ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 93 ಮಂದಿಯಲ್ಲಿ ಪಾಸಿಟಿವ್ ಇರುವುದು ದೃಢಪಟ್ಟಿದೆ. ಅಲ್ಲದೆ ಕೋವಿಡ್ 19 ಗೆ ಇಡೀ ರಾಜ್ಯದಲ್ಲಿ ಓರ್ವ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿಂದು 128 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಇದುವರೆಗೆ 39,03,084 ಮಂದಿ ಕೋವಿಡ್ 19ನಿಂದ ಗುಣಮುಖರಾಗಿದ್ದಾರೆ. 1,802 ಸಕ್ರಿಯ ಪ್ರಕರಣಗಳಿವೆ.

ಇಂದು ರಾಜ್ಯದಲ್ಲಿ ಓರ್ವ ಕೋವಿಡ್ 19ಗೆ ಬಲಿಯಾಗಿದ್ದು, ಇದುವರೆಗೆ 40,042 ಮಂದಿ ಕೋವಿಡ್ ನಿಂದ ಮರಣಹೊಂದಿದ್ದಾರೆ. ಇಂದಿನ ಮರಣ ಪ್ರಮಾಣ ಶೇ.1.07 ರಷ್ಟಿದೆ. ರಾಜ್ಯದ 21 ಜಿಲ್ಲೆಯಲ್ಲಿ ಶೂನ್ಯ ಪ್ರಕರಣ ವರದಿಯಾಗಿದೆ. ಬೆಂಗಳೂರು ನಗರದಲ್ಲಿ 75 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದ್ದು, ಮೃತಪಟ್ಟ ಓರ್ವ ಸಿಲಿಕಾನ್ ಸಿಟಿಯವರೇ ಆಗಿದ್ದಾರೆ. ಇದನ್ನೂ ಓದಿ: ಇದು ಉತ್ತರ ಪ್ರದೇಶ ಅಲ್ಲ, ಬಂಗಾಳ: ಬಿಜೆಪಿಗೆ ಮಮತಾ ತಿರುಗೇಟು
Vaccination coverage in 12-14 age group@cmofKarnataka @mla_sudhakar @Comm_dhfwka @MDNHM_Kar @HubballiRailway @KodaguConnect @IChangeMyCity @WeAreBangalore @bangalore @Belagavi_infra @PIBBengaluru @KarnatakaVarthe pic.twitter.com/nTcNyH6GRS
— Karnataka Health Department (@DHFWKA) March 23, 2022
ಇಂದಿನ ಹೆಲ್ತ್ ಬುಲೆಟಿನ್ ಪ್ರಕಾರ, ಬಾಗಲಕೋಟೆ 0, ಬಳ್ಳಾರಿ 1, ಬೆಳಗಾವಿ 0, ಬೆಂಗಳೂರು ಗ್ರಾಮಾಂತರ 0, ಬೆಂಗಳೂರು ನಗರ 75, ಬೀದರ್ 0, ಚಾಮರಾಜನಗರ 0, ಚಿಕ್ಕಮಗಳೂರು 0, ಚಿಕ್ಕಬಳ್ಳಾಪುರ 0, ಚಿತ್ರದುರ್ಗ 7, ದಕ್ಷಿಣ ಕನ್ನಡ 3, ದಾವಣಗೆರೆ 0, ದಾರವಾಡ 0, ಗದಗ 0, ಹಾಸನ 3, ಹಾವೇರಿ 0, ಕಲಬುರಗಿ 1, ಕೊಡಗು 0, ಕೋಲಾರ 1, ಕೊಪ್ಪಳ 0, ಮಂಡ್ಯ 0, ಮೈಸೂರು 0, ರಾಯಚೂರು 0, ರಾಮನಗರ 0, ಶಿವಮೊಗ್ಗ 0, ತುಮಕೂರು 0, ಉಡುಪಿ 1, ಉತ್ತರ ಕನ್ನಡ 0, ವಿಜಯಪುರ 1, ಯಾದಗಿರಿಯಲ್ಲಿ ಶೂನ್ಯ ಪ್ರಕರಣ ವರದಿಯಾಗಿದೆ. ಇದನ್ನೂ ಓದಿ: ಅನಾವಶ್ಯಕವಾಗಿ ಥಿಯೇಟರ್ನಿಂದ ಜೇಮ್ಸ್ ಸಿನಿಮಾ ತೆಗೆಯುವಂತಿಲ್ಲ: ಸಿಎಂ ಸ್ಪಷ್ಟನೆ
ಇಂದಿನ 23/03/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/xFCn3awCIi @CMofKarnataka @BSBommai @mla_sudhakar @Comm_dhfwka @MDNHM_Kar @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/bWtDVhfv2p
— Karnataka Health Department (@DHFWKA) March 23, 2022

Leave a Reply