ಪ್ರಿ ಆಸ್ಕರ್ ಪಾರ್ಟಿಯಲ್ಲಿ ಮೊದಲಬಾರಿ ಮಗಳ ಬಗ್ಗೆ ಮಾತನಾಡಿದ ದೇಸಿ ಗರ್ಲ್ ಪಿಗ್ಗಿ

ಬಾಲಿವುಡ್ ಮತ್ತು ಹಾಲಿವುಡ್ನಲ್ಲಿ ಮಿಂಚುತ್ತಿರುವ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ನಟನೆ ಜೊತೆಗೆ ಸಿನಿಮಾ ನಿರ್ಮಾಪಕಿ, ಉದ್ಯಮಿಯಾಗಿ ಹೆಚ್ಚು ಹೆಸರು ಮಾಡಿದ್ದಾರೆ. ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರವೂ ತಮ್ಮ ವೃತ್ತಿ ಜೀವನದ ಜೊತೆ ವೈಯಕ್ತಿಕ ಜೀವನವನ್ನೂ ಪ್ರಿಯಾಂಕಾ ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಇತ್ತೀಚೆಗೆ ಬಾಡಿಗೆ ತಾಯಿಯಿಂದ ತಾಯ್ತನ ಆನಂದಿಸುತ್ತಿರುವ ಪ್ರಿಯಾಂಕಾ ಆಸ್ಕರ್ ಪ್ರೀ ಪಾರ್ಟಿಯಲ್ಲಿ ಮೊದಲ ಬಾರಿಗೆ ತನ್ನ ಮಗಳ ಬಗ್ಗೆ ಮಾತನಾಡಿದ್ದಾರೆ.

ಆಸ್ಕರ್ 2022 ಮಾರ್ಚ್ 28 ಪ್ರಾರಂಭವಾಗಲಿದೆ. ಈ ಮೆಗಾ ಸ್ಟಾರ್-ಸ್ಟಡ್ಡ್ ಈವೆಂಟ್‌ಗೆ ಮುಂಚಿತವಾಗಿ, ಪ್ರಿ-ಆಸ್ಕರ್ ಪಾರ್ಟಿ ಬುಧವಾರ ಬೆವರ್ಲಿ ಹಿಲ್ಸ್ನಲ್ಲಿ ನಡೆಯಿತು. ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ಜೋನಾಸ್ ಈವೆಂಟ್‌ನಲ್ಲಿ ಹೋಸ್ಟ್ ಮಾಡುವವರಲ್ಲಿ ಒಬ್ಬರಾಗಿದ್ದರು. ಈ ವೇಳೆಯೂ ಅವರು ತಮ್ಮ ದೇಸಿತನವನ್ನು ಬಿಟ್ಟುಕೊಡದೆ ಸೀರೆಯುಟ್ಟು ಕಾರ್ಯಕ್ರಮವನ್ನು ಪ್ರಾರಂಭ ಮಾಡಿದರು. ಕಪ್ಪು ಬಣ್ಣದ ಸೀರೆಯುಟ್ಟ ಪ್ರಿಯಾಂಕಾ ಕಂಗೊಳಿಸುತ್ತಿದ್ದರು. ಇದನ್ನೂ ಓದಿ:  ಎದೆಹಾಲು ದಾನ ಮಾಡಿ – ಅಭಿಮಾನಿಗಳಿಗೆ ಸಿಂಡ್ರೆಲಾ ಸಂದೇಶ 

ಈ ಪಾರ್ಟಿಯಲ್ಲಿ ಪ್ರಿಯಾಂಕಾ ತನ್ನ ಸಿನಿ ಪ್ರಯಾಣ, ನಿಕ್ ಜೋನಾಸ್ ಮತ್ತು ಹಾಲಿವುಡ್‌ ಸಿನಿಮಾಗಳ ಬಗ್ಗೆ ಮಾತನಾಡಿದರು. ಈ ವೇಳೆ ಪ್ರಿಯಾಂಕಾ ತಮ್ಮ ತಾಯಿಯ ಕರ್ತವ್ಯಗಳ ಬಗ್ಗೆಯೂ ಮಾತನಾಡಿದ್ದು ಎಲ್ಲರ ಗಮನ ಸೆಳೆಯಿತು. ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

 

View this post on Instagram

 

A post shared by unfinished (@mrs_pcj)

ತನ್ನ ಭಾಷಣದಲ್ಲಿ, ಚೋಪ್ರಾ ಅವರು ಮತ್ತು ನಿಕ್ ಅವರು ಈಗ ಎಲ್ಲಿಯೂ ಹೊರಗೆ ಹೋಗದೇ ತಮ್ಮ ಮಗುವಿನ ಜೊತೆ ಹೇಗೆ ಸಮಯ ಕಳೆಯುತ್ತಾರೆ ಎಂಬುದನ್ನು ಹಾಸ್ಯ ಮಾಡುತ್ತ ಹೇಳಿದರು. ಇತ್ತೀಚೆಗೆ ನಾವು ಮನೆಬಿಟ್ಟು ಎಲ್ಲಿಯೂ ಹೋಗಿಲ್ಲ. ಇದನ್ನು ಹೇಳಲು ಇಂದು ರಾತ್ರಿ ಇಲ್ಲಿಗೆ ಬರಬೇಕಾಯಿತು. ನಿಮ್ಮೆಲ್ಲರೊಂದಿಗೆ ಊಟ ಮಾಡಿ ಎಲ್ಲರನ್ನು ಪ್ರೋತ್ಸಾಹಿಸಲು ನಾನು ತುಂಬಾ ಹೆಮ್ಮೆಪಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಇನ್‌ಸ್ಟಾದಿಂದ ನಾಗಚೈತನ್ಯನನ್ನು ಅನ್‍ಫಾಲೋ ಮಾಡಿದ ಸಮಂತಾ

Comments

Leave a Reply

Your email address will not be published. Required fields are marked *