ಬೀಜಿಂಗ್: ಸತತವಾಗಿ ಕಳೆದ ಒಂದು ವಾರದಿಂದಲೂ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಚೀನಾ ಇಂದು(ಸೋಮವಾರ) ರಾತ್ರಿಯಿಂದಲೇ ಲಾಕ್ಡೌನ್ ಘೋಷಿಸಿದೆ. ಉದ್ದೇಶಿತ ಲಾಕ್ಡೌನ್ ಹಾಗೂ ಪ್ರಯಾಣ ನಿರ್ಬಂಧಗಳನ್ನು ಬಳಸಿ ಚೀನಾ ಲಾಕ್ಡೌನ್ ಘೋಷಿಸಿದೆ.

ಇತ್ತೀಚಿನ ದಿನಗಳಲ್ಲಿ ಕೊರೊನಾ ರೂಪಾಂತರಿಯಾದ ಓಮಿಕ್ರಾನ್ ಚೀನಾದ ಅನೇಕ ನಗರಗಳಲ್ಲಿ ತನ್ನ ಹಿಡಿತ ಸಾಧಿಸಿದೆ. ಹಾಗಾಗಿ, ಈಶಾನ್ಯ ಭಾಗದ 2ನೇ ಅತಿದೊಡ್ಡ ನಗರವಾದ ಜಿಲಿನ್ನಲ್ಲಿ ಸೋಮವಾರ ರಾತ್ರಿಯಿಂದಲೇ ಮೂರು ದಿನಗಳ ವರೆಗೆ ಲಾಕ್ಡೌನ್ ಘೋಷಿಸಿದೆ. ಈ ಪ್ರಾಂತ್ಯದಲ್ಲಿ 4.5 ಮಿಲಿಯನ್ನಷ್ಟು ಜನಸಂಖ್ಯೆ ಇರುವುದಾಗಿ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 133 ಪ್ರಯಾಣಿಕರಿದ್ದ ಚೀನಾ ವಿಮಾನ ಪತನ
ಭಾನುವಾರ ಚೀನಾದಲ್ಲಿ 4 ಸಾವಿರಕ್ಕೂ ಅಧಿಕ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು, ರಷ್ಯಾ ಹಾಗೂ ಉತ್ತರ ಕೊರಿಯಾದ ಗಡಿಯಲ್ಲಿರುವ ಜಿಲಿನ್ ಪ್ರಾಂತ್ಯದಲ್ಲಿ ಒಟ್ಟು ಸೋಂಕಿತರ 2/3ರಷ್ಟು ಪ್ರಕರಣಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಲಾಕ್ಡೌನ್ ಘೋಷಿಸಿದ್ದ ಚಾಂಗ್ಚುನ್ನಲ್ಲಿ ನಿರ್ಬಂಧಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಮಾರ್ಚ್ 11ರಿಂದಲೇ ಇಲ್ಲಿ ಲಾಕ್ಡೌನ್ ಘೋಷಿಸಲಾಗಿದ್ದು, 2 ದಿನಗಳಿಗೊಮ್ಮೆ ಅಹಾರ ಪದಾರ್ಥಗಳ ಖರೀದಿಗೆ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಕಚ್ಚಾತೈಲ ಬೆಲೆ ಮತ್ತೆ ಶೇ.3 ಏರಿಕೆ; ಮಾರುಕಟ್ಟೆಯಿಂದ ಹೊರಬೀಳಲಿದೆಯಾ ರಷ್ಯಾ ತೈಲ

ವೈದ್ಯಕೀಯ ಸಿಬ್ಬಂದಿ ಹಾಗೂ ಸಾಂಕ್ರಾಮಿಕ ರೋಗ ನಿಯಂತ್ರಿಸಲು ಕೆಲಸ ಮಾಡುವ ಸಿಬ್ಬಂದಿಗೆ ಮಾತ್ರವೇ ಮನೆಯಿಂದ ಹೊರಬರಲು ಅವಕಾಶ ನೀಡಲಾಗಿದೆ. ಈಗಾಗಲೇ ಆಸ್ಪತ್ರೆಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಆಸ್ಪತ್ರೆಯಲ್ಲಿ ಹಾಸಿಗೆಗಳನ್ನು ವಿಸ್ತರಿಸಲು ಅಧಿಕಾರಿಗಳು ಹೆಣಗಾಡುತ್ತಿದ್ದಾರೆ. ವೈದ್ಯರು ಆರೋಗ್ಯ ವ್ಯವಸ್ಥೆ ಹದಗೆಡುತ್ತದೆ ಎಂದು ಆತಂಕ ಪಡುತ್ತಿದ್ದಾರೆ. ಜಿಲಿನ್ ಪ್ರಾಂತ್ಯದಲ್ಲಿ 8 ತಾತ್ಕಾಲಿಕ ಆಸ್ಪತ್ರೆಗಳು ಮತ್ತು 2 ಕ್ವಾರಂಟೈನ್ ಕೇಂದ್ರಗಳನನ್ನು ನಿರ್ಮಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Leave a Reply