ಪುನೀತ್ ಹುಟ್ಟು ಹಬ್ಬಕ್ಕೆ ತಮಿಳು ನಟ ವಿಶಾಲ್ ಮೆಚ್ಚುಗೆ ಕೆಲಸ

ಪುನೀತ್ ರಾಜ್ ಕುಮಾರ್ ಓದಿಸುತ್ತಿದ್ದ ಅಷ್ಟೂ ಮಕ್ಕಳನ್ನು ನಾನು ದತ್ತು ಪಡೆದುಕೊಳ್ಳುವೆ ಎಂದು ಹೇಳುವ ಮೂಲಕ ಪುನೀತ್ ಅವರ ಕನಸನ್ನು ಜೀವಂತವಾಗಿ ಇಟ್ಟರು ತಮಿಳು ನಟ ವಿಶಾಲ್. ಕನ್ನಡದ ನಟರು ಮೌನವಾಗಿದ್ದ ಆ ಹೊತ್ತಿನಲ್ಲಿ ವಿಶಾಲ್ ಮಾತು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ನಂತರ ಪುನೀತ್ ರಾಜ್ ಕುಮಾರ್ ಅವರ ಮನೆಗೂ ವಿಶಾಲ್ ಬಂದರು. ಪುನೀತ್ ಅವರ ಹೆಸರಿನಲ್ಲಿ ಏನೆಲ್ಲ ಮಾಡಬಹುದು ಎಂಬ ಚರ್ಚೆ ಕೂಡ ಮಾಡಿದ್ದಾರೆ ಎನ್ನಲಾಗುತ್ತಿದೆ. ಆ ಕೆಲಸ ಇನ್ನೂ ನಡೆಯುತ್ತಿದೆ. ಅಷ್ಟರಲ್ಲಿ ಪುನೀತ್ ಅವರ ಹೆಸರಿನಲ್ಲಿ ಮತ್ತೊಂದು ಕೆಲಸ ಮಾಡಿದ್ದಾರೆ ವಿಶಾಲ್. ಈ ಮೂಲಕ ಪುನೀತ್ ಹುಟ್ಟು ಹಬ್ಬವನ್ನು ಸಾರ್ಥಕಗೊಳಿಸಿದ್ದಾರೆ. ಇದನ್ನೂ ಓದಿ : ಚಿಕ್ಕಬಳ್ಳಾಪುರದಲ್ಲಿಆರ್.ಆರ್.ಆರ್ ಮೆಗಾ ಪ್ರೀ ರಿಲೀಸ್ ಇವೆಂಟ್ : ಏನೆಲ್ಲ ವಿಶೇಷ?

ಪುನೀತ್ ಅವರಿಗೆ ತಮ್ಮ ಹುಟ್ಟು ಹಬ್ಬದ ದಿನದಂದು ಕೇಕ್ ಕತ್ತರಿಸುವುದು, ಹಾಲಿನ ಅಭಿಷೇಕ, ಕಟೌಟ್ ಸಂಸ್ಕೃತಿ ಇದಾವುದೂ ಇಷ್ಟವಿರಲಿಲ್ಲ. ‘ನನ್ನ ಹುಟ್ಟು ಹಬ್ಬವನ್ನು ಅನಾಥರಿಗೆ, ವೃದ್ಧಾಶ್ರಮಗಳಿಗೆ, ಮಕ್ಕಳಿಗೆ ಸಹಾಯ ಮಾಡುವ ಮೂಲಕ ಆಚರಿಸಿ’ ಎಂದು ಕರೆಕೊಟ್ಟಿದ್ದರು ಅಪ್ಪು. ಅದನ್ನು ವಿಶಾಲ್ ಮಾಡಿದ್ದಾರೆ. ತಮಿಳು ನಾಡಿನ 200ಕ್ಕೂ ಹೆಚ್ಚು ವೃದ್ಧಾಶ್ರಮಗಳಿಗೆ ಅವರು ಅನ್ನದಾನ ಮಾಡಿದ್ದಾರೆ. ಇದೊಂದು ಸಾರ್ಥಕ ಕ್ಷಣವೆಂದು ಅವರು ಸೋಷಿಯಲ್ ಮೀಡಿಯಾದಲ್ಲೂ ಹೇಳಿದ್ದಾರೆ.

“ಅನ್ನದಾನ ಮಾಡಿದಾಗ ಹಿರಿಯರು ಅಪ್ಪುಗೆ ಆರ್ಶಿವಾದ ಮಾಡಿದರು. ಅವರ ಖುಷಿಯಲ್ಲಿ ನಾನು ಅಪ್ಪುವನ್ನು ಕಂಡಿದ್ದೇನೆ. ಪುನೀತ್ ಅವರಿಗೆ ಗೌರವ ಸೂಚಿಸಲು ಇದ್ದಕ್ಕಿಂತ ಉತ್ತಮ ಕೆಲಸವಿಲ್ಲ’ ಎಂದು ಅವರು ಬರೆದುಕೊಂಡಿದ್ದಾರೆ. ‘ನೀವು ನಮ್ಮೊಂದಿಗೆ ಸದಾ ಜೀವಂತ’ ಎಂದು ಹುಟ್ಟು ಹಬ್ಬಕ್ಕೂ ಹಾರೈಸಿದ್ದಾರೆ ವಿಶಾಲ್.

Comments

Leave a Reply

Your email address will not be published. Required fields are marked *