ಹಳೆಯ ಘಟನೆ ರಿವೀಲ್ – ಬೆಂಗಳೂರಿನಲ್ಲಿ ಕಾಶ್ಮೀರ ಭವನಕ್ಕೆ ಬೆಂಕಿ ಹಚ್ಚಿ ಅಡ್ಡಿ

ಬೆಂಗಳೂರು: ಮತಾಂಧರ ಭಯಕ್ಕೆ ನಲುಗಿ ಹೋಗಿದ್ದ ಕಾಶ್ಮೀರ ಪಂಡಿತರು ಪ್ರಾಣ ರಕ್ಷಣೆಗಾಗಿ ಒಂದೊಂದು ರಾಜ್ಯಕ್ಕೆ ತೆರಳಿದ್ದರು. ಹೀಗೆ ತೆರಳಿದ್ದ ಪಂಡಿತರು ಬೆಂಗಳೂರಿಗೂ ಆಗಮಿಸಿದ್ದರು.

1990ರ ದಶಕದಲ್ಲಿ ಕಾಶ್ಮೀರಿ ಪಂಡಿತರು ಬೆಂಗಳೂರಿಗೆ ಬಂದಿದ್ದರು ಎಂದು ಹಿಂದೂ ಜಾಗರಣಾ ವೇದಿಕೆಯ ಪುಟ್ಟರಂಗಶೆಟ್ಟಿ ತಿಳಿಸಿದ್ದಾರೆ. ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಕಾಶ್ಮೀರದಲ್ಲಿ ನಡೆದ ಗಲಭೆಯ ಬಳಿಕ ಕಾಶ್ಮೀರಿ ಪಂಡಿತರು ಬೆಂಗಳೂರಿಗೆ ಬಂದಿದ್ದರು. ಅವರಿಗಾಗಿ ಕಾಶ್ಮೀರ್ ಭವನ ಸಹ ಬೆಂಗಳೂರಿನಲ್ಲಿ ನಿರ್ಮಾಣವಾಗಿತ್ತು ಎಂದು ವಿವರಿಸಿದರು. ಇದನ್ನೂ ಓದಿ: ಪುರಿ ಬೀಚ್‍ನಲ್ಲಿ ಅರಳಿತು ‘ದಿ ಕಾಶ್ಮೀರ್ ಫೈಲ್ಸ್’

ವಲಸೆ ಬಂದಿದ್ದ ಪಂಡಿತರು 2000ನೇ ಇಸ್ವಿಯಲ್ಲಿ ಕಾಶ್ಮೀರಿ ಭವನ ನಿರ್ಮಾಣಕ್ಕೆ ದಿ.ಅನಂತ್ ಕುಮಾರ್‍ಗೆ ಮನವಿ ಮಾಡಿದ್ದರು. ಅವರ ಮನವಿಯನ್ನು ಸ್ವೀಕರಿಸಿದ ಅನಂತ್ ಕುಮಾರ್ ಅವರು ಎಸ್.ಎಂ.ಕೃಷ್ಣ ಅವರಿಗೆ ಮನವಿ ಮಾಡಿದ್ರು. 2003ರಲ್ಲಿ ಬೆಂಗಳೂರಿನ ತಿಲಕನಗರದಲ್ಲಿ ಛಿದ್ರವಾಗಿದ್ದ ಕಾಶ್ಮೀರ ಪಂಡಿತರಿಗಾಗಿ ಕಾಶ್ಮೀರ ಭವನಕ್ಕಾಗಿ ನಿವೇಶನ ಮಾಡಲಾಯಿತು ಎಂದು ತಿಳಿಸಿದರು.

ನಿವೇಶನ ಕೊಟ್ಟಿದ್ದೇ ಶುರುವಾಯ್ತು ಕಲಹ
ಕಾಶ್ಮೀರ ಭವನಕ್ಕೆ ಇಪ್ಪತ್ತುಸಾವಿರ ಅಡಿ ಜಾಗ ಕೊಡುತ್ತಿದ್ದಂತೆ ದೊಡ್ಡ ಗಲಭೆ ಸಂಭವಿಸಿತು. ಸ್ಥಳೀಯ ಕೆಲ ಮುಸ್ಲಿಂ ಸಂಘಟನೆಗಳು ಪ್ರತಿ ಮನೆ ಮನೆಗೂ ತೆರಳಿ ಇವರ ಭವನ ನಿರ್ಮಾಣಕ್ಕೆ ಅಡ್ಡಿಪಡಿಸುವಂತೆ ಹೇಳಿದ್ರು. ಕಾಶ್ಮೀರದಲ್ಲಿ ಪಂಡಿತರು ಮಿಲಿಟರಿ ಜೊತೆ ಗಲಾಟೆ ಮಾಡಿದ್ದಾರೆ. ಇಲ್ಲಿ ಬಂದರೆ ಬೆಂಗಳೂರು ಅವರದ್ದೇ ಆಗುತ್ತೆ ಎಂದು ತಪ್ಪು ಸಂದೇಶ ಹರಡಿಸಿದ್ದರು. ಕೊನೆಗೆ ಕೋರ್ಟ್ ಮೊರೆಯೂ ಹೋದ್ರು. ಆದರೆ ಹೈಕೋರ್ಟ್ ಸುಪ್ರೀಂಕೋರ್ಟ್‍ನಲ್ಲೂ ತೀರ್ಪು ಕಾಶ್ಮೀರ ಪಂಡಿತರ ಪರವೇ ಬಂತು. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ – ಎಲ್ಲ ಮುಸಲ್ಮಾನರು ಕೆಟ್ಟವರಲ್ಲ, ಎಲ್ಲ ಹಿಂದೂಗಳು ಒಳ್ಳೆಯವರಲ್ಲ: ಸೋಮಣ್ಣ

ಕೋರ್ಟ್‍ನಲ್ಲಿ ತೀರ್ಪು ಉಲ್ಟಾ ಆಗುತ್ತಿದ್ದಂತೆ, ಕಾಶ್ಮೀರ ಭವನ ನಿರ್ಮಾಣದ ಹಂತದಲ್ಲಿ ಇರುವಾಗಲೇ ಬೆಂಕಿ ಹಚ್ಚಲಾಯ್ತು. ಬಳಿಕ ಇದೆಲ್ಲವನ್ನು ನಾನು ಸೇರಿದಂತೆ ದಿ.ಅನಂತ್ ಕುಮಾರ್, ಅಂದಿನ ದಿ.ವಿಜಯ್ ಕುಮಾರ್ ಅಲ್ಲಿ ಸ್ಥಳೀಯರ ಮನವೊಲಿಸಲಾಯಿತು. ಕೊನೆಗೆ ಅನಂತ್ ಕುಮಾರ್ 2003ರಲ್ಲಿ ಕಾಶ್ಮೀರ ಭವನವನ್ನು ಉದ್ಘಾಟನೆ ಮಾಡಿದ್ರು ಎಂದು ನೋವಿನ ಕಥೆಯನ್ನು ಪಬ್ಲಿಕ್ ಟಿವಿ ಜೊತೆ ಬಿಚ್ಚಿಟ್ಟರು.

Comments

Leave a Reply

Your email address will not be published. Required fields are marked *