ಫೈಪ್ ಅನ್ನು ಕಿತ್ತಾಹಾಕ್ತಾರೆ.

Comments

Leave a Reply

Your email address will not be published. Required fields are marked *